ಹೋಂಡಾ ಅಮೇಜ್, ಬ್ರಿಯೊ ಹೊಸ ವೆರಿಯಂಟ್ ಬಿಡುಗಡೆ

By Nagaraja

ದೇಶದ ಮುಂಚೂಣಿಯ ಕಾರು ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ತನ್ನ ಜನಪ್ರಿಯ ಮಾದರಿಗಳಾದ ಅಮೇಜ್ ಕಾಂಪಾಕ್ಟ್ ಸೆಡಾನ್ ಹಾಗೂ ಬ್ರಿಯೊ ಹ್ಯಾಚ್‌ಬ್ಯಾಕ್ ಮಾದರಿಗಳ ಹೊಸ ವೆರಿಯಂಟ್‌ಗಳನ್ನು ಬಿಡುಗಡೆ ಮಾಡಿದೆ.

ಹೊಸತಾದ ಅಮೇಜ್ ವಿಎಕ್ಸ್ (ಆಪ್ಷನಲ್) ವೆರಿಯಂಟ್ ಈಗಿರುವ ವಿಎಕ್ಸ್‌ಗಿಂತಲೂ ಮೇಲ್ಗಡೆ ಗುರುತಿಸಿಕೊಳ್ಳಲಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಅದೇ ರೀತಿ ಬ್ರಿಯೊ ಸಾಲಿನಲ್ಲಿ ಹೊಸತಾದ ವಿಎಕ್ಸ್ ವೆರಿಯಂಟ್ ಆಕರ್ಷಕ ಬ್ಲ್ಯಾಕ್ ಇಂಟಿರಿಯರ್ ಪಡೆದುಕೊಳ್ಳಲಿದೆ. ವಿಶೇಷವೆಂದರೆ ಇವೆರಡು ಮಾದರಿಗಳಲ್ಲಿ ಆಡಿಯೋ-ವಿಡಿಯೋ ನೇವಿಗೇಷನ್ ಸಿಸ್ಟಂ (ಎವಿಎನ್) ಪ್ರಮುಖ ವೈಶಿಷ್ಟ್ಟ್ಯವಾಗಿರಲಿದೆ.

honda Amaze

ಇನ್ನು ಬ್ರಿಯೊ ಹಾಗೂ ಅಮೇಜ್ ಮಾದರಿಗಳಲ್ಲಿ ಸ್ಪಿಡೋಮೀಟರ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್ ಸೈಡ್ ರಿಯರ್ ವ್ಯೂ ಮಿರರ್‌ಗಳು ಕಾರಿಗೆ ಇನ್ನಷ್ಟು ಪ್ರೀಮಿಯಂ ಲುಕ್ ನೀಡಲಿದೆ. ನಿಮ್ಮ ಮಾಹಿತಿಗಾಗಿ, ಪವರ್ ಫೋಲ್ಡಬಲ್ ಒಆರ್‌ವಿಎಂ ಹಾಗೂ ರಿಯರ್ ಡಿಫಾಗರ್ ಸೌಲಭ್ಯಗಳು ಅಮೇಜ್ ಎಸ್‌ಎಕ್ಸ್ ವೆರಿಯಂಟ್‌ನಿಂದಲೇ ಲಭ್ಯವಾಗಲಿದೆ.

ಆಡಿಯೋ ವಿಡಿಯೋ ನೇವಿಗೇಷನ್ ಸಿಸ್ಟಂ:

  • 15.7 ಸೆಂಟಿಮೀಟರ್ ಸ್ಕ್ರೀನ್, ಮ್ಯಾಪ್,
  • ಸ್ಯಾಟಲೈಟ್ ತಳಹದಿಯ ವಾಯ್ಸ್ ಗೈಡ್ ನೇವಿಗೇಷನ್,
  • ಕಂಪ್ಲೀಟ್ ಇನ್ ಕಾರು ಮನರಂಜನೆ,
  • ಕನೆಕ್ಟಿವಿಟಿ ಫೀಚರ್ (ಡಿವಿಡಿ/ಸಿಡಿ, ಬ್ಲೂಟೂತ್, ಯುಎಸ್‌ಬಿ, ಆಕ್ಸ್, ಐ-ಪಾಡ್, ಎಂಪಿ3, ಎಫ್‌ಎಂ/ಎಎಂ)

honda brio
ನಿಮ್ಮ ಮಾಹಿತಿಗಾಗಿ 2013 ಎಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಹೋಂಡಾ ಅಮೇಜ್ ಈಗಾಗಲೇ 1.25 ಲಕ್ಷಗಿಂತಲೂ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಂಡಿದೆ. ಇದು 1.5 ಲೀಟರ್ ಐ-ಡಿಟೆಕ್ ಡೀಸೆಲ್ ಹಾಗೂ 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಅಂತೆಯೇ 2011ನೇ ಇಸವಿಯಲ್ಲಿ ಬಿಡುಗಡೆಯಾಗಿರುವ ಬ್ರಿಯೊ, ಇದುವರೆಗೆ 70,000 ಹೆಚ್ಚು ಹೆಮ್ಮೆಯ ಮಾಲಿಕರನ್ನು ಪಡೆದುಕೊಂಡಿದೆ.

More from DriveSpark

Article Published On: Tuesday, January 13, 2015, 12:58 [IST]
English summary
Honda Cars India Ltd. (HCIL), leading manufacturer of premium cars in India, today introduced the new enriched range of Honda Amaze and Honda Brio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+