ಅತಿ ಶೀಘ್ರದಲ್ಲೇ ಬಿಎಂಡಬ್ಲ್ಯು ಎಕ್ಸ್6 ಬಿಡುಗಡೆ
ಜರ್ಮನಿ ಮೂಲದ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಭಾರತದಲ್ಲಿ ಅತಿ ನೂತನ ಎಕ್ಸ್6 ಮಾದರಿಯನ್ನು ಇದೇ ಮುಂಬರುವ 2015 ಜುಲೈ 23ರಂದು ಬಿಡುಗಡೆ ಮಾಡಲಿದೆ.
ಬಿಎಂಡಬ್ಲ್ಯು ಫ್ಲ್ಯಾಗ್ ಶಿಪ್ ಕ್ರೀಡಾ ಬಳಕೆಯ ವಾಹನವಾಗಿರುವ ಎಕ್ಸ್6 ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಭಾರತ ವಾಹನ ಮಾರುಕಟ್ಟೆಯನ್ನು ತಲುಪುತ್ತಿದೆ.

ಪ್ರಸ್ತುತ ಕಾರು ಹಿಂದಿನ ಮಾದರಿಗಿಂತಲೂ 40 ಕೆ.ಜಿ.ಗಳಷ್ಟು ಕಡಿಮೆ ಭಾರವನ್ನು ಹೊಂದಿರಲಿದ್ದು, ಹೆಚ್ಚು ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ. ಅಲ್ಲದೆ ಮುಂಭಾಗ ಹಾಗೂ ಹಿಂಭಾಗದ ಭಾರ ಹಂಚಿಕೆಯಲ್ಲಿ ಶೇಕಡಾ 50:50ರ ನಿಷ್ಪತ್ತಿಯನ್ನು ಅನುಸರಿಸಲಾಗಿದೆ.
ಎಂಜಿನ್ ತಾಂತ್ರಿಕತೆ
- 3.0 ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಡೀಸೆಲ್ ಎಂಜಿನ್
- 313 ಅಶ್ವಶಕ್ತಿ
- 630 ಎನ್‌ಎಂ ತಿರುಗುಬಲ
ಎಲ್ಲ ನಾಲ್ಕು ಚಕ್ರಗಳಿಗೂ ಶಕ್ತಿ ವಿತರಣೆಯಾಗಲಿದ್ದು, 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಪಡೆದುಕೊಳ್ಳಲಿದೆ.
ಬಿಎಂಡಬ್ಲ್ಯು ಎಕ್ಸ್6 ಜೊತೆಗೆ ಎಕ್ಸ್6ಎಂ ಮಾದರಿಯನ್ನು ಭಾರತಕ್ಕೆ ಪರಿಚಯಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಈ ಗರಿಷ್ಠ ನಿರ್ವಹಣೆಯ ಕಾರಿನಲ್ಲಿ 4.4 ಲೀಟರ್ ವಿ8 ಟ್ವಿನ್ ಪವರ್ ಟರ್ಬೊ ಎಂಜಿನ್ ಇರಲಿದೆ.
ಭಾರತದಲ್ಲಿ ಬಿಎಂಡಬ್ಲ್ಯು ಎಕ್ಸ್6 ಮಾದರಿಯು ಜರ್ಮನಿಯದ್ದೇ ಆಗಿರುವ ಮರ್ಸಿಡಿಸ್ ಬೆಂಝ್ ಜಿಎಲ್63 ಎಎಂಜಿ ಹಾಗೂ ರೇಂಜ್ ರೋವರ್ ಸ್ಪೋರ್ಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.


Click it and Unblock the Notifications