2016ರಲ್ಲಿ ಬಿಎಂಡಬ್ಲ್ಯು ಶಕ್ತಿಶಾಲಿ ಎಂ2 ಕೂಪೆ ಭಾರತಕ್ಕೆ
ಈಗಷ್ಟೇ ಎಕ್ಸ್5ಎಂ ಮತ್ತು ಎಕ್ಸ್6ಎಂ ಶಕ್ತಿಶಾಲಿ ಎಸ್‌ಯುವಿ ಕಾರುಗಳನ್ನು ದೇಶಕ್ಕೆ ಪರಿಚಯಿಸಿರುವ ಜರ್ಮನಿ ಮೂಲದ ಪ್ರಖ್ಯಾತ ಸಂಸ್ಥೆ ಬಿಎಂಡಬ್ಲ್ಯು, ಮಗದೊಂದು ನಿರ್ವಹಣಾ ಕಾರನ್ನು ದೇಶಕ್ಕೆ ಪರಿಚಯಿಸಲಿದೆ. ಬಲ್ಲ ಮೂಲಗಳ ಪ್ರಕಾರ ಬಿಎಂಡಬ್ಲ್ಯು ಎಂ2 ಪವರ್‌ಫುಲ್ ಕಾರು 2016ನೇ ಸಾಲಿನ ಮಧ್ಯಂತರ ಅವಧಿಯಲ್ಲಿ ದೇಶಕವನ್ನು ತಲುಪಲಿದೆ.
Also Read: ಬಿಎಂಡಬ್ಲ್ಯು ಶಕ್ತಿಶಾಲಿ ಎಕ್ಸ್5ಎಂ, ಎಕ್ಸ್6ಎಂ ಬಿಡುಗಡೆ ಮುಂದಕ್ಕೆ ಓದಿ
ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ತಲುಪಿರುವ ಬಿಎಂಡಬ್ಲ್ಯು ಎಂ2 ಕಾರಿನಡಿಯಲ್ಲಿ ಸಿಕ್ಸ್ ಸಿಲಿಂಡರ್ 3.0 ಲೀಟರ್ ಟರ್ಬೊ ಚಾರ್ಜ್ಡ್ ಎಂಜಿನ್ ಇದಲಿದೆ. ಇದು 465.03 ಎನ್‌ಎಂ ತಿರುಗುಬಲದಲ್ಲಿ 365 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಆರು ಚಾಲನಾ ವಿಧಗಳನ್ನು ಹೊಂದಲಿರುವ ಬಿಎಂಡಬ್ಲ್ಯು ಎಂ2 ಕೂಪೆ, ಏಳು ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಲ್ಲಿ ಪರಿಚಯವಾಗಲಿದೆ. ಇದು ನಿರ್ವಹಣಾ ಕಾರು ಪ್ರಿಯರಿಗೆ ಗರಿಷ್ಠ ಚಾಲನಾ ಅನುಭವ ನೀಡಲಿದೆ.
ಬಿಎಂಡಬ್ಲ್ಯು ಎಂ2 ಒಂದು ರಿಯರ್ ವೀಲ್ ಡ್ರೈವ್ ಕಾರಾಗಿದ್ದು, ವಿದ್ಯುನ್ಮಾನ ನಿಯಂತ್ರಿತ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಚಲಿಸಲಿದೆ. ಅಂತೆಯೇ ಕೇವಲ 4.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ವೇಗವರ್ಧಿಸಲಿದೆ.

ಇನ್ನು ತುರ್ತು ಬ್ರೇಕಿಂಗ್ ಗಾಗಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯವಿರಲಿದೆ. ಅಂತೆಯೇ ಗರಿಷ್ಠ ಏರೋಡೈನಾಮಿಕ್ ಕ್ಷಮತೆಗಾಗಿ ಎಂ2 ಬಾಡಿ ಕಿಟ್ ಸಹ ಲಭ್ಯವಿರುವುದು. ಇನ್ನುಳಿದಂತೆ ಹಿಂದುಗಡೆ ಸ್ಪಾಯ್ಲರ್, ನಾಲ್ಕು ಎಕ್ಸಾಸ್ಟ್ ಕೊಳವೆಗಳು ಬಿಎಂಡಬ್ಲ್ಯು ಎಂ2 ಕಾರಿಗೆ ಹೆಚ್ಚಿನ ಕ್ರೀಡಾತ್ಮಕ ವಿನ್ಯಾಸ ಕಲ್ಪಿಸಿಕೊಡಲಿದೆ.
ಅಂದ ಹಾಗೆ ಮುಂದಿನ ವರ್ಷಾರಂಭದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿರುವ ಬಿಎಂಡಬ್ಲ್ಯು ಎಂ2 ತದಾ ಬಳಿಕ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ದೇಶದ ಮಾರುಕಟ್ಟೆಯನ್ನು ತಲುಪಲಿದೆ.





Click it and Unblock the Notifications