2020ರ ವೇಳೆಗೆ ಹೋಂಡಾ ಸ್ವಯಂಚಾಲಿತ ಕಾರು ರಸ್ತೆಗೆ
ಸಾಂಪ್ರಾದಾಯ ಕಾರುಗಳಿಗಿಂತಲೂ ವಿಭಿನ್ನವಾಗಿ ಭವಿಷ್ಯದ ಕಾರು ಕಲ್ಪನೆಯನ್ನು ರೂಪಿಸಲು ಹೊರಡಿರುವ ಗೂಗಲ್ ನಂತಹ ಜಗತ್ತಿನ ಅಗ್ರಗಣ್ಯ ಸಂಸ್ಥೆಗಳಿಂದ ಸ್ಪೂರ್ತಿ ಪಡೆದಿರುವ ಜಪಾನ್ ಮೂಲದ ದೈತ್ಯ ಸಂಸ್ಥೆಯಾಗಿರುವ ಹೋಂಡಾ, 2020ರ ವೇಳೆಯಾಗುವಾಗ ಚಾಲಕ ರಹಿತ ಸ್ವಯಂ ಚಾಲಿತ ಕಾರುಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿದೆ.
ಗೂಗಲ್ ಹೊರತಾಗಿ, ಟೊಯೆಟಾ ಮೋಟಾರು ಕಂಪನಿ, ನಿಸ್ಸಾನ್ ಮೋಟಾರು ಕಂಪನಿ ಹಾಗೂ ಡೈಮ್ಲರ್ ಕೂಡಾ ಇದೇ ರೇಸ್ ನಲ್ಲಿದೆ. ಆದರೆ 2020ರ ಟೊಕಿಯೊ ಒಲಿಂಪಿಕ್ಸ್ ವೇಳೆಯಾಗುವಾಗ ಸೆಲ್ಪ್ ಡ್ರೈವಿಂಗ್ ಕಾರನ್ನು ಮಾರುಕಟ್ಟೆಗಿಳಿಸುವುದು ಹೋಂಡಾ ಯೋಜನೆಯಾಗಿದೆ.

ಇದರಂತೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಬಹುನಿರೀಕ್ಷಿತ ಟೊಕಿಯೋ ಮೋಟಾರು ಶೋದಲ್ಲಿ ಪಾಲ್ಗೊಳ್ಳಲಿರುವ ಹೋಂಡಾ, 'ರೋಬೋಟ್' ಕಾರು ತಂತ್ರಜ್ಞಾನದ ಪರಿಕಲ್ಪನೆಯನ್ನು ಪರಿಚಯಿಸುವ ಸಾಧ್ಯತೆಯಿದೆ.
ಭವಿಷ್ಯದ ಪರಿಸರ ಸ್ನೇಹಿ ವಾಹಕ ನಿರ್ಮಾಣದಲ್ಲಿ ತೊಡಗಿರುವ ಜಗತ್ತಿನ ಮುಂಚೂಣಿಯ ಸಂಸ್ಥೆಯು ಸ್ವಯಂಚಾಲಿತ ಕಾರುಗಳನ್ನು ಅಭಿವೃದ್ಧಿಸುತ್ತಿದೆ. ಈ ನಿಟ್ಟಿನಲ್ಲಿ ಹೋಂಡಾ ಸಹ ವಾಹನ ಜಗತ್ತಿಗೆ ತನ್ನ ಕೊಡುಗೆಯನ್ನು ನೀಡಲು ಬದ್ಧವಾಗಿದೆ.


Click it and Unblock the Notifications