ಬಿಎಂಡಬ್ಲ್ಯುನಿಂದ 250 ಕೀ.ಮೀ. ಮೈಲೇಜ್ ನೀಡುವ ಕಾರು?

By Nagaraja

ಅಬ್ಬಬ್ಬಾ, ಇದೇನಿದು! ಸಾಮಾನ್ಯ ಕಾರು ಪ್ರತಿ ಲೀಟರ್‌ಗೆ 30 ಕೀ.ಮೀ. ಮೈಲೇಜ್ ನೀಡುವುದೇ ಕಷ್ಟ. ಹಾಗಿರುವಾಗ ಪ್ರತಿ ಲೀಟರ್ ಗೆ 250 ಕೀ.ಮೀ. ಮೈಲೇಜ್ ನೀಡುವ ಕಾರಿನ ನಿರ್ಮಾಣ ಹೇಗೆ ಸಾಧ್ಯ?

ಹಾಗೆಂದ ಮಾತ್ರಕ್ಕೆ ದೇಶದ ಅತಿ ಇಂಧನ ಕ್ಷಮತೆಯ ಕಾರೆನಿಸಿಕೊಂಡಿರುವ ಈಗಷ್ಟೇ ಬಿಡುಗಡೆಗೊಂಡಿರುವ ಮಾರುತಿ ಸೆಲೆರಿಗೊ ಪ್ರತಿ ಲೀಟರ್ ಗೆ ಗರಿಷ್ಠ 27.62 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಈ ಎಲ್ಲದರ ನಡುವೆ ಜರ್ಮನಿಯ ಬಿಎಂಡಬ್ಲ್ಯು ಮೈಲೇಜ್ ವಿಚಾರದಲ್ಲಿ ಹೇಗೆ ಮೋಡಿ ಮಾಡಲಿದೆ ಎಂಬುದು ಬಹಳ ಕುತೂಹಲವೆನಿಸಿದೆ.

ಬಿಎಂಡಬ್ಲ್ಯುನಿಂದ 250 ಕೀ.ಮೀ. ಮೈಲೇಜ್ ನೀಡುವ ಕಾರು?

ವಾಹನೋದ್ಯಮದ ನಿಕಟ ಮೂಲಗಳಿಂದ ಬಂದಿರುವ ವರದಿಗಳ ಪ್ರಕಾರ ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ನೂತನ ಕಾರಿನ ಅಭಿವೃದ್ಧಿಯಲ್ಲಿ ತೊಡಗಿದ್ದು, ಇದು ಪ್ರತಿ 100 ಕೀ.ಮೀ.ಗೆ 0.41 ಇಂಧನವಷ್ಟೇ ವ್ಯಯ ಮಾಡಲಿದೆ.

ಬಿಎಂಡಬ್ಲ್ಯುನಿಂದ 250 ಕೀ.ಮೀ. ಮೈಲೇಜ್ ನೀಡುವ ಕಾರು?

ತಾಂತ್ರಿಕವಾಗಿ ಇದು ಪ್ರತಿ ಲೀಟರ್‌ಗೆ 250 ಕೀ.ಮೀ. ಮೈಲೇಜ್‌ಗೆ ಸಮಾನವಾಗಿದೆ. ಹೀಗೆ ಜಗತ್ತಿನ ಅತ್ಯಂತ ಇಂಧನ ದಕ್ಷತೆಯ ಕಾರು ನಿರ್ಮಾಣದಲ್ಲಿ ಬಿಎಂಡಬ್ಲ್ಯು ತೊಡಗಿಸಿಕೊಂಡಿದೆ.

ಬಿಎಂಡಬ್ಲ್ಯುನಿಂದ 250 ಕೀ.ಮೀ. ಮೈಲೇಜ್ ನೀಡುವ ಕಾರು?

ಅಷ್ಟಕ್ಕೂ ಇದು ಹೇಗೆ ಸಾಧ್ಯವಾಯಿತು? ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಪ್ರಸ್ತುತ ಕಾರಿನಲ್ಲಿ ಕಾರ್ಬನ್ ಫೈಬರ್ ಪ್ಲಾಸ್ಟಿಕ್ ದೇಹ ವಿನ್ಯಾಸವನ್ನು ರಚಿಸಲಾಗಿದ್ದು, ಬರೋಬ್ಬರಿ 1200 ಕೆ.ಜಿಗಳಷ್ಟು ಒಟ್ಟಾರೆ ಭಾರವನ್ನು ತಗ್ಗಿಸಲಾಗಿದೆ.

ಬಿಎಂಡಬ್ಲ್ಯುನಿಂದ 250 ಕೀ.ಮೀ. ಮೈಲೇಜ್ ನೀಡುವ ಕಾರು?

ಈ ಕಾರಿನಲ್ಲಿ ಯಾವ ವಿಧದ ಎಂಜಿನ್ ಬಳಕೆಯಾಗಲಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ವರದಿಗಳ ಪ್ರಕಾರ 2 ಸಿಲಿಂಡರ್ ಪೆಟ್ರೋಲ್ ಎಂಜಿನ್ ಬಳಕೆಯಾಗಲಿದೆ.

ಬಿಎಂಡಬ್ಲ್ಯುನಿಂದ 250 ಕೀ.ಮೀ. ಮೈಲೇಜ್ ನೀಡುವ ಕಾರು?

ಹೆಚ್ಚು ಪರಿಸರ ಸ್ನೇಹಿ ಎಂದೆನಿಸಿಕೊಳ್ಳಲಿರುವ ಬಿಎಂಡಬ್ಲ್ಯು ನೂತನ ಕಾರು ಪ್ರತಿ ಲೀಟರ್ ಗೆ 10 ಗ್ರಾಂಗಳಷ್ಟೇ ಕಾರ್ಬನ್ ಡೈ ಓಕ್ಸೈಡ್ ಹೊರ ಸೂಸಲಿದೆ.

ಬಿಎಂಡಬ್ಲ್ಯುನಿಂದ 250 ಕೀ.ಮೀ. ಮೈಲೇಜ್ ನೀಡುವ ಕಾರು?

ಪ್ರಸ್ತುತ ಫೋಕ್ಸ್ ವ್ಯಾಗನ್ ಎಕ್ಸ್ ಎಲ್1 ಪ್ಲಗ್ ಇನ್ ಹೈಬ್ರಿಡ್ ಮಾದರಿಯು ಪ್ರತಿ ಲೀಟರ್ ಗೆ 111 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 800 ಸಿಸಿ ಟಿಡಿಐ 2 ಸಿಲಿಂಡರ್ ಡೀಸೆಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಆಳವಡಿಸಲಾಗಿದೆ.

More from DriveSpark

Article Published On: Thursday, June 18, 2015, 11:45 [IST]
English summary
BMW Car That Will Return 250kmpl Mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+