ಬಿಎಂಡಬ್ಲ್ಯು ಎಕ್ಸ್6 ಜಸ್ಟ್ 1.15 ಕೋಟಿ; ಸೊ ವಾಟ್..?
ಜರ್ಮನಿಯ ಪ್ರೀಮಿಯಂ ಕಾರು ತಯಾರಿಕ ಸಂಸ್ಥೆ ಬಿಎಂಡಬ್ಲ್ಯು, ಭಾರತ ಮಾರುಕಟ್ಟೆಯಲ್ಲಿ ಅತಿ ನೂತನ ಎಕ್ಸ್6 ಐಷಾರಾಮಿ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್ (ಎಸ್‌ಎವಿ) ಬಿಡುಗಡೆ ಮಾಡಿದೆ.
ಬೆಲೆ ಮಾಹಿತಿ: 1.15 ಕೋಟಿ ರು. (ಎಕ್ಸ್ ಶೋ ರೂಂ)
ಸಾಮಾನ್ಯವಾಗಿ ಕ್ರೀಡಾ ಬಳಕೆಯ ವಾಹನಗಳನ್ನು ಎಸ್‌ಯುವಿ ಎಂದು ವಿಶ್ಲೇಷಿಸಲಾಗುತ್ತದೆ. ಆದರೆ ಬಿಎಂಡಬ್ಲ್ಯು ತನ್ನ ಹೊಸ ಎಸ್‌ಯುವಿ ಕಾರನ್ನು ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಅಥವಾ ಎಸ್‌ಎವಿ ಎಂದು ವಿಶಿಷ್ಟವಾಗಿ ಹೆಸರಿಸಿಕೊಂಡಿದೆ.

ಎಂಜಿನ್ ತಾಂತ್ರಿಕತೆ
ಈ ಎರಡನೇ ತಲೆಮಾರಿನ ಕ್ರೀಡಾ ಬಳಕೆಯ ವಾಹನವು 3.0 ಲೀಟರ್ ಟ್ವಿನ್ ಟರ್ಬೊ ಸಿಕ್ಸ್ ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 308.7 ಅಶ್ವಶಕ್ತಿ (630 ತಿರುಗುಬಲ) ಉತ್ಪಾದಿಸಲಿದೆ.

ವರ್ಷಾಂತ್ಯಕ್ಕೆ ಶಕ್ತಿಶಾಲಿ ಮಾದರಿ...
ಅದೇ ಹೊತ್ತಿಗೆ ಅತ್ಯಂತ ಶಕ್ತಿಶಾಲಿ ಎಕ್ಸ್6 ಮೋಟಾರ್ ಸ್ಪೋರ್ಟ್ಸ್ ಅಥವಾ ಎಂ ವರ್ಷನ್ 2015 ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನು ಸಂಸ್ಥೆಯು ಸ್ಪಷ್ಟಪಡಿಸಿದೆ. ಇದು 4.4 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದ್ದು, 750 ಎನ್‌ಎಂ ತಿರುಗುಬಲದಲ್ಲಿ ಬರೋಬ್ಬರಿ 553 ಅಶ್ವಶಕ್ತಿ ಉತ್ಪಾದಿಸಲಿದೆ.

ಗಮನಾರ್ಹ ವೈಶಿಷ್ಟ್ಯಗಳು
- ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್,
- ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್,
- ಹಿಲ್ ಡಿಸೆಂಟ್ ಕಂಟ್ರೋಲ್,
- ಕಾರ್ನರಿಂಗ್ ಬ್ರೇಕ್ ಕಂಟ್ರೋಲ್,
- ಆರು ಏರ್ ಬ್ಯಾಗ್

ಎಲ್ಲ ಹೊಸತನದಿಂದ ಕೂಡಿರುವ ಫ್ರಂಟ್ ಹಾಗೂ ರಿಯರ್ ಬಂಪರ್ ನೂತನ ಎಕ್ಸ್6 ಮಾದರಿಗೆ ತಾಜಾತನವನ್ನು ನೀಡಲಿದೆ. ಅಲ್ಲದೆ ಸಂಸ್ಥೆಯ ಐಕಾನಿಕ್ ಸಿಗ್ನೇಚರ್ ಕಿಡ್ನಿ ಗ್ರಿಲ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಪ್ರೀಮಿಯಂ ವಿಭಾಗದ ಕಾರುಗಳಲ್ಲಿ ಗರಿಷ್ಠ ಮಾರಾಟವನ್ನು ಗುರಿಯಿರಿಸಿಕೊಂಡಿರುವ ಬಿಎಂಡಬ್ಲ್ಯು ಪ್ರಸಕ್ತ ಸಾಲಿನಲ್ಲೇ ಮತ್ತಷ್ಟು ಐಷಾರಾಮಿ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದೆ.


Click it and Unblock the Notifications