ಆಡಿ ಕ್ಯೂ7 ಫೇಸ್‌ಲಿಫ್ಟ್ ಬಿಡುಗಡೆಗೆ ಕ್ಷಣಗಣನೆ ಆರಂಭ

By Nagaraja

ಐಷಾರಾಮಿ ಕ್ರೀಡಾ ಬಳಕೆಯ ವಾಹನಕ್ಕೆ ಹೊಸ ಅರ್ಥವನ್ನು ಕಲ್ಪಿಸಿಕೊಟ್ಟಿರುವ ಜರ್ಮನಿಯ ಲಗ್ಷುರಿ ಕಾರು ತಯಾರಿಕ ಸಂಸ್ಥೆ ಆಡಿಯ ಫ್ಲ್ಯಾಗ್ ಶಿಪ್ ಮಾದರಿ ಕ್ಯೂ7 ಪರಿಷ್ಕೃತ ಮಾಡೆಲ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ವಾಹನ ಮೂಲಗಳಿಂದ ಬಂದಿರುವ ವರದಿಗಳ ಪ್ರಕಾರ ಆಡಿ ಕ್ಯೂ7 ಫೇಸ್ ಲಿಫ್ಟ್ ಎಸ್‌ಯುವಿ ಮುಂಬರುವ 2015 ಡಿಸೆಂಬರ್ 10ರಂದು ಬಿಡುಗಡೆಯಾಗಲಿದೆ. ಇದರೊಂದಿಗೆ ಈ ಬಹುನಿರೀಕ್ಷಿತ ಮಾದರಿಯ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

ಆಡಿ ಕ್ಯೂ7 ಫೇಸ್‌ಲಿಫ್ಟ್ ಬಿಡುಗಡೆಗೆ ಕ್ಷಣಗಣನೆ ಆರಂಭ

ಭಾರತ ರಸ್ತೆ ಪರಿಸ್ಥಿತಿಯಲ್ಲಿ ವ್ಯಾಪಕವಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಿದ ಬಳಿಕ ಆಡಿ ಕ್ಯೂ7 ಭಾರತ ಪ್ರವೇಶವಾಗುತ್ತಿದೆ. ಇದರಿಂದಾಗಿ ಭಾರತೀಯ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ಕಾರನ್ನು ಅಭಿವೃದ್ಧಿಗೊಳಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಆಡಿ ಕ್ಯೂ7 ಫೇಸ್‌ಲಿಫ್ಟ್ ಬಿಡುಗಡೆಗೆ ಕ್ಷಣಗಣನೆ ಆರಂಭ

ನಿಮ್ಮ ಮಾಹಿತಿಗಾಗಿ ವರ್ಷಾರಂಭದಲ್ಲಿ ನಡೆದ 2015 ಡೆಟ್ರಾಯ್ಟ್ ಮೋಟಾರು ಶೋದಲ್ಲಿ 2015 ಆಡಿ ಕ್ಯೂ7 ಬಿಡುಗಡೆಗೊಂಡಿತ್ತು. ಇನ್ನು ಗರಿಷ್ಠ ಇಂಧನ ಕ್ಷಮತೆಗಾಗಿ ಕಾರಿನ ಭಾರವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ.

ಆಡಿ ಕ್ಯೂ7 ಫೇಸ್‌ಲಿಫ್ಟ್ ಬಿಡುಗಡೆಗೆ ಕ್ಷಣಗಣನೆ ಆರಂಭ

ಆಡಿ ಕ್ಯೂ7 ಇತಿಹಾಸದತ್ತ ಕಣ್ಣಾಯಿಸಿದಾಗ ಈ ಲಗ್ಷುರಿ ಎಸ್ ಯುವಿ ಕಾರು 2006ರಿಂದಲೇ ಮಾರಾಟದಲ್ಲಿದೆ. ಇದರ 3.0 ಲೀಟರ್ ವಿ6 ಟಿಡಿಐ ಎಂಜಿನ್ 600 ಎನ್ ಎಂ ತಿರುಗುಬಲದಲ್ಲಿ 272 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿ ವಿತರಣೆಯಾಗಲಿದೆ.

ಆಡಿ ಕ್ಯೂ7 ಫೇಸ್‌ಲಿಫ್ಟ್ ಬಿಡುಗಡೆಗೆ ಕ್ಷಣಗಣನೆ ಆರಂಭ

ಇನ್ನುಳಿದಂತೆ ಹೊಸತಾದ ಫ್ರಂಟ್ ಗ್ರಿಲ್, ಕ್ರೋಮ್ ಸ್ಪರ್ಶ, ಎಲ್ ಇಡಿ ಡೇಟೈಮ್ ರನ್ನಿಂಗ್ಸ್ ಲೈಟ್ಸ್, ಅಲಾಯ್ ವೀಲ್, ಬಂಪರ್, ಹೆಡ್ ಲೈಟ್ ಪ್ರಮುಖ ಆಕರ್ಷಣೆಯಾಗಲಿದೆ. ಅಂತೆಯೇ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಟ್ ಆಟೋ ಸಂಪರ್ಕಿಸಬಹುದಾದ ಮಾಹಿತಿ ಮನರಂಜನಾ ವ್ಯವಸ್ಥೆಯು ಇದರಲ್ಲಿರಲಿದೆ.

ಆಡಿ ಕ್ಯೂ7 ಫೇಸ್‌ಲಿಫ್ಟ್ ಬಿಡುಗಡೆಗೆ ಕ್ಷಣಗಣನೆ ಆರಂಭ

ಈಗ ನಿಮ್ಮ ನೆಚ್ಚಿನ ಆಡಿ ಕಾರಿನ ಬಗ್ಗೆ ಅನಿಸಿಕೆಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.

More from DriveSpark

Article Published On: Saturday, December 5, 2015, 15:03 [IST]
English summary
Audi To Offer Q7 Facelift in India From December 10, 2015
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+