ದೈನಂದಿನ 30 ಕೀ.ಮೀ. ರಸ್ತೆ ನಿರ್ಮಾಣಕ್ಕೆ ಸರಕಾರ ಯೋಜನೆ
ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ದೈನಂದಿನ 30 ಕೀ.ಮೀ. ರಸ್ತೆ ನಿರ್ಮಿಸುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉತ್ತರ ನೀಡಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ದೈನಂದಿನ 30 ಕೀ.ಮೀ. ರಸ್ತೆ ನಿರ್ಮಿಸುವುದಾಗಿ ಗಡ್ಕರಿ ತಿಳಿಸಿದ್ದಾರೆ. ಪ್ರಸ್ತುತ ದೈನಿಕ 11 ಕೀ.ಮೀ. ರಸ್ತೆಯನ್ನು ನಿರ್ಮಿಸುತ್ತಿದೆ.

ಇದೇ ಸಂದರ್ಭದಲ್ಲಿ ಭೂ ಸ್ವಾಧೀನ, ಪರಿಸರ ಹಾಗೂ ಅರಣ್ಯ ತೆರವು ತೊಡಕುಗಳಿಂದಾಗಿ ಭಾರತದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ (ಎನ್‌ಎಚ್‌ಎಐ) ಹಲವಾರು ಯೋಜನೆಗಳು ತೀವ್ರ ವಿಳಂಬವಾಗುತ್ತಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.
ಈ ನಿಟ್ಟಿನಲ್ಲಿ ಸರಕಾರವು ಹೊಸ ಮಾದರಿಯ ಒಪ್ಪಂದದೊಂದಿಗೆ ಮುಂದೆ ಬರಬೇಕಾದ ಅಗತ್ಯವಿದೆ ಎಂದವರು ವಿವರಿಸಿದ್ದಾರೆ.


Click it and Unblock the Notifications








