ಕಾನೂನು ಸುವ್ಯವಸ್ಥೆ ಕಾಪಾಡಲು ಫೋರ್ಡ್ ಪೊಲೀಸ್ ಕಾರು
ಅಮೆರಿಕ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್, ಮುಂಬರುವ ಚಿಕಾಗೋ ವಾಹನ ಪ್ರದರ್ಶನ ಮೇಳಕ್ಕೆ ಸರ್ವ ರೀತಿಯ ಸಿದ್ಧತೆಯನ್ನು ನಡೆಸುತ್ತಿದೆ.
ಇದರಂತೆ ಫೋರ್ಡ್ ಸಂಸ್ಥೆಯು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೊಸತಾದ ಪೊಲೀಸ್ ಕಾರೊಂದನ್ನು ಪರಿಚಯಿಸಲಿದೆ. ಕಾನೂನು ಸುವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ 2016 ಫೋರ್ಡ್ ಇಂಟರ್ಸೆಪ್ಟರ್ ಯುಟಿಲಿಟಿ ಕಾರು ನೆರವಾಗಲಿದೆ ಎಂಬುದು ಸಂಸ್ಥೆಯ ನಂಬಿಕೆಯಾಗಿದೆ.

2012ನೇ ಇಸವಿಯಲ್ಲಿ ಮೊದಲ ಬಾರಿಗೆ ಪರಿಚಯವಾಗಿದ್ದ ಫೋರ್ಡ್ ಇಂಟರ್ಸೆಪ್ಟರ್ ಉಪಯುಕ್ತ ಕಾರು ಕೆಲವೇ ಸಮಯಗಳಲ್ಲಿ ಅಮೆರಿಕ ಪೊಲೀಸ್‌ನ ಫೇವರಿಟ್ ವಾಹನವೆನಿಸಿಕೊಂಡಿತ್ತಲ್ಲದೆ ಅತಿ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಂಡಿತ್ತು.
ಇದಕ್ಕೊಂದು ನಿದರ್ಶನವೆಂಬಂತೆ ಅಮೆರಿಕ ಕಾನೂನು ಜಾರಿ ನಿರ್ದೇಶನಾಲಯದ ಒಟ್ಟು ವಾಹನಗಳ ಪೈಕಿ ಶೇಕಡಾ 55ರಷ್ಟನ್ನು ಫೋರ್ಡ್ ಆಕ್ರಮಿಸಿಕೊಂಡಿದೆ.
ಆಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಹೊಂದಿರುವ ಫೋರ್ಡ್ ಪೊಲೀಸ್ ಇಂಟರ್ಸೆಪ್ಟರ್ ವಾಹನವು 3.7 ಲೀಟರ್ ವಿ6 ಎಂಜಿನ್ ಪಡೆಯಲಿದ್ದು, 304 ಅಶ್ವಶಕ್ತಿ ಉತ್ಪಾದಿಸಲಿದೆ. ಅಂತೆಯೇ ಇದರ 3.5 ಲೀಟರ್ ಇಕೊಬೂಸ್ಟ್ ವಿ6 ಎಂಜಿನ್ 365 ಅಶ್ವಶಕ್ತಿ ಉತ್ಪಾದಿಸಲಿದೆ. ಇವೆರಡು ಎಂಜಿನ್‌ಗಳು ಸಿಕ್ಸ್ ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.
ವಿಶಿಷ್ಟತೆ
ಯೂನಿಕ್ ಕೂಲಿಂಗ್ ಸಿಸ್ಟಂ,
18 ಇಂಚಿನ ಸ್ಟೀಲ್ ವೀಲ್,
ಬ್ಲೈಂಡ್ ಸ್ಪಾಟ್ ಮಾಹಿತಿ ಸಿಸ್ಟಂ,
ಸಿಂಕ್ ಸ್ಪಾಟ್ ಮಾಹಿತಿ ಸಿಸ್ಟಂ,
ಕ್ರಾಸ್ ಟ್ರಾಫಿಕ್ ಅಲರ್ಟ್,
ರಿವರ್ಸ್ ಸೆನ್ಸಿಂಗ್ ಸಿಸ್ಟಂ


Click it and Unblock the Notifications








