ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಲಾಂಚ್; ಬೆಲೆ ಜಸ್ಟ್ 62.96 ಲಕ್ಷ
ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಆಡಿ ಅತಿ ನೂತನ ಎಸ್5 ಸ್ಪೋರ್ಟ್ ಬ್ಯಾಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 62.96 ಲಕ್ಷ ರು.ಗಳಾಗಿರಲಿದೆ.
ಆಡಿ ಎಸ್5 ಸ್ಪೋರ್ಟ್ ಬ್ಯಾಕ್ ಇದಕ್ಕೂ ಮೊದಲೇ ಮಾರುಕಟ್ಟೆ ಪ್ರವೇಶಿಸಬೇಕಾಗಿತ್ತು. ಆದರೆ ಹಲವಾರು ಕಾರಣಗಳಿಂದಾಗಿ ಬಿಡುಗಡೆ ತಡವಾಗಿದೆ. ಕೊನೆಗೂ ದಶರಾ ಹಾಗೂ ದೀಪಾವಳಿ ಹಬ್ಬದ ಸಂಭ್ರಮದ ವೇಳೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ನೂತನ ಆಡಿ ಎಸ್5 ಸ್ಪೋರ್ಟ್ ಬ್ಯಾಕ್, 3.0 ಲೀಟರ್ ವಿ6 ಟಿಎಫ್‌ಎಸ್‌ಐ ಟರ್ಬೊಚಾರ್ಜ್ಡ್ ಡೈರಕ್ಟ್ ಇಂಜೆಕ್ಷನ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 440 ಎನ್ ಎಂ ತಿರುಗುಬಲದಲ್ಲಿ 328 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಏಳು ಸ್ಪೀಡ್ ಎಸ್ ಟ್ರಾನಿಕ್ ಡಿಎಸ್ ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.
ಭದ್ರತೆ
- ಎಂಟು ಏರ್ ಬ್ಯಾಗ್,
- ಎಲೆಕ್ಟ್ರಾನಿಕ್ ಸ್ಟೆಬಿಲೈಸೇಷನ್ ಕಂಟ್ರೋಲ್ ಜೊತೆ ಬ್ರೇಕ್ ಅಸಿಸ್ಟ್,
- ಎಬಿಎಸ್ ಜೊತೆ ಇಬಿಡಿ,
- ತಂಡೆಮ್ ಬ್ರೇಕ್ ಬೂಸ್ಟರ್,
- ಡಿಸ್ಕ್ ಬ್ರೇಕ್,
- ಕ್ರೂಸ್ ಕಂಟ್ರೋಲ್,
- ಆಟೋಮ್ಯಾಟಿಕ್ ಬ್ರೇಕಿಂಗ್ ಇಂಟರ್‌ವೆನ್ಷನ್






Click it and Unblock the Notifications