ಚಿಕಾಗೊ ಆಟೋ ಶೋದಲ್ಲಿ ಹೋಂಡಾ ಪೈಲಟ್ ಎಂಟ್ರಿ
ಜಗತ್ತಿನ ಅತ್ಯಂತ ಆಕರ್ಷಕ ವಾಹನ ಪ್ರದರ್ಶನ ಮೇಳಗಳಲ್ಲಿ ಒಂದಾಗಿರುವ 2015 ಚಿಕಾಗೊ ಆಟೋ ಶೋ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದರಂತೆ ಈ ಪ್ರಖ್ಯಾತ ವಾಹನ ಆಟೋ ಶೋದಲ್ಲಿ ಜಪಾನ್‌ನ ಆಟೋ ದೈತ್ಯ ಸಂಸ್ಥೆಯಾಗಿರುವ ಹೋಂಡಾ ನೂತನ ಪೈಲಟ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಪ್ರದರ್ಶಿಸಲಿದೆ.
ನಿಮ್ಮ ಮಾಹಿತಾಗಿ, 2015 ಚಿಕಾಗೊ ಆಟೋ ಶೋ ಮುಂಬರುವ ತಿಂಗಳು ಫೆಬ್ರವರಿ 12ರಂದು ಆರಂಭವಾಗಲಿದೆ. ಇದರಂತೆ ನೂತನ ಪೈಲಟ್ ಮಾದರಿಗೆ ಸಂಬಂಧಿಸಿದಂತೆ ಆಕರ್ಷಕ ಟೀಸರ್ ಚಿತ್ರವನ್ನು ಹೋಂಡಾ ಬಿಡುಗಡೆಗೊಳಿಸಿದೆ.

2016ರಲ್ಲಿ ಎಂಟ್ರಿ ಕೊಡಲಿರುವ ಪೈಲಟ್ ಎಸ್‌ಯುವಿ ಈಗಾಗಲೇ ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ. ಮೂರು ಸಾಲಿನ ಆಸನ ವ್ಯವಸ್ಥೆಯನ್ನು ಹೊಂದಿರುವ ಹೋಂಡಾ ಪೈಲಟ್ ಎಸ್‌ಯುವಿ ಎಂಟು ಪ್ರಯಾಣಿಕರನ್ನು ಹೊತ್ತುಕೊಂಡು ಹೋಗುವ ಸಾಧ್ಯತೆಯನ್ನು ಹೊಂದಿರಲಿದೆ.
ಮುಂದುವರಿದ ತಂತ್ರಜ್ಞಾನ, ಸುರಕ್ಷತೆ, ಇಂಧನ ಕ್ಷಮತೆ ಹಾಗೂ ಉಪಯುಕ್ತತೆ ಹೊಸ ಕಾರಿನ ವಿಶೇಷತೆಯಾಗಿದೆ. ಇನ್ನು ಗಮನಾರ್ಹ ಸಂಗತಿಯೆಂದರೆ 2016 ಪೈಲಟ್ ಎಸ್‌ಯುವಿ ಅಮೆರಿಕದಲ್ಲಿ ನಿರ್ಮಾಣವಾಗಲಿದೆ. ಹಾಗೆಯೇ 2015 ಸಿಆರ್-ವಿ ಮಾದರಿಯಿಂದ ಪ್ರೇರಣೆ ಪಡೆದು ರಚಿಸಲಾಗಿದೆಯೇ ಎಂಬುದು ಕುತೂಹಲಕ್ಕೆ ಎಡೆಮಾಡಿದೆ. ಇವೆಲ್ಲಕ್ಕೂ ಚಿಕಾಗೊ ಆಟೋ ಶೋ ವರೆಗೆ ಕಾದು ಕುಳಿತುಕೊಳ್ಳಬೇಕಾಗಿದೆ.


Click it and Unblock the Notifications








