ಹೋಂಡಾ ಜಾಝ್ ಬಿಡುಗಡೆ ಮತ್ತಷ್ಟು ವಿಳಂಬ ಏಕೆ?
ಬಹುನಿರೀಕ್ಷಿತ ಹೋಂಡಾ ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಬಿಡುಗಡೆ ಮತ್ತಷ್ಟು ವಿಳಂಬವಾಗುತ್ತಿದೆ. ತವರೂರಾದ ಜಪಾನ್ ಮಾರುಕಟ್ಟೆಗೆ ಕಳೆದ ವರ್ಷವೇ ಎಂಟ್ರಿ ಕೊಟ್ಟಿದ್ದ ಹೋಂಡಾ ಜಾಝ್ 2015 ವರ್ಷಾರಂಭದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಬೇಕಾಗಿತ್ತು.
ಆದರೆ ಕಾರಣಾಂತರಗಳಿಂದಾಗಿ ಬಿಡುಗಡೆ ಪ್ರಕ್ರಿಯೆ ಮುಂದಿನ ಜೂನ್ ತಿಂಗಳ ವರೆಗೆ ಮುಂದುವರಿದಿದೆ. ನಿರ್ಮಾಣ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಡುಗಡೆ ವಿಳಂಬವಾಗುತ್ತಿದೆ ಎಂಬ ಕಾರಣ ಕೇಳಿಬರುತ್ತಿದೆ.

ಗ್ರಾಹಕರ ಹತ್ತಿರ ಹೆಚ್ಚೆಚ್ಚು ತಲುಪುವುದು ಹೋಂಡಾ ಉದ್ದೇಶವಾಗಿದೆ. ಇದಕ್ಕಾಗಿ ಸ್ಥಳೀಯವಾಗಿ ಜೋಡಣೆ ಪ್ರಕ್ರಿಯೆಗೆ ಚಾಲಣೆ ನೀಡಲಿದೆ. ಪ್ರಸ್ತುತ ಜಾಝ್ ಕಾರು ಭಾರತದಿಂದಲೇ ದಕ್ಷಿಣ ಆಫ್ರಿಕಾಗೆ ರಫ್ತಾಗುತ್ತಿದೆ.
ಎಂಜಿನ್ ತಾಂತ್ರಿಕತೆ
ಪೆಟ್ರೋಲ್ - 1.2 ಲೀಟರ್ ಐ-ವಿಟೆಕ್ ಎಂಜಿನ್, 87 ಅಶ್ವಶಕ್ತಿ, 110 ತಿರುಗುಬಲ.
ಡೀಸೆಲ್ - 1.5 ಲೀಟರ್ ಐ-ಡಿಟೆಕ್, 99 ಅಶ್ವಶಕ್ತಿ, 200 ತಿರುಗುಬಲ

ಇನ್ನು ಪೆಟ್ರೋಲ್ ಮಾದರಿಯು 5 ಸ್ಪೀಡ್ ಮ್ಯಾನುವಲ್ ಅಥವಾ ಐಚ್ಛಿಕ ಸಿವಿಟಿ ಗೇರ್ ಬಾಕ್ಸ್ ಪಡೆಯಲಿದೆ. ಅದೇ ಹೊತ್ತಿಗೆ ಡೀಸೆಲ್ ಮಾದರಿಯಲ್ಲಿ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇರಲಿದೆ.
ಸುರಕ್ಷತೆ
ಎಬಿಎಸ್,
ಇಬಿಡಿ,
ವಾಹನ ಸ್ಥಿರತೆ ನಿಯಂತ್ರಣ,
ಮುಂಭಾಗದ ಪ್ರಯಾಣಿಕರಿಗಾಗಿ ಡ್ಯುಯಲ್ ಏರ್ ಬ್ಯಾಗ್,
ಬದಿಯ ಮತ್ತು ಕರ್ಟೈನ್ ಏರ್ ಬ್ಯಾಗ್
ಇನ್ನು ಕಾರಿನ ಒಳಮೈ ಸಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದ್ದು, ಸ್ಟೀರಿಂಗ್ ವೀಲ್‌ನಲ್ಲೇ ಆಡಿಯೋ ಕಂಟ್ರೋಲ್ ಇರಲಿದೆ. ಅಂತೆಯೇ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಯುಎಸ್‌ಬಿ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಲಭ್ಯವಾಗಲಿದೆ.


Click it and Unblock the Notifications