ಆಡಿ ಕ್ಯೂ6 ಎಲೆಕ್ಟ್ರಿಕ್ ಎಸ್‌ಯುವಿ 2017ರಲ್ಲಿ ಬಿಡುಗಡೆ ನಿಜನಾ?
ನಾವು ಈಗಾಗಲೇ ಆಡಿ ಹೊಸತಾದ ವಿದ್ಯುತ್ ಚಾಲಿತ ಕ್ರೀಡಾ ಬಳಕೆಯ ವಾಹನದ (ಎಸ್‌ಯುವಿ) ಬಗ್ಗೆ ಮಾಹಿತಿ ಕೊಟ್ಟಿರುತ್ತೇವೆ. ಈಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ಆಡಿ ಕ್ಯೂ6 ಎಲೆಕ್ಟ್ರಿಕ್ ಎಸ್‌ಯುವಿ 2017ನೇ ಇಸವಿಯಲ್ಲಿ ಬಿಡುಗಡೆಯಾಗಲಿದೆ.
ನೂತನ ತಂತ್ರಜ್ಞಾನ ಅವಿಷ್ಕಾರದಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಆಡಿ, ಕ್ಯೂ6 ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡುವ ಮೂಲಕ ಮೋಡಿ ಮಾಡುವ ನಿರೀಕ್ಷೆಯಲ್ಲಿದೆ.

ಆಡಿಯ ಹೊಸತಾದ ಎಲೆಕ್ಟ್ರಿಕ್ ವಾಹನ ಎಂಎಲ್‌ಬಿ ಫ್ಲ್ಯಾರ್ಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ. ಕ್ಯೂ7 ತಳಹದಿಯಲ್ಲಿ ನಿರ್ಮಾಣವಾಗಲಿರುವ ಹೊಸ ಕಾರು ಬ್ಯಾಟರಿ ಪ್ಯಾಕ್ (100kWh) ಪಡೆಯಲಿದೆ.
2017 ವರ್ಷಾಂತ್ಯದಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡುವುದು ಆಡಿ ಉದ್ದೇಶವಾಗಿದೆ. ಇದು ಆಟೋ ಜಗತ್ತಿನಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ.


Click it and Unblock the Notifications








