ಹೋಂಡಾ ಜಾಝ್ ಹ್ಯಾಚ್‌ಬ್ಯಾಕ್ ಆಯ್ತು; ಈಗ ಕ್ರಾಸೋವರ್ ಟೆಸ್ಟಿಂಗ್!
ವಾಹನ ಪ್ರೇಮಿಗಳಿಗೆ ಮಗದೊಂದು ಖುಷಿ ಸುದ್ದಿ ಬಂದಿದ್ದು, ಹೋಂಡಾ ಝಾಜ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿನ ಬಳಿಕ ಅತಿ ನೂತನ ಕ್ರಾಸೋವರ್ ಮಾದರಿಯು ಬಿಡುಗಡೆಗೊಳ್ಳಲು ಸಜ್ಜಾಗುತ್ತಿದೆ.
Also Read: ಭಾರತಕ್ಕೆ ಕಾಲಿಡಲಿರುವ ಹೋಂಡಾ ಬಿಆರ್ ವಿ
ವಾಹನೋದ್ಯಮದಿಂದ ಬಂದಿರುವ ಮಾಹಿತಿಗಳ ಪ್ರಕಾರ ನೂತನ ಹೋಂಡಾ ಜಾಝ್ ಕ್ರಾಸೋವರ್ ಕಾರು ಬ್ರೆಜಿಲ್‌ನಲ್ಲಿ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿದೆ. ಇದು ಬಹುಬೇಗನೇ ಜಾಗತಿಕ ಮಾರುಕಟ್ಟೆ ತಲುಪಲಿದ್ದು, ತದಾ ಬಳಿಕ ಭಾರತಕ್ಕೂ ಕಾಲಿಡಲಿದೆ.

ಹೋಂಡಾ ಜಾಝ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿನ ಹೈಬ್ರಿಡ್ ಮಾದರಿಗೆ ತವರೂರಾದ ಜಪಾನ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೇಡಿಕೆ ದಾಖಲಾಗಿತ್ತು. ತದಾ ಬಳಿಕ ಭಾರತ ಮಾರುಕಟ್ಟೆಯನ್ನು ತಲುಪಿತ್ತು.

ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಹೋಂಡಾ ಜಾಝ್ ಕ್ರಾಸೋವರ್ ಕಾರು ಅನಾವರಣಗೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಕ್ರಾಸೋವರ್ ವಿಭಾಗಕ್ಕೂ ಹೋಂಡಾ ಕಾಲಿಡಲಿದೆ.

ಕ್ರಾಸೋವರ್ ಕಾರಿಗೆ ಹೊಂದಿಕೆಯಾಗುವ ರೀತಿಯಲ್ಲಿ ಹೊಸ ಜಾಝ್ ಕಾರಿನಲ್ಲಿ ರೂಫ್ ರೈಲ್, ಪ್ಲಾಸ್ಟಿಕ್ ರಬ್ಬರ್ ಸೈಡ್ ಕ್ಲಾಡಿಂಗ್, ವರ್ಧಿತ ಗ್ರೌಂಡ್ ಕ್ಲಿಯರನ್ಸ್, ಪರಿಷ್ಕೃತ ಬಂಪರ್, ದೊಡ್ಡದಾದ ಚಕ್ರ, ಸ್ಕಿಡ್ ಪ್ಲೇಟ್ ಮುಂತಾದ ಸೌಲಭ್ಯಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಹಾಗಿದ್ದರೂ ಭಾರತ ಮಾದರಿಯ ಎಂಜಿನ್ ತಂತ್ರಗಾರಿಕೆಯಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆಯು ಕಡಿಮೆಯಾಗಿದೆ. ಇದರಲ್ಲೂ ಹೋಂಡಾ ಜಾಝ್ ಕಾರಿನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಮಾನದಂಡಗಳು ಕಂಡುಬರಲಿದೆ.

ಭಾರತ ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಹ್ಯುಂಡೈ ಐ20 ಕ್ರಾಸ್, ಫೋಕ್ಸ್ ವ್ಯಾಗನ್ ಪೊಲೊ ಕ್ರಾಸ್, ಟೊಯೊಟಾ ಎಟಿಯೋಸ್ ಕ್ರಾಸ್, ಮಾರುತಿ ಸುಜುಕಿ ಎಸ್-ಕ್ರಾಸ್ ಹಾಗೂ ಫಿಯೆಟ್ ಅವೆಂಚ್ಯುರಾ ಮಾದರಿಗಳಿಗೆ ನೂತನ ಜಾಝ್ ಪ್ರತಿಸ್ಪರ್ಧಿಯಾಗಲಿದೆ.

ಅಷ್ಟಕ್ಕೂ ನೂತನ ಜಾಝ್ ಕ್ರಾಸೋವರ್ ಕಾರಿನ ಹೆಸರೇನು ಗೊತ್ತೇ? ಅದುವೇ ಹೋಂಡಾ ಜಾಝ್ 'ಟ್ವಿಸ್ಟ್' ಕ್ರಾಸೋವರ್.


Click it and Unblock the Notifications