ಢಿಕ್ಕಿ ಪರೀಕ್ಷೆಯಲ್ಲಿ ಸ್ಕೋಡಾ ಸೂಪರ್ಬ್ ಫೈವ್ ಸ್ಟಾರ್ ಸಾಧನೆ

Written By:

ಜೆಕ್ ಗಣರಾಜ್ಯದ ನೂತನ ಅವಿಷ್ಕಾರವಾಗಿರುವ ಸ್ಕೋಡಾ ಸೂಪರ್ಬ್ ಯುರೋ ಎನ್‌ಸಿಎಪಿ ಢಿಕ್ಕಿ ಪರೀಕ್ಷೆಯಲ್ಲಿ ಫೈವ್ ಸ್ಟಾರ್ ಸಾಧನೆ ಮಾಡಿದೆ. ಇದು ಸಂಸ್ಥೆಯ ಪಾಲಿಗೆ ಮಹತ್ತರ ಸಾಧನೆಯಾಗಿರಲಿದ್ದು, ಮುಂದಿನ ದಿನಗಳಲ್ಲಿ ಅತ್ಯುತ್ತಮ ಮಾರಾಟ ಗಿಟ್ಟಿಸಿಕೊಳ್ಳಲು ನೆರವಾಗಲಿದೆ.

ಯುರೋಪ್ ಖಂಡದಲ್ಲಿ ಹೊಸ ಮಾದರಿ ಬಿಡುಗಡೆಗೂ ಮೊದಲು ಢಿಕ್ಕಿ ಪರೀಕ್ಷೆ ಕಡ್ಡಾಯವಾಗಿದೆ. ಈಗ ನೂತನ ಸ್ಕೋಡಾ ಇಂತಹದೊಂದು ಸಾಧನೆ ಮಾಡುವ ಮೂಲಕ ತನ್ನ ನಿರ್ಮಾಣ ಗುಣಮಟ್ಟವನ್ನು ಪ್ರದರ್ಶಿಸಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಸ್ಕೋಡಾ ಸೂಪರ್ಬ್ ಫೈವ್ ಸ್ಟಾರ್ ಸಾಧನೆ

ವಯಸ್ಕ ವಿಭಾಗ, ಮಕ್ಕಳ ವಿಭಾಗ, ಪಾದಚಾರಿ ಸುರಕ್ಷತೆ, ಸುರಕ್ಷತೆ ನೆರವು ವ್ಯವಸ್ಥೆ ಹೀಗೆ ಎಲ್ಲ ಅಪಘಾತ ವಿಭಾಗದಲ್ಲೂ ಸ್ಕೋಡಾ ಸೂಪರ್ಬ್ ನಿಜಕ್ಕೂ ಮೆಚ್ಚುಗೆಯ ಸಾಧನೆ ಮಾಡಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಸ್ಕೋಡಾ ಸೂಪರ್ಬ್ ಫೈವ್ ಸ್ಟಾರ್ ಸಾಧನೆ

ನೂತನ ಸ್ಕೋಡಾ ಸೂಪರ್ಬ್ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತಿದ್ದು, ಒಂಬತ್ತು ಏರ್ ಬ್ಯಾಗ್ ಗಳ ಸೌಲಭ್ಯ, ಗಟ್ಟಿಮುಟ್ಟಾದ ದೇಹ ರಚನೆ ಮುಂತಾದ ಸುರಕ್ಷಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಸ್ಕೋಡಾ ಸೂಪರ್ಬ್ ಫೈವ್ ಸ್ಟಾರ್ ಸಾಧನೆ

ಅಂತೆಯೇ ಸ್ಮಾರ್ಟ್ ಲೈಟ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ರಿಯರ್ ಟ್ರಾಫಿಕ್ ಅಲರ್ಟ್, ಟ್ರಾಫಿಕ್ ಜಾಮ್ ಅಸಿಸ್ಟ್ ಹಾಗೂ ಎಮರ್ಜನ್ಸಿ ಅಸಿಸ್ಟ್ ಸೇವೆಗಳು ಲಭ್ಯವಾಗಲಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಸ್ಕೋಡಾ ಸೂಪರ್ಬ್ ಫೈವ್ ಸ್ಟಾರ್ ಸಾಧನೆ

ಇನ್ನುಳಿದಂತೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಕ್ರ್ಯೂ ಪ್ರೊಟೆಕ್ಟ್ ಅಸಿಸ್ಟ್, ಲೇನ್ ಅಸಿಸ್ಟ್, ಸ್ಪೀಡ್ ಲಿಮಿಟರ್, ಟ್ರಾಫಿಕ್ ಚಿಹ್ನೆ ಗುರುತಿಸುವಿಕೆ, ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಬಹು ಢಿಕ್ಕಿ ಬ್ರೇಕ್ ಮುಂತಾದ ಸೌಲಭ್ಯಗಳಿರಲಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಸ್ಕೋಡಾ ಸೂಪರ್ಬ್ ಫೈವ್ ಸ್ಟಾರ್ ಸಾಧನೆ

ನೂತನ ಸ್ಕೋಡಾ ಸೂಪರ್ ಭಾರತ ಮಾರುಕಟ್ಟೆಯನ್ನು ಯಾವಾಗ ಪ್ರವೇಶಿಸಲಿದೆ ಎಂಬುದಕ್ಕೆ ಸದ್ಯಕ್ಕೆ ಸ್ಪಷ್ಟನೆ ಲಭ್ಯವಾಗಿಲ್ಲ.

ಸ್ಕೋಡಾ ಸೂಪರ್ಬ್ ಢಿಕ್ಕಿ ಪರೀಕ್ಷೆ ವೀಕ್ಷಿಸಲು ಮರೆಯದಿರಿ

Read more on ಸ್ಕೋಡಾ skoda
English summary
Euro NCAP Crash Test of Skoda Superb 2015
Story first published: Tuesday, July 21, 2015, 17:59 [IST]
Please Wait while comments are loading...

Latest Photos