ಚೆನ್ನೈ ನೆರೆ: ಆಟೋ ಕ್ಷೇತ್ರಕ್ಕೆ ಬಲವಾದ ಹೊಡೆತ; 1,500 ಕೋಟಿ ನಷ್ಟ

By Nagaraja

ಚೆನ್ನೈನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಹದ ಸ್ಥಿತಿಯುಂಟಾಗಿದ್ದು, ಅಪಾರ ಪ್ರಮಾಣದ ನಾಶನಷ್ಟ ಸಂಭವಿಸಿದೆ. ನಿಕಟ ಮೂಲಗಳ ಪ್ರಾಕರ ಚೆನ್ನೈ ಮಳೆಯಿಂದಾಗಿ ಇದುವರೆಗೆ ಆಟೋ ಕ್ಷೇತ್ರಕ್ಕೆ 1,500 ಕೋಟಿ ರುಪಾಯಿಗಿಂತಲೂ ಹೆಚ್ಚಿನ ನಷ್ಟ ಸಂಭವಿಸಿದೆ.

Also Read: ಚೆನ್ನೈ ಪ್ರವಾಹ; ಆಟೋ ಕ್ಷೇತ್ರಕ್ಕೆ ಆಗಿರುವ ನಷ್ಟ ಅಷ್ಟಿಷ್ಟಲ್ಲ! ಮುಂದಕ್ಕೆ ಓದಿ

ದೇಶದ ಎರಡನೇ ಅತಿ ದೊಡ್ಡ ವಾಹನ ತಯಾರಿಕ ಕೇಂದ್ರ ಎಂಬ ಖ್ಯಾತಿಗೆ ಪಾತ್ರವಾಗಿರುವ ಚೆನ್ನೈನಲ್ಲಿ ಬಹುತೇಕ ಎಲ್ಲ ಮುಂಚೂಣಿಯ ವಾಹನ ಸಂಸ್ಥೆಗಳು ನಿರ್ಮಾಣ ಘಟಕ ಹೊಂದಿದೆ. ಈಗ ಉಂಟಾಗಿರುವ ನೆರೆಯ ಪರಿಸ್ಥಿತಿಯಿಂದಾಗಿ ಘಟಕಗಳಲ್ಲಿ ನಿರ್ಮಾಣ ಕಾಮಗಾರಿಯು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಚೆನ್ನೈ ನೆರೆ: ಆಟೋ ಕ್ಷೇತ್ರಕ್ಕೆ ಬಲವಾದ ಹೊಡೆತ; 1,500 ಕೋಟಿ ನಷ್ಟ

ದೇಶದಲ್ಲಿ 38 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಆಟೋ ಘಟಕಗಳ ನಿರ್ಮಾಣದ ಪೈಕಿ ಶೇಕಡಾ 25ರಷ್ಟು ಅಂದರೆ 9.5 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ವಾಹನ ಘಟಕಗಳು ಇಲ್ಲಿಂದಲೇ ನಿರ್ಮಾಣವಾಗುತ್ತದೆ. ಪ್ರಸ್ತುತ ಮಳೆಯಿಂದಾಗಿ ನಿರ್ಮಾಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ದೈನಂದಿನ 172 ಕೋಟಿ ರುಪಾಯಿಗಳ ನಷ್ಟ ಅನುಭವಿಸುತ್ತಿದೆ.

ಚೆನ್ನೈ ನೆರೆ: ಆಟೋ ಕ್ಷೇತ್ರಕ್ಕೆ ಬಲವಾದ ಹೊಡೆತ; 1,500 ಕೋಟಿ ನಷ್ಟ

ಮೂರು ನಾಲ್ಕು ದಿನಗಳ ಕಾಲ ನಿರಂತರ ವಾಹನ ನಿರ್ಮಾಣ ಪ್ರಕ್ರಿಯೆ ನಿಲುಗಡೆಯಾಗಿರುವುದರಿಂದ 20,000ದಿಂದ 25,000 ವಾಹನಗಳು ರಸ್ತೆ ಪ್ರವೇಶಿಸುವ ಕಾರ್ಯದಿಂದ ತಡೆಯಲ್ಪಟ್ಟಿದೆ.

ಚೆನ್ನೈ ನೆರೆ: ಆಟೋ ಕ್ಷೇತ್ರಕ್ಕೆ ಬಲವಾದ ಹೊಡೆತ; 1,500 ಕೋಟಿ ನಷ್ಟ

ಈ ಎಲ್ಲ ಬೆಳವಣಿಗೆಗಳು ವಾಹನ ತಯಾರಿಕ ಸಂಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಭೀತಿಯಿದ್ದು, ನಿಗದಿತ ಅವಧಿಯ ವೇಳೆಗೆ ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವುದರಿಂದ ವಿಫಲವಾಗಲಿದೆ.

ಚೆನ್ನೈ ನೆರೆ: ಆಟೋ ಕ್ಷೇತ್ರಕ್ಕೆ ಬಲವಾದ ಹೊಡೆತ; 1,500 ಕೋಟಿ ನಷ್ಟ

ಉದಾಹರಣೆಗೆ ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ರೆನೊ ಕ್ವಿಡ್ ಮತ್ತು ಹ್ಯುಂಡೈ ಕಾರುಗಳು ಅನುಕ್ರಮವಾಗಿ 50,000 ಹಾಗೂ 70,000 ಬುಕ್ಕಿಂಗ್ಸ್ ಗಳನ್ನು ಗಿಟ್ಟಿಸಿಕೊಂಡಿದೆ. ಅಂದರೆ ಕಾಯುವಿಕೆ ಅವಧಿ ಈ ನಡುವೆ ಮೂರರಿಂದ ಆರು ತಿಂಗಳಷ್ಟು ಕಾಲ ವಿಸ್ತರಿಸಿದೆ. ಈಗ ಎದ್ದಿರುವ ನೆರೆ ಸಮಸ್ಯೆಯಿಂದಾಗಿ ಈ ಅವಧಿಯು ಮತ್ತಷ್ಟು ಹೆಚ್ಚಾಗಲಿದ್ದು, ಸಂಸ್ಥೆಗಳಿಗೆ ಬಲವಾದ ಹೊಡೆತ ನೀಡಲಿದೆ.

ಚೆನ್ನೈ ನೆರೆ: ಆಟೋ ಕ್ಷೇತ್ರಕ್ಕೆ ಬಲವಾದ ಹೊಡೆತ; 1,500 ಕೋಟಿ ನಷ್ಟ

ದ್ವಿಚಕ್ರ ದೈತ್ಯ ವಾಹನ ಸಂಸ್ಥೆ ರಾಯಲ್ ಎನ್‌ಫೀಲ್ಡ್ ಸಹ ಇದಕ್ಕೆ ಸಮಾನವಾದ ಸಮಸ್ಯೆಯನ್ನು ಎದುರಿಸುತ್ತಿದೆ. ಜನಪ್ರಿಯ ಫೋರ್ಡ್, ನಿಸ್ಸಾನ್ ಕೂಡಾ ಇದರಿಂದ ಹೊರತಾಗಿಲ್ಲ.

ಚೆನ್ನೈ ನೆರೆ: ಆಟೋ ಕ್ಷೇತ್ರಕ್ಕೆ ಬಲವಾದ ಹೊಡೆತ; 1,500 ಕೋಟಿ ನಷ್ಟ

ಹವಾಮಾನ ಇಲಾಖೆಯ ವರದಿಯ ಪ್ರಕಾರ ಮುಂದಿನ ಒಂದು ವಾರ ಚೆನ್ನೈ ನಗರದ್ಯಾಂತ ಭಾರಿ ಮಳೆಗೆ ಸಾಧ್ಯತೆಯಿದ್ದು, ಪರಿಸ್ಥಿತಿ ಮತ್ತಷ್ಟು ಹದೆಗೆಡುವ ಭೀತಿಯಿದೆ.

ಚೆನ್ನೈ ನೆರೆ: ಆಟೋ ಕ್ಷೇತ್ರಕ್ಕೆ ಬಲವಾದ ಹೊಡೆತ; 1,500 ಕೋಟಿ ನಷ್ಟ

ಶತಮಾನ ಭೀಕರ ಪ್ರವಾಹಕ್ಕೆ ನಲುಗಿದ ಚೆನ್ನೈ

More from DriveSpark

Article Published On: Saturday, December 5, 2015, 17:06 [IST]
English summary
Chennai Flood: Auto Industry suffers more than Rs 1,500 crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+