ಸಕತ್ ಪವರ್‌ಫುಲ್ ಹ್ಯಾಚ್ ಬ್ಯಾಕ್ - ಫೋರ್ಡ್ ಫೋಕಸ್ ಆರ್‌ಎಸ್
ಅಮೆರಿಕ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್ ಗರಿಷ್ಠ ನಿರ್ವಹಣೆಯ ಹ್ಯಾಚ್‌ಬ್ಯಾಕ್ ಕಾರೊಂದನ್ನು ವಿಶ್ವಕ್ಕೆ ಪರಿಚಯಿಸಿದೆ. ಅತಿ ನೂತನ ಫೋರ್ಡ್ ಫೋಕಸ್ ಆರ್‌ಎಸ್ ಗರಿಷ್ಠ ನಿರ್ವಹಣೆಯ ಹ್ಯಾಚ್‌ಬ್ಯಾಕ್ ಕಾರು ಹೊಸತನಕ್ಕೆ ಕಾರಣವಾಗಲಿದೆ.
ನೂತನ ಕಾರಿನಲ್ಲಿ ಫೋರ್ಡ್ ಫಾರ್ಫಮನ್ಸ್ ಆಲ್ ವೀಲ್ ಡ್ರೈವ್ ವ್ಯವಸ್ಥೆ, ಕ್ಲಾಸ್ ಲೀಡಿಂಗ್ ಕಾರ್ನರಿಂಗ್ ಸ್ಪೀಡ್ ಹಾಗೂ ಗರಿಷ್ಠ ನಿರ್ವಹಣೆಯನ್ನು ಪಡೆಯಲಿದೆ. ನೂತನ ಫೋರ್ಡ್ ಫೋಕಸ್ ಆರ್‌ಎಸ್ 2.3 ಲೀಟರ್ ಇಕೊಬೂಸ್ಟ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 320 ಅಶ್ವಶಕ್ತಿ ಉತ್ಪಾದಿಸಲಿದೆ. ಇದು 2020ರ ವೇಳೆಯಾಗುವಾಗ ಸಂಸ್ಥೆಯ ಯೋಜನೆಯ 12 ನಿರ್ವಹಣಾ ವಾಹನಗಳ ಭಾಗವಾಗಿದೆ.

ವೈಶಿಷ್ಟ್ಯಗಳು
- ನ್ಯೂ ಫ್ರಂಟ್ ಎಂಡ್,
- ಸೆಂಟ್ರಲ್ ಫಾಗ್ ಲ್ಯಾಂಪ್,
- ರಿಯರ್ ರೂಫ್ ಸ್ಪಾಯ್ಲರ್,
- ಮಲ್ಟಿ ಸ್ಪೋಕ್ 19 ಇಂಚಿನ ಆರ್‌ಎಸ್ ಅಲಾಯ್ ವೀಲ್ಸ್,
- ಸ್ಟ್ಯಾಂಡರ್ಡ್ ಬೈ-ಕ್ಸೆನಾನ್ ಎಚ್‌ಐಡಿ ಹೆಡ್ ಲ್ಯಾಂಪ್,
- ಅಡಾಪ್ಟಿವ್ ಫ್ರಂಟ್ ಲೈಟಿಂಗ್,
- ಆಕ್ಟಿವ್ ಸಿಟಿ ಸ್ಟಾಪ್ ಆಟೋಮ್ಯಾಟಿಕ್ ಬ್ರೇಕಿಂಗ್,
- ಸಿಂಕ್ (ಎಸ್‌ವೈಎನ್‌ಸಿ) ಕನೆಕ್ಟಿವಿಟಿ,
- ಎಂಟು ಇಂಚಿನ ಕಲರ್ ಟಚ್ ಸ್ಕ್ರೀನ್,
- ಸೋನಿ ಪ್ರೀಮಿಯಂ ಸೌಂಡ್ ಸಿಸ್ಟಂ ಜೊತೆ 10 ಸ್ಪೀಕರ್,
- ಅಲಾಯ್ ಫೂಟ್ ಪೆಡಲ್,
- ಟರ್ಬೊಚಾರ್ಜರ್ ಬೂಸ್ಟ್ ಪ್ರೆಶರ್ ಡಿಸ್ ಪ್ಲೇ,
- 2.3 ಲೀಟರ್ ಇಕೊಬೂಸ್ಟ್ ಎಂಜಿನ್,
- 320 ಅಶ್ವಶಕ್ತಿ,
- ಆಲ್ ವೀಲ್ ಡ್ರೈವ್,
- ಟ್ವಿನ್ ಸ್ಕ್ರಾಲ್ ಟರ್ಬೊ ಚಾರ್ಜರ್,
- ಗರಿಷ್ಠ ನಿರ್ವಹಣೆಯ ಎಕ್ಸಾಸ್ಟ್ ಸಿಸ್ಟಂ,
- ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ವಾಲ್ವ್,
- ಸಿಕ್ಸ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್

ಮೂರನೇ ತಲೆಮಾರಿನ ಫೋರ್ಡ್ ಫೋಕಸ್ ಆರ್‌ಎಸ್ ಜಾಗತಿಕ ಮಾರುಕಟ್ಟೆಯನ್ನು ತಲುಪಲಿದ್ದು, ಇದು 1968ನೇ ಇಸವಿಯ ಬಳಿಕ ಫೋರ್ಡ್‌ನಿಂದ ಆರ್‌ಎಸ್ ಲಾಂಛನ ಪಡೆಯುತ್ತಿರುವ 30ನೇ ಕಾರಾಗಿದೆ.

ಅಷ್ಟೇ ಯಾಕೆ ಫೋರ್ಡ್ ಫೋಕಸ್ ಆರ್‌ಎಸ್ ವೃದ್ಧಿಗಾಗಿ ವೃತ್ತಿಪರ ರಾಲಿ ಡ್ರೈವರ್ ಹಾಗೂ ಜಿಮ್ಖಾನಾ ಸ್ಟಾರ್ ಆಗಿರುವ ಕೆನ್ ಬ್ಲಾಕ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಎಂಜಿನ್

ಬಣ್ಣಗಳು
ನಿಟ್ರೋಸ್ ಬ್ಲೂ,
ಸ್ಟೀಲ್ತ್ ಗ್ರೇ,
ಪರಿಪೂರ್ಣ ಬ್ಲ್ಯಾಕ್,
ಫ್ರಾಜನ್ ವೈಟ್


Click it and Unblock the Notifications








