ವರ್ಷಾಂತ್ಯದ ಮಾರಾಟದಲ್ಲಿ ಗೆದ್ದು ಬೀಗಿದ ಹೋಂಡಾ

By Nagaraja

2014 ಡಿಸೆಂಬರ್ ತಿಂಗಳ ಮಾರಾಟದಲ್ಲಿ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಸಂಸ್ಥೆಯು ಭರ್ಜರಿ ಮಾರಾಟವನ್ನು ಕಂಡುಕೊಂಡಿದೆ.

ಕಳೆದ ತಿಂಗಳಿನಲ್ಲಿ ಜಪಾನ್ ಮೂಲದ ಸಂಸ್ಥೆಯು ಒಟ್ಟು 14,428 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5,493 ಯುನಿಟ್ ಮಾತ್ರ ಮಾರಾಟ ದಾಖಲಿಸಿತ್ತು. ಈ ಮೂಲಕ ಭರ್ಜರಿ ಶೇಕಡಾ 163ರಷ್ಟು ಮಾರಾಟ ವೃದ್ಧಿ ಕಂಡುಕೊಂಡಿದೆ.

honda Amaze

ಅಲ್ಲದೆ 2014ನೇ ಸಾಲಿನಲ್ಲಿ ಜನವರಿಯಿಂದ ಡಿಸೆಂಬರ್ ವರೆಗಿನ 12 ತಿಂಗಳುಗಳ ಅವಧಿಯಲ್ಲಿ 179,816 ಯುನಿಟ್‌ಗಳ ಮಾರಾಟ ದಾಖಲಿಸಿದೆ. ಕಳೆದ ವರ್ಷವಿಂದು 107,661 ಯುನಿಟ್‌ಗಳಾಗಿತ್ತು. ಈ ಮೂಲಕ ಶೇಕಡಾ 67ರಷ್ಟು ಮಾರಾಟ ಏರಿಕೆ ದಾಖಲಿಸಿದೆ.

ಇನ್ನುಳಿದಂತೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ (ಎಪ್ರಿಲ್‌ನಿಂದ ಡಿಸೆಂಬರ್ ವರೆಗೆ) ಇದುವರೆಗೆ ಒಟ್ಟು 131,133 ಯುನಿಟ್‌ಗಳ ಮಾರಾಟ ಕಂಡಿದೆ. ಇಲ್ಲೂ ಶೇ. 53ರಷ್ಟು ಏರಿಕೆ ದಾಖಲಿಸಿದೆ. ಕಳೆದ ಬಾರಿ ಈ ಸಂಖ್ಯೆಯು 85,656 ಯುನಿಟ್‌ಗಳಾಗಿತ್ತು. ಹೋಂಡಾ ಯಶಸ್ಸಿನಲ್ಲಿ ಸಿಟಿ ಸೆಡಾನ್, ಮೊಬಿಲಿಯೊ ಎಂಪಿವಿ ಹಾಗೂ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರುಗಳು ಪ್ರಮುಖ ಪಾತ್ರ ವಹಿಸಿತ್ತು.

ಹೋಂಡಾ 2014 ಡಿಸೆಂಬರ್ ಮಾರಾಟ (ಯುನಿಟ್‌ಗಳಲ್ಲಿ)

ಬ್ರಿಯೊ - 1120
ಅಮೇಜ್ - 5176
ಮೊಬಿಲಿಯೊ - 2098
ಸಿಟಿ - 6012
ಸಿಆರ್-ವಿ - 22

ದೇಶಿಯ ಮಾರಾಟ - 14428
ರಫ್ತು - 620

ಒಟ್ಟು ಮಾರಾಟ - 15048

More from DriveSpark

Article Published On: Friday, January 2, 2015, 17:43 [IST]
English summary
Honda Cars India Ltd. (HCIL), one of India's leading manufacturer of premium cars, has clocked 14,428 units of domestic sales in the month of December 2014 as against 5,493 units sold during December 2013, registering a sales growth of 163 percent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+