ಮಾರುಕಟ್ಟೆಯಲ್ಲಿ ವೈಫಲ್ಯ ಅನುಭವಿಸುತ್ತಿರುವ 5 ಕಾರುಗಳು
ಪ್ರತಿಯೊಂದು ಕಾರಿನ ಮಾರಾಟದಲ್ಲೂ ವಿನ್ಯಾಸವು ಪ್ರಮುಖ ವಹಿಸುತ್ತದೆ. ಮುಖ್ಯವಾಗಿಯೂ ಭಾರತದಲ್ಲಿ ಬೆಲೆಯ ಬಳಿಕ ವಿನ್ಯಾಸ ನಿರ್ಣಾಯಕ ಘಟಕವೆನಿಸುತ್ತದೆ. ಹಾಗಿದ್ದರೂ ಸ್ಪರ್ಧಾತ್ಮಕ ಬೆಲೆ ಕಾಯ್ದುಕೊಳ್ಳುವ ಜಂಜಾಟದಲ್ಲಿ ವಿನ್ಯಾಸ ಹಾಗೂ ವೈಶಿಷ್ಟ್ಯಗಳ ಬಗ್ಗೆ ಕೇರ್ ತಗೊಳ್ಳುವುದನ್ನು ಮರೆತೇ ಬಿಟ್ಟಿದೆ.
Also Read: ಭಾರತದ ಅತಿ ಕೆಟ್ಟ ಬಣ್ಣ ಸಂಯೋಜನೆಯ 7 ಕಾರುಗಳು
ಹೀಗೆ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವೈಫಲ್ಯವನ್ನು ಅನುಭವಿಸಿರುವ ಐದು ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ. ಇದಕ್ಕಾಗಿ ಚಿತ್ರಪುಟದತ್ತ ಮುಂದುವರಿಯಿರಿ.

01. ಟಾಟಾ ನ್ಯಾನೋ
ಟಾಟಾ ನ್ಯಾನೋ ಅತಿ ಚೊಕ್ಕದಾದ ಕಾರಾಗಿದ್ದು, ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಬಂದ ಬಳಿಕ ಮಾರಾಟಕ್ಕೆ ಉತ್ತೇಜನ ನೀಡಿತ್ತು. ಆದರೆ ಅರ್ಧ ವೃತ್ತಕಾರಾದಂತಿರುವ ಇದರ ವಿನ್ಯಾಸವು ಈಗಲೂ ಗ್ರಾಹಕರನ್ನು ಮೆಚ್ಚಿಸುವಲ್ಲಿ ವಿಫಲವಾಗಿದೆ.

02. ಹ್ಯುಂಡೈ ಐ10
ಮಾರುಕಟ್ಟೆಯಲ್ಲಿ ವೈಫಲ್ಯ ಅನುಭವಿಸುತ್ತಿರುವ ಜನಪ್ರಿಯ ಕಾರುಗಳಲ್ಲಿ ಹಳೆಯ ಐ10 ಕೂಡಾ ಒಂದಾಗಿದೆ. ಆಧುನಿಕ ವೈಶಿಷ್ಟ್ಯಗಳ ಕಾರುಗಳ ಆಗಮನದೊಂದಿಗೆ ಐ10 ಹಿನ್ನಡೆ ಅನುಭವಿಸುತ್ತಿದೆ.

03. ಮಾರುತಿ ಸುಜುಕಿ ಸ್ಟ್ರೀಂಗ್ರೇ
ಹೆಚ್ಚೆಚ್ಚು ಯುವ ಗ್ರಾಹಕರನ್ನು ಆಕರ್ಷಿಸುವ ಇರಾದೆಯೊಂದಿಗೆ ಸ್ಟ್ರೀಂಗ್ರೇ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಆದರೆ ಮಾರುತಿಯ ಯೋಜನೆಯು ಎಲ್ಲವೂ ಅಂದುಕೊಂಡಂತೆ ನಡೆದಿಲ್ಲ. ಪರಿಣಾಮ ಸ್ಟ್ರೀಂಗ್ರೇ ಎಂಬ ಕಾರೇ ಮಾರಾಟದಲ್ಲಿದೆಯೇ ಎಂಬುದು ಸಂದೇಹವೆನಿಸುತ್ತಿದೆ.

04. ರೆನೊ ಸ್ಕಾಲಾ
ಡಸ್ಕರ್, ಕ್ವಿಡ್ ಮಾದರಿಗಳಿಗೆ ಹೋಲಿಸಿದಾಗ ಅದೇ ಬೇಡಿಕೆಯನ್ನು ಕಾಯ್ದುಕೊಳ್ಳುವಲ್ಲಿ ತೀರಾ ಸ್ಕಾಲಾ ವಿಫಲವಾಗಿದೆ. ಇದು ಮಾರಾಟದಲ್ಲೂ ಪ್ರತಿಫಲಿಸುತ್ತಿದ್ದು, ಮಾರಾಟ ಕುಸಿತ ಅನುಭವಿಸುತ್ತಿದೆ.

05. ಟಾಟಾ ಮಾಂಝಾ
ಟಾಟಾ ಸಂಸ್ಥೆಯ ಉತ್ಪನ್ನವಾಗಿರುವ ಮಾಂಝಾ ಕ್ಲಬ್ ಕ್ಲಾಸ್ ಸೆಡಾನ್ ಕಾರು ವಿನ್ಯಾಸದ ವಿಚಾರದಲ್ಲಿ ವೈಫ್ಯಲ್ಯವನ್ನು ಅನುಭವಿಸಿದೆ.

ಜಗತ್ತಿನ ಅತ್ಯಂತ ಕೆಟ್ಟ 10 ಕಾರುಗಳು


Click it and Unblock the Notifications








