2015 ಷೆವರ್ಲೆ ಎಂಜಾಯ್ ಸಂತೋಷದಾಯಕ ಕೊಡುಗೆ

By Nagaraja

ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಪ್ರಖ್ಯಾತ ಕಾರು ಬ್ರಾಂಡ್ ಆಗಿರುವ ಷೆವರ್ಲೆ ಸಂಸ್ಥೆಯು ತನ್ನ ಜನಪ್ರಿಯ 2015 ಎಂಜಾಯ್ ಮಾದರಿಯನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಕಾರು ಪರಿಷ್ಕೃತಗೊಂಡಿದ್ದು, ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆ ಹೊಂದಿದೆ.

ತಾಜಾತನವನ್ನು ಕಾಪಾಡಿಕೊಳ್ಳುವ ಮುಖಾಂತರ ಮತ್ತಷ್ಟು ಮಾರಾಟವನ್ನು ಗಿಟ್ಟಿಸಿಕೊಳ್ಳುವುದು ಸಂಸ್ಥೆಯ ಗುರಿಯಾಗಿದೆ. 2015 ಷೆವರ್ಲೆ ಎಂಜಾಯ್ ದೆಹಲಿ ಎಕ್ಸ್ ಶೋ ರೂಂ ಬೆಲೆ 6.24 ಲಕ್ಷ ರು.ಗಳಾಗಿರಲಿದೆ.

2015 ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್ ಒಳಮೈಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿದೆ. ಹಾಗಿದ್ದರೂ ಹೊರಮೈಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಅಂದರೆ ಕಾರಿನೊಳಗೆ ಆರಾಮದಾಯಕ ಹಾಗೂ ಅನುಕೂಲತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ಇನ್ನು 1.4 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಗಳಲ್ಲೂ ಯಾವುದೇ ಬದಲಾವಣೆಯಾಗಿಲ್ಲ. ಅಂತೆಯೇ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಏಳು ಹಾಗೂ ಎಂಟು ಸೀಟುಗಳ ಆಯ್ಕೆಯೂ ಇರಲಿದೆ. ಇನ್ನು ಹೊರಗಡೆ ಗ್ರಿಲ್ ಜೊತೆ ಷೆವರ್ಲೆ ಲಾಂಛನ ಹಾಗೂ ಕ್ರೋಮ್ ಸ್ಪರ್ಶವನ್ನು ಕಾಣಬಹುದಾಗಿದೆ. ಆರು ಬಣ್ಣಗಳ ಆಯ್ಕೆಯೂ ಇದರಲ್ಲಿರುತ್ತದೆ.

2015 ಷೆವರ್ಲೆ ಎಂಜಾಯ್

ಇನ್ನು ಹೊಸ ಷೆವರ್ಲೆ ಎಂಜಾಯ್ ಮಾದರಿಯಲ್ಲಿ ಹೊಸತಾದ ಸ್ಟೀರಿಂಗ್ ವೀಲ್ ಜೊತೆ ಆಡಿಯೋ ಕಂಟ್ರೋಲ್, ಬ್ಲೂಟೂತ್ ಕನೆಕ್ಟಿವಿಟಿ ಇರಲಿದೆ. ಅಂತೆಯೇ ಎಸಿ ವೆಂಟ್ಸ್, ಹ್ಯಾಂಡ್ ಬ್ರೇಕ್, ಗೇರ್ ನಾಬ್ ಮತ್ತು ಡೋರ್ ಹ್ಯಾಂಡಲ್ ಇರುತ್ತದೆ.
2015 ಷೆವರ್ಲೆ ಎಂಜಾಯ್

ಇವೆಲ್ಲದಕ್ಕೂ ಮಿಲಿಲಾಗಿ ಲೆಥರ್, ಫ್ರಾಬ್ರಿಕ್ ಹಾಗೂ ಗ್ಲೋಸಿ ಬ್ಲ್ಯಾಕ್ ಫಿನಿಸ್ ಇಂಟಿರಿಯರ್ ಹೆಚ್ಚಿನ ಪ್ರೀಮಿಯಂ ನೋಟ ಪ್ರಧಾನ ಮಾಡಲಿದೆ. ಹಾಗೆಯೇ ಸುರಕ್ಷತೆಯ ನಿಟ್ಟಿನಲ್ಲಿ ಎಬಿಎಸ್, ಡ್ಯುಯಲ್ ಏರ್ ಬ್ಯಾಗ್ ಮತ್ತು ಇಬಿಡಿ ವ್ಯವಸ್ಥೆಯಿರುತ್ತದೆ.

More from DriveSpark

Article Published On: Tuesday, July 7, 2015, 14:53 [IST]
English summary
The American based manufacturer Chevrolet has now provided its Enjoy MPV with a facelift for 2015. This new version will be priced at INR 6,24,000 ex-showroom, Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+