ಏರ್ ಬ್ಯಾಗ್ ಸಮಸ್ಯೆ; ಹೋಂಡಾದಿಂದ ಜನಪ್ರಿಯ ಮಾದರಿಗಳ ಹಿಂದಕ್ಕೆ ಕರೆ
ಏರ್ ಬ್ಯಾಗ್ ವಾಯುಪೂರಕಗಳಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತನ್ನ ಜನಪ್ರಿಯ ಮಾದರಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ನಿರ್ಧರಿಸಿದೆ.
ಪ್ರಸ್ತುತ ಅಕಾರ್ಡ್ ಹಾಗೂ ಸಿಆರ್-ವಿ ಮಾದರಿಗಳಿಗೆ ವಾಪಾಸ್ ಕರೆ ನೀಡಲಾಗಿದೆ. ಇದು ಜಾಗತಿಕ ರಿಕಾಲ್ ನ ಭಾಗವಾಗಿರಲಿದೆ. ಬಾಹ್ಯ ಸಂಸ್ಥೆ ಪೂರೈಸುತ್ತಿರುವ ಏರ್ ಬ್ಯಾಗ್ ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

575 ಯುನಿಟ್ ಗಳಷ್ಟು ಸಿಆರ್ ವಿ ಹಾಗೂ 10,805 ಗಳಷ್ಟು ಅಕಾರ್ಡ್ ಮಾದರಿಗಳನ್ನು ಹಿಂದಕ್ಕೆ ಕರೆಯಿಸಲಾಗಿದ್ದು, ಉಚಿತವಾಗಿ ತೊಂದರೆ ಸರಿಪಡಿಸಿಕೊಡಲಾಗುವುದು ಎಂದು ಹೋಂಡಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

2003ರಿಂದ 2007ರ ವರೆಗಿನ ಅವಧಿಯಲ್ಲಿ ನಿರ್ಮಾಣವಾದ ಮಾದರಿಗಳನ್ನು ಹಿಂಪಡೆಯಲಾಗುತ್ತಿದೆ. ಹಾಗಿದ್ದರೂ ಪ್ರಸ್ತುತ ದೇಶದಲ್ಲಿ ಯಾವುದೇ ಅವಘಡ ಪ್ರಸಂಗಗಳು ಎದುರಾಗಿಲ್ಲ. ಈಗ ನಿಮ್ಮ ಕಾರಿಗೂ ಸಮಸ್ಯೆ ತಟ್ಟಿದೆಯೇ ಎಂಬುದನ್ನು ವಾಹನ ಗುರುತು ಸಂಖ್ಯ ಲಗತ್ತಿಸಿ ಪರಿಶೀಲಿಸಬಹುದಾಗಿದೆ. ಇದಕ್ಕಾಗಿ ಇಲ್ಲಿ ಕ್ಲಿಡ್ ಮಾಡಿ


Click it and Unblock the Notifications