ಮತ್ತೆರಡು ಆಕರ್ಷಕ ಮಾದರಿ ಬಿಡುಗಡೆಗೆ ಹೋಂಡಾ ತಯಾರಿ

Written By:

ಡೀಸೆಲ್ ಕಾರುಗಳ ಮೂಲಕ ದೇಶದಲ್ಲಿ ಮೋಡಿ ಮಾಡಿರುವ ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಪ್ರಸಕ್ತ ಸಾಲಿನಲ್ಲಿ ಮತ್ತೆರಡು ಹೊಚ್ಚ ಹೊಸ ಮಾದರಿಗಳನ್ನು ಪರಿಚಯಿಸುವ ಯೋಜನೆಯನ್ನು ಹೊಂದಿದೆ.

ಇದು ಹೋಂಡಾ ಪ್ರತಿಷ್ಠೆಯನ್ನು ಇನ್ನಷ್ಟು ಎತ್ತಿ ಹಿಡಿಯುವ ನಿರೀಕ್ಷೆಯಿದೆ. ಕಳೆದ ವರ್ಷ ಅಂದರೆ 2014ನೇ ಸಾಲಿನಲ್ಲಿ ಸಿಟಿ ಸೆಡಾನ್ ಹಾಗೂ ಮೊಬಿಲಿಯೊ ಎಂಪಿವಿ ಮಾದರಿಗಳನ್ನು ಬಿಡುಗಡೆ ಮಾಡಿದ್ದ ಹೋಂಡಾ ಸಂಸ್ಥೆಯು ಮಾರಾಟದಲ್ಲಿ ಗಣನೀಯ ವರ್ಧನೆ ದಾಖಲಿಸಲು ಯಶಸ್ವಿಯಾಗಿತ್ತು.

To Follow DriveSpark On Facebook, Click The Like Button
honda jazz

ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿರುವ ಹೋಂಡಾ ಸಂಸ್ಥೆಯೀಗ, ಬಹುನಿರೀಕ್ಷಿತ ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಹಾಗೂ ಅಕಾರ್ಡ್ ಪ್ರೀಮಿಯಂ ಸೆಡಾನ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ನಿಮ್ಮ ಮಾಹಿತಿಗಾಗಿ, ಈ ಹಿಂದೆ ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾರಾಟವನ್ನು ನಿಲುಗಡೆಗೊಳಿಸಲಾಗಿತ್ತು. ಆದರೆ ಇದೀಗ ಇನ್ನಷ್ಟು ಬದಲಾವಣೆಗಳೊಂದಿಗೆ ಹೊಸ ಪೀಳಿಗೆಯ ಜಾಝ್ ಎಂಟ್ರಿ ಕೊಡಲಿದೆ. ಇವೆರಡನ್ನು ಸ್ಥಳೀಯವಾಗಿ ಜೋಡಣೆ ಮಾಡುವ ಮೂಲಕ ಸ್ಮರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ಭರವಸೆಯಲ್ಲಿದೆ.

honda accord

ಪೆಟ್ರೋಲ್ ಜೊತೆಗೆ ಡೀಸೆಲ್ ಜಾಝ್ ಮಾದರಿಗಳನ್ನು ಹೋಂಡಾ ಬಿಡುಗಡೆ ಮಾಡಲಿದೆ. ಇದ 1.2 ಲೀಟರ್ ಪೆಟ್ರೋಲ್ ಎಂಜಿನ್ 87 ಬಿಎಚ್‌ಪಿ (109 ಎನ್‌ಎಂ ಟಾರ್ಕ್) ಅಂತೆಯೇ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ 99 ಅಶ್ವಶಕ್ತಿ (200 ಎನ್‌‍ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಫೋಕ್ಸ್‌ವ್ಯಾಗನ್ ಪೊಲೊ, ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಎಲೈಟ್ ಐ20 ಸವಾಲನ್ನು ಎದುರಿಸಲಿದೆ.

ಹಾಗೆಯೇ ಪ್ರೀಮಿಯಂ ಸೆಡಾನ್ ಅಕಾರ್ಡ್ ಕೂಡಾ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳನ್ನು ಪಡೆಯಲಿದೆ. ಹಾಗಿದ್ದರೂ ಆಟೋಮ್ಯಾಟಿಕ್ ವೆರಿಯಂಟ್ ಪರಿಚಯಸಲಾಗುವುದೇ ಎಂಬುದು ಇನ್ನು ತಿಳಿದು ಬಂದಿಲ್ಲ. ಇದು ಪ್ರಮುಖವಾಗಿಯೂ ಟೊಯೊಟಾ ಕ್ಯಾಮ್ರಿ, ಹ್ಯುಂಡೈ ಎಲಂಟ್ರಾ ಮಾದರಿಗಳಿಗೆ ಸ್ಪರ್ಧೆ ಒಡ್ಡಲಿದೆ.

ಇಷ್ಟೆಲ್ಲ ಆದರೂ ಯಾವಾಗ ಬುಡಗಡೆಯಾಗಲಿದೆ ಎಂಬುದು ತಿಳಿದು ಬಂದಿಲ್ಲ. ಬಲ್ಲ ಮೂಲಗಳ ಪ್ರಕಾರ ಜಾಝ್ ಹ್ಯಾಚ್‌ಬ್ಯಾಕ್ 2015 ಮಧ್ಯಂತರ ಅವಧಿಯಲ್ಲಿ ಹಾಗೂ ಅಕಾರ್ಡ್ ಲಗ್ಷುರಿ ಸೆಡಾನ್ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. 

English summary
Japanese automobile giant Honda is a popular brand all across the globe. They have introduced several new cars in India, which have become an instant success story among buyers.
Story first published: Monday, January 5, 2015, 14:10 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark