ಫೆರಾರಿ ಕ್ಯಾಲಿಫೋರ್ನಿಯಾ ಟಿ ಬಿಡುಗಡೆ; ಬೆಲೆ 3.45 ಕೋಟಿ ರು.

By Nagaraja

ಇಟಲಿಯ ಸೂಪರ್ ಕಾರು ತಯಾರಿಕ ಸಂಸ್ಥೆಯಾಗಿರುವ ಫೆರಾರಿ, ಭಾರತದಲ್ಲಿ ಅತಿ ನೂತನ ಕ್ಯಾಲಿಫೋರ್ನಿಯಾ ಟಿ ಕನ್ವರ್ಟಿಬಲ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 3.45 ಕೋಟಿ ರು. (ಎಕ್ಸ್ ಶೋ ರೂಂ ಮುಂಬೈ)

ಇದು ಎರಡನೇ ಬಾರಿಗೆ ಇಟಲಿಯ ಐಕಾನಿಕ್ ಸಂಸ್ಥೆಯು ಭಾರತಕ್ಕೆ ಕಾಲಿಡುತ್ತಿದೆ. ಇದಕ್ಕೂ ಮೊದಲು 2011ನೇ ಸಾಲಿನಲ್ಲಿ ಪ್ರವೇಶ ಪಡೆದಿತ್ತಾದರೂ ಸೇಲ್ಸ್ ಸರ್ವೀಸ್ ಬಗ್ಗೆ ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ ಹಿಂಜರಿದಿತ್ತು.

ಫೆರಾರಿ

ನೂತನ ಫೆರಾರಿ ಕ್ಯಾಲಿಫೋರ್ನಿಯಾ 3.9 ಲೀಟರ್ ವಿ8 ಡೈರಕ್ಟ್ ಇಂಜೆಕ್ಷನ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 553 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಗಂಟೆಗೆ ಗರಿಷ್ಠ 315 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ. ಹಾಗೆಯೇ ಕೇವಲ 3.6 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗವರ್ಧಿಸಲಿದೆ.

ಫಾರ್ಮುಲಾ ಒನ್ ರೇಸಿಂಗ್ ಕಾರಿನಿಂದ ಸ್ಪೂರ್ತಿ ಪಡೆದಿರುವ ಫೆರಾರಿ ಕ್ಯಾಲಿಫೋರ್ನಿಯಾ ಟಿ ಕಾರಿನಲ್ಲಿ ಒಂದು ರಿವರ್ಸ್ ಗೇರ್ ಜೊತೆಗೆ 7 ಗೇರ್ ಸಿಸ್ಟಂ ಹೊಂದಿರಲಿದೆ.

ಫೆರಾರಿ

ಪ್ರಸ್ತುತ ಫೆರಾರಿ ಮುಂಬೈ ಹಾಗೂ ದೆಹಲಿಯಲ್ಲಿ ಎರಡು ಅಧಿಕೃಕ ವಿತರಕ ಜಾಲವನ್ನು ಹೊಂದಿದೆ. ಈಗ ಮುಂಬೈನ ನವನೀತ್ ಮೋಟಾರ್ಸ್ ಮುಖಾಂತರ ಮಾರಾಟವಾಗಲಿದೆ. ಅಲ್ಲದೆ ತನ್ನ ಮಾರಾಟ ಜಾಲವನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

ವಾಹನೋದ್ಯಮದ ನಿಕಟ ಮೂಲಗಳ ಪ್ರಕಾರ ಭಾರತದ ರಸ್ತೆಯಲ್ಲಿ 50ರಿಂದ 80ರಷ್ಟು ಫೆರಾರಿ ಕಾರುಗಳು ಒಡಾಡುತ್ತಿವೆ. ಇವೆಲ್ಲವನ್ನು ಗ್ರಾಹಕರು ನೇರವಾಗಿ ಆಮದು ಮಾಡಿಕೊಂಡಿದ್ದರು. ನಿಮ್ಮ ಮಾಹಿತಿಗಾಗಿ, ಮಾಜಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಬಳಿ ಫೆರಾರಿ ಮೊಡೆನಾ 360 ಕಾರಿದೆ.

ಪ್ರಸ್ತುತ ಫೆರಾರಿ ಕ್ಯಾಲಿಫೋರ್ನಿಯಾ ಟಿ ಮಾದರಿಯು ಪೋರ್ಷೆ 911 ಟರ್ಬೊ ಎಸ್ ಕನ್ವರ್ಟಿಬಲ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕ್ಯಾಬ್ರಿಯೊ ಮುಂತಾದ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

More from DriveSpark

Article Published On: Wednesday, August 26, 2015, 14:40 [IST]
English summary
Ferrari California T Launched: Price, Specs, Performance And More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+