ಲಂಬೋಗಿಂತಲೂ ವೇಗದ ಫೆರಾರಿ ಟಾಪ್‌ಲೆಸ್ ಸೂಪರ್ ಕಾರು
ಜರ್ಮನಿಯಲ್ಲಿ ನಡೆಯುತ್ತಿರುವ ವಿಶ್ವದ ಅತಿ ದೊಡ್ಡ ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲಿ ಲಂಬೋರ್ಗಿನಿಗಿಂತಲೂ ವೇಗದ ಟಾಪ್ ಲೆಸ್ ಸೂಪರ್ ಕಾರನ್ನು ಇಟಲಿ ಮೂಲದ ಫೆರಾರಿ ಸಂಸ್ಥೆಯು ಅನಾವರಣಗೊಳಿಸಿದೆ.
ಅದುವೇ, ಫೆರಾರಿ 488 ಸ್ಪೈಡರ್
3.9 ಲೀಟರ್ ಟರ್ಬೊಚಾರ್ಜ್ಡ್ ವಿ8 ಎಂಜಿನ್ ನಿಂದ ನಿಯಂತ್ರಿಸಲ್ಪಡುವ 488 ಸ್ಪೈಡರ್ 560 ಎನ್‌ಎಂ ತಿರುಗುಬಲದಲ್ಲಿ 660 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಕೇವಲ ಮೂರು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಂತೆಯೇ ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಇರಲಿದೆ.

ಹಳೆಯ ಎಫ್430 ಸ್ಪೈಡರ್ ಮಾದರಿಗಿಂತಲೂ 25 ಕೆ.ಜಿಗಳಷ್ಟು ಕಡಿಮೆ ಭಾರವನ್ನು ಹೊಂದಿರುವ ನೂತನ 488 ಸ್ಪೈಡರ್, ಲಂಬೋರ್ಗಿನಿ ಕಾರಿಗಿಂತಲೂ ಅತಿ ಹೆಚ್ಚಿನ ವೇಗವನ್ನು ಹೊಂದಿರಲಿದೆ.

ಏರೋಡೈನಾಮಿಕ್ ವಿನ್ಯಾಸ ತಂತ್ರಗಾರಿಕೆ ನೂತನ ಫೆರಾರಿ ಓಪನ್ ಟಾಪ್ ಕಾರಿನ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಇದರಲ್ಲಿರುವ ಎರಡನೇ ಜನಾಂಗದ ಸ್ಲೈಡ್ ಸ್ಲಿಪ್ ಆ್ಯಂಗಲ್ ಕಂಟ್ರೋಲ್ ಸಿಸ್ಟಂ (SSC2) ನಯವಾದ ಚಾಲನೆ ಪ್ರದಾನ ಮಾಡಲಿದೆ.

ಅದೇ ರೀತಿ ಲಾಫೆರಾರಿಯಿಂದ ಆಮದು ಮಾಡಲಾದ ನೂತನ ಬ್ರೆಂಬೊ ಬ್ರೇಕಿಂಗ್ ಸಿಸ್ಟಂ ಸಹ ಆಳವಡಿಸಲಾಗಿದ್ದು, ಹೆಚ್ಚು ಪರಿಣಾಮಕಾರಿಯೆನಿಸಲಿದೆ.

ಒಟ್ಟಿನಲ್ಲಿ ಮುಂದಿ ವರ್ಷ ಮಾರುಕಟ್ಟೆ ತಲುಪಲಿರುವ ಫೆರಾರಿ 488 ಸ್ಪೈಡರ್ ಭಾರತೀಯ ರುಪಾಯಿ ಮೌಲ್ಯದ ಪ್ರಕಾರ ಎರಡು ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.


Click it and Unblock the Notifications








