ಹೋಂಡಾ ಇಂಟೆಲಿಜೆಂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್
ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಹೊಸತಾದ ಇಂಟೆಲಿಜೆಂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಐ-ಎಸಿಸಿ) ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.
ವಿಪರೀತ ವಾಹನ ದಟ್ಟಣೆಯಲ್ಲಿ ಎದುರಾಗುವ ಅಪಘಾತ ತಡೆಗಟ್ಟುವುದು ಹೊಸ ತಂತ್ರಗಾರಿಕೆಯ ಪ್ರಮುಖ ಉದ್ದೇಶವಾಗಿದೆ.

ಪ್ರಸ್ತುತ ವ್ಯವಸ್ಥೆಯು ಕ್ಯಾಮೆರಾ ಹಾಗೂ ರಾಡರ್‌ಗಳಿಂದ ಕೆಲಸ ಮಾಡಲಿದ್ದು, ಹದ್ದಿನ ಕಣ್ಣಿನಂತೆ ನಿರಂತರವಾಗಿ ಟ್ರಾಫಿಕ್ ಆಗು ಹೋಗುಗಳನ್ನು ಗಮನಿಸಲಿದೆ. ಅಲ್ಲದೆ ನಿಮ್ಮ ಲೇನ್‌ಗೆ ಇತರ ವಾಹನಗಳು ಬಂದಪ್ಪಳಿಸುತ್ತಿದೆಯೇ ಎಂಬುದರ ಬಗ್ಗೆಯೂ ಮಾಹಿತಿ ನೀಡಲಿದೆ.
ಸಮಾನ ಅಂತರವನ್ನು ಕಾಪಾಡಿಕೊಂಡು ಸುರಕ್ಷತೆಯ ಚಾಲನೆಗೆ ಪ್ರೋತ್ಸಾಹ ನೀಡುವುದು ಹೋಂಡಾ ಗುರಿಯಾಗಿದೆ. ಇದನ್ನು ಯಾವ ತರಹ ಅಭಿವೃದ್ಧಿಪಡಿಸಲಾಗಿದೆ ಎಂದರೆ ಇತರ ವಾಹನಗಳು ಲೇನ್ ತಪ್ಪಿಸುವ ಐದು ಸೆಕೆಂಡುಗಿಂತಲೂ ಮೊದಲೇ ಮಾಹಿತಿ ನಿಮ್ಮನ್ನು ತಲುಪಲಿದೆ. ಇದು ಚಾಲಕರನ್ನು ಎಚ್ಚರಿಸುವಂತೆಯು ಅಂತರ ಕಾಪಾಡಿಕೊಂಡು ಮುಂದುವರಿಯಲು ಸಹಕರಿಸಲಿದೆ.
ಯುರೋಪ್ ರಸ್ತೆಯಲ್ಲಿ ವಾಹನ ಚಾಲನೆ ಮಾಡುವ ಚಾಲಕರ ವರ್ತನೆಯ ಆಧಾರದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಅಂದ ಹಾಗೆ 2015 ಹೋಂಡಾ ಸಿಆರ್-ವಿ ಮಾದರಿಯಲ್ಲಿ ಇದು ಆಳವಡಿಕೆಯಾಗಲಿದೆ.


Click it and Unblock the Notifications








