ಷೆವರ್ಲೆ ಟ್ರೈಲ್‌ಬ್ಲೇಜರ್ ಎಸ್‌ಯುವಿ ಭಾರತದಲ್ಲಿ ಭರ್ಜರಿ ಬಿಡುಗಡೆ
ಅಮೆರಿಕ ಮೂಲದ ಐಕಾನಿಕ್ ಜನರಲ್ ಮೋಟಾರ್ಸ್ ಸಂಸ್ಥೆಯ ಕಾರು ಬ್ರಾಂಡ್ ಆಗಿರುವ ಷೆವರ್ಲೆ, ಭಾರತದಲ್ಲಿ ಅತಿ ನೂತನ ಟ್ರೈಲ್ ಬ್ಲೇಜರ್ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡಿದೆ.
ಬೆಲೆ ಮಾಹಿತಿ: 26.40 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
[ಷೆವರ್ಲೆ ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಮಿಸ್ ಮಾಡ್ಕೊಂಡ್ರಾ? ಇಲ್ಲಿದೆ ಕ್ಲಿಕ್ಕಿಸಿ]
ಆಸಕ್ತ ಗ್ರಾಹಕರು ಇ-ಕಾಮರ್ಸ್ ದೈತ್ಯ ಅಮಜಾನ್ ಡಾಟ್ ಇನ್ ಮುಖಾಂತರವೂ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಪ್ರಸ್ತಕ್ತ ಹಬ್ಬದ ಸಂಭ್ರಮದಲ್ಲಿ ಗರಿಷ್ಠ ಮಾರಾಟವನ್ನು ಸಂಸ್ಥೆಯು ಗುರಿಯಾಗಿರಿಸಿಕೊಂಡಿದೆ.

ಎಂಜಿನ್ ತಾಂತ್ರಿಕತೆ
- 2.8 ಲೀಟರ್ ಟರ್ಬೊ ಚಾರ್ಜ್ಡ್ ಡ್ಯುರಾಮ್ಯಾಕ್ಸ್
- 197.13 ಅಶ್ವಶಕ್ತಿ,
- 500 ಎನ್‌ಎಂ ತಿರುಗುಬಲ
- ಡಬಲ್ ಎಸ್‌ಆರ್‌ಎಸ್ ಏರ್ ಬ್ಯಾಗ್,
- ಪ್ರಿ ಟೆನ್ಫನರ್ ಸೀಟು ಬೆಲ್ಟ್,
- ಹೈ ಸ್ಟ್ರೆಂಗ್ತ್ ಸ್ಟೀಲ್ ಕೇಜ್,
- ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
- ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ),
- ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ),
- ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ (ಟಿಸಿಎಸ್),
- ರಿಯರ್ ಪಾರ್ಕ್ ಅಸಿಸ್ಟ್
- ಟೊಯೊಟಾ ಫಾರ್ಚ್ಯುನರ್,
- ಹ್ಯುಂಡೈ ಸಾಂಟಾಫೆ,
- ಫೋರ್ಡ್ ಎಂಡೀವರ್,
- ಮಿಟ್ಸುಬಿಸಿ ಪಜೆರೊ ಸ್ಪೋರ್ಟ್
- ಉದ್ದ: 4878ಎಂಎಂ
- ಅಗಲ: 1902 ಎಂಎಂ
- ಚಕ್ರಾಂತರ: 2845 ಎಂಎಂ
- ಇಂಧನ ಟ್ಯಾಂಕ್ ಸಾಮರ್ಥ್ಯ: 76 ಲೀಟರ್
- ಅಲಾಯ್ ವೀಲ್: 18 ಇಂಚು
- ಬ್ಲೂ ಮೌಂಟೆನ್,
- ಸಮ್ಮಿತ್ ವೈಟ್,
- ಆಬರ್ನ್ ಬ್ರೌನ್,
- ಬ್ಲ್ಯಾಕ್ ಸಪೈರ್,
- ರಾಯಲ್ ಗ್ರೇ,
- ಸಿಜ್ಲ್ ರೆಡ್,
- ಸ್ವಿಚಬಲ್ ಸಿಲ್ವರ್
ಗೇರ್ ಬಾಕ್ಸ್: 6 ಸ್ಪೀಡ್ ಆಟೋಮ್ಯಾಟಿಕ್

ಭದ್ರತೆ

ಮನರಂಜನೆ
ಚಾಲಕ ತನ್ನ ಮೊಬೈಲ್ ಫೋನ್ ನಿಂದ ಮೈಲಿಂಕ್ ಮುಖಾಂತರ ಕನೆಕ್ಟ್ ಮಾಡಬಹುದಾಗಿದೆ. ಇದಲ್ಲದೆ ಏಳು ಇಂಚುಗಳ ಟಚ್ ಸ್ಕ್ರೀನ್ ಸೇವೆಯೂ ಲಭ್ಯವಿರಲಿದೆ. ಅಂತೆಯೇ ಕ್ಲೈಮೇಟ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಕ್ರೂಸ್ ಕಂಟ್ರೋಲ್ ವ್ಯವಸ್ಥೆಯು ಇದರಲ್ಲಿರಲಿದೆ.

ಪ್ರತಿಸ್ಪರ್ಧಿಗಳು
ಪ್ರಮುಖವಾಗಿಯೂ ಟೊಯೊಟಾ ಫಾರ್ಚ್ಯುನರ್ ಮಾದರಿಗೆ ನೂತನ ಟ್ರೈಲ್ ಬ್ಲೇಜರ್ ಪ್ರತಿಸ್ಪರ್ದಿಯಾಗಲಿದೆ.

ಅಮೆಜಾನ್ ನಲ್ಲಿ ಬುಕ್ಕಿಂಗ್ಸ್
ಆಸಕ್ತ ಗ್ರಾಹಕರು ಅಮೆಜಾನ್ ವೆಬ್‌ಸೈಟ್ ಮುಖಾಂತರ ತಮ್ಮ ಹೆಸರು, ಇಮೇಲ್ ಹಾಗೂ ಮೊಬೈಲ್ ನಂಬರ್ ನಮೂದಿಸುವ ಮೂಲಕ ಅಪ್ ಡೇಟ್ಸ್ ಪಡೆಯಬಹುದಾಗಿದೆ. ಬಳಿಕ ಷೆವರ್ಲೆ ಡೀಲರುಗಳು ನಿಮ್ಮನ್ನು ನೇರವಾಗಿ ಸಂಪರ್ಕಿಸಲಿದ್ದಾರೆ.

ಆಯಾಮ

ಏಳು ಬಣ್ಣಗಳು

ಇನ್ನು ಮುಂಬರುವ ದಿನಗಳಲ್ಲಿ ದೇಶದಲ್ಲಿ ಷೆವರ್ಲೆ ಸಂಸ್ಥೆಯು ಬಿಡುಗಡೆ ಮಾಡಲಿರುವ ಇತರ ಮಾದರಿಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಕೆಲವು ಸಮಯಗಳ ಹಿಂದೆಯಷ್ಟೇ ಸ್ಪಿನ್ ಬಹು ಬಳಕೆಯ ವಾಹನವನ್ನು (ಎಂಪಿವಿ) ಅನಾವರಣಗೊಳಿಸಿತ್ತು. ಅಲ್ಲದೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಷೆವರ್ಲೆ ಎಂಜಾಯ್ ಎಂಪಿವಿ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.


Click it and Unblock the Notifications








