ಪ್ರೇಮಿಗಳ ಮಾಸದಲ್ಲಿ ವಾಹನ ಜಗತ್ತಿನಲ್ಲಿ ಮಿಶ್ರ ಪ್ರತಿಕ್ರಿಯೆ
ಫೆಬ್ರವರಿ ತಿಂಗಳಲ್ಲಿ ಪ್ರೇಮಿಗಳ ದಿನಾಚರಣೆ ಆಚರಿಸುವುದರಿಂದ ಸಹಜವಾಗಿಯೇ ಈ ತಿಂಗಳನ್ನು ಪ್ರೇಮಿಗಳ ಮಾಸ ಎಂದೇ ವಿಶ್ಲೇಷಿಸಲಾಗುತ್ತದೆ.
ಈ ಫೆಬ್ರವರಿ ತಿಂಗಳು ವಾಹನ ಜಗತ್ತಿನ ಪಾಲಿಗೆ ಹೇಗಿತ್ತು? ಮಾರಾಟ ಸಂಖ್ಯೆಯನ್ನು ನೋಡಿದಾಗ ಮಿಶ್ರ ಪ್ರತಿಕ್ರಿಯೆ ದಾಖಲಾಗಿರುವುದು ಕಂಡುಬಂದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಕೆಳಗಡೆಮುಂದುವರಿಯಿರಿ.

ಮಾರುತಿ ಸುಜುಕಿ
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ 2015 ಫೆಬ್ರವರಿ ತಿಂಗಳ ಮಾರಾಟದಲ್ಲಿ ಶೇಕಡಾ 8.7ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಸಂಸ್ಥೆಯು 118,551 ಯುನಿಟ್‌ಗಳ ಮಾರಾಟ ಕಂಡುಬಂದಿದೆ. ಕಳೆದ ವರ್ಷ ಇದೇ ಸಮಯಕ್ಕೆ 109,104 ಯುನಿಟ್ ಮಾತ್ರ ಮಾರಾಟ ಸಾಧಿಸಿತ್ತು.
ದೇಶಿಯ ಮಾರಾಟ (ಯುನಿಟ್‌ಗಳಲ್ಲಿ) - ಶೇ. 8.2ರಷ್ಟು ಏರಿಕೆ
- 2015 ಫೆಬ್ರವರಿ - 107,892
- 2014 ಫೆಬ್ರವರಿ - 99,758

ಹ್ಯುಂಡೈ
ಚೆನ್ನೈ ತಳಹದಿಯ ಹ್ಯುಂಡೈ ವಾಹನ ತಯಾರಿಕ ಸಂಸ್ಥೆಯು 2015 ಫೆಬ್ರವರಿ ತಿಂಗಳಲ್ಲಿ ಒಟ್ಟಾರೆಯಾಗಿ ಶೇಕಡಾ 2.4ರಷ್ಟು ಏರುಗತಿ ಸಾಧಿಸಿದೆ. ಈ ತಿಂಗಳಲ್ಲಿ ಸಂಸ್ಥೆಯು 47,612 ಯುನಿಟ್‌ಗಳಷ್ಟು ಮಾರಾಟ ಕಂಡಿದೆ. ಕಳೆದ ವರ್ಷವಿದು 46,505 ಯುನಿಟ್‌ಗಳಾಗಿತ್ತು.
ದೇಶಿಯ ಮಾರಾಟ (ಯುನಿಟ್‌ಗಳಲ್ಲಿ) - ಶೇ. 9.7ರಷ್ಟು ಏರಿಕೆ
- 2015 ಫೆಬ್ರವರಿ - 37,305
- 2014 ಫೆಬ್ರವರಿ - 34,005

ಹೊಸತಾದ ಬೋಲ್ಟ್ ಹಾಗೂ ಜೆಸ್ಟ್ ಮಾದರಿಗಳ ಬೆಂಬಲದೊಂದಿಗೆ ಟಾಟಾ ಸಂಸ್ಥೆಯು 2015 ಫೆಬ್ರವರಿ ತಿಂಗಳಲ್ಲಿ ಶೇಕಡಾ 11ರಷ್ಟು ಏರಿಕೆ ಸಾಧಿಸಿದೆ. ಈ ಅವಧಿಯಲ್ಲಿ ಸಂಸ್ಥೆಯು 44,225 ಯುನಿಟ್‌ಗಳ ಮಾರಾಟ ಸಾಧಿಸಿದ್ದು, ಕಳೆದ ವರ್ಷವಿದು 39,951 ಯುನಿಟ್‌ಗಳಾಗಿತ್ತು.
ದೇಶಿಯ ಮಾರಾಟ (ಯುನಿಟ್‌ಗಳಲ್ಲಿ) - ಶೇ.14ರಷ್ಟು ಏರಿಕೆ
- 2015 ಫೆಬ್ರವರಿ - 40,314
- 2014 ಫೆಬ್ರವರಿ - 35,315

ಇವೆಲ್ಲದರಕ್ಕಿಂತಲೂ ವಿರುದ್ಧವಾಗಿ 2015 ಫೆಬ್ರವರಿ ತಿಂಗಳಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಮಾರಾಟವು ಶೇಕಡಾ 11ರಷ್ಟು ಕುಸಿದಿದೆ. ಈ ಅವಧಿಯಲ್ಲಿ ಸಂಸ್ಥೆಯು 38,033 ಯುನಿಟ್‌ಗಳ ಮಾರಾಟ ಕಂಡಿದ್ದು, ಕಳೆದ ವರ್ಷವಿದು 42,166 ಯುನಿಟ್‌ಗಳಾಗಿತ್ತು.
ದೇಶಿಯ ಮಾರಾಟ (ಯುನಿಟ್‌ಗಳಲ್ಲಿ) - ಶೇ.11ರಷ್ಟು ಇಳಿಕೆ
- 2015 ಫೆಬ್ರವರಿ - 34,918
- 2014 ಫೆಬ್ರವರಿ - 39,338

ಹಾಗಿದ್ದರೂ 2015 ಫೆಬ್ರವರಿಯಲ್ಲಿ 13,280 ಯುನಿಟ್‌ಗಳಷ್ಟು ಮಾರಾಟ ಸಾಧಿಸಿರುವ ಟೊಯೊಟಾ ಶೇಕಡಾ 17ರಷ್ಟು ಮಾರಾಟ ಏರಿಕೆ ದಾಖಲಿಸಿದೆ. ಕಳೆದ ವರ್ಷವಿದು 11,286 ಯುನಿಟ್‌ಗಳಾಗಿತ್ತು.

ಮಗದೊಂದು ಜಪಾನ್ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಕೂಡಾ ತನ್ನೆಲ್ಲ ಶ್ರೇಣಿಯ ವಾಹನಗಳ ಬೆಂಬಲದೊಂದಿಗೆ 2015 ಫೆಬ್ರವರಿ ತಿಂಗಳಲ್ಲಿ ಶೇಕಡಾ 16ರಷ್ಟು ಮಾರಾಟ ಏರಿಕೆ ಸಾಧಿಸಿದೆ. ಸಂಸ್ಥೆಯು ಈ ಅವಧಿಯಲ್ಲಿ 16,902 ಯುನಿಟ್‌ಗಳ ಮಾರಾಟ ದಾಖಲಿಸಿದ್ದರೆ ಕಳೆದ ಬಾರಿಯಿದು 14,543 ಯುನಿಟ್‌ಗಳಾಗಿತ್ತು.

ಜನರಲ್ ಮೋಟಾರ್ಸ್
ಇನ್ನು ಭಾರತದಲ್ಲಿ ಷೆವರ್ಲೆ ಮಾದರಿಗಳನ್ನು ಪರಿಚಯಿಸುತ್ತಿರುವ ಅಮೆರಿಕ ತಳಹದಿಯ ಜನರಲ್ ಮೋಟಾರ್ಸ್ 2015 ಫೆಬ್ರವರಿ ತಿಂಗಳಲ್ಲಿ ದೊಪ್ಪನೆ ಶೇಕಡಾ 22.95ರಷ್ಟು ಕುಸಿತ ಕಂಡಿದೆ. ಸಂಸ್ಥೆಯು ಈ ಅವಧಿಯಲ್ಲಿ 4,320 ಯುನಿಟ್‌ಗಳ ಮಾರಾಟ ಕಂಡಿದೆ. ಕಳೆದ ವರ್ಷವಿದು 5,607 ಯುನಿಟ್‌ಗಳಾಗಿತ್ತು.

ಟಿವಿಎಸ್ ಮೋಟಾರ್ಸ್ ಕಂಪೆನಿ
ಏತನ್ಮಧ್ಯೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರ್ಸ್ ಕಂಪನಿಯು 2015 ಫೆಬ್ರವರಿ ತಿಂಗಳಲ್ಲಿ ಶೇಕಡಾ 15ರಷ್ಟು ಮಾರಾಟ ಏರಿಕೆ ಕಂಡಿದೆ.
2015 ಫೆಬ್ರವರಿ (ಯುನಿಟ್‌ಗಳಲ್ಲಿ)
ಒಟ್ಟು ಮಾರಾಟ - 204,565
- ದ್ವಿಚಕ್ರ ವಾಹನ ಮಾರಾಟ - 195,509
- ತ್ರಿಚಕ್ರ ವಾಹನ ಮಾರಾಟ - 9056
2014 ಫೆಬ್ರವರಿ (ಯುನಿಟ್‌ಗಳಲ್ಲಿ)
ಒಟ್ಟು ಮಾರಾಟ - 177,662
- ದ್ವಿಚಕ್ರ ವಾಹನ ಮಾರಾಟ - 170,293
- ತ್ರಿಚಕ್ರ ವಾಹನ ಮಾರಾಟ - 7,369

ಈ ನಡುವೆ ಬಜಾಟ್ ಆಟೋ ಮಾರಾಟವು ಶೇಕಡಾ 22ರಷ್ಟು ಕುಸಿದಿದೆ.
- 2015 ಫೆಬ್ರವರಿ (ಯುನಿಟ್‌ಗಳಲ್ಲಿ) - 243,319
- 2014 ಫೆಬ್ರವರಿ (ಯುನಿಟ್‌ಗಳಲ್ಲಿ) - 313,294

ದೇಶದ ನಂ.1 ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಮಾರಾಟ ಸಹ ಶೇಕಡಾ 3.85ರಷ್ಟು ಕುಸಿತ ಕಂಡುಬಂದಿರುವುದು ಅಚ್ಚರಿಗೆ ಕಾರಣವಾಗಿದೆ. ಸಂಸ್ಥೆಯು 2015 ಫೆಬ್ರವರಿ ತಿಂಗಳಲ್ಲಿ 484,769 ಯುನಿಟ್‌ಗಳ ಮಾರಾಟ ಮಾತ್ರ ದಾಖಲಿಸಿಕೊಂಡಿದೆ. ಕಳೆದ ವರ್ಷವಿದು 504,181 ಯುನಿಟ್‌ಗಳಿಷ್ಟಿತ್ತು.

ಹೋಂಡಾ ಮೋಟಾರ್‌ಸೈಕಲ್
ಆದರೆ ಹೀರೊಗೆ ನಿಕಟ ಪೈಪೋಟಿ ಒಟ್ಟುತ್ತಿರುವ ಹೋಂಡಾ ಮೋಟಾರ್‌ಸೈಕಲ್ 3,61,493 ಯುನಿಟ್‌ಗಳ ಮಾರಾಟ ಕಂಡುಕೊಳ್ಳುವ ಮೂಲಕ 2015 ಫೆಬ್ರವರಿ ತಿಂಗಳಲ್ಲಿ ಶೇಕಡಾ 10ರಷ್ಟು ಭರ್ಜರಿ ಮಾರಾಟ ಏರಿಕೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಸ್ಥೆಯು 3,28,468 ಯುನಿಟ್‌ಗಳ ಮಾರಾಟ ಸಾಧಿಸಿತ್ತು.


Click it and Unblock the Notifications








