ಬೆಂಗ್ಳೂರಲ್ಲೇ ಕೂತ್ಕೊಂಡು ಜಿನೆವಾಗೆ ಹಾಗೆ ಒಂದು ರೌಂಡ್ ಹಾಕ್ಕೊಂಡು ಬನ್ನಿ!
ವಾಹನೋದ್ಯಮದ ಪಾಲಿಗೆ ಜಿನೆವಾ ಮೋಟಾರು ಶೋ ಅತ್ಯಂತ ಮಹತ್ವದಾಯಕವೆನಿಸಿದೆ. ಜಗತ್ತಿನ ಪ್ರಮುಖ ಎಲ್ಲ ವಾಹನ ತಯಾರಿಕ ಸಂಸ್ಥೆಗಳು ತಮ್ಮ ತಮ್ಮ ನೂತನ ಕಾರು ಕಾನ್ಸೆಪ್ಟ್ ಜೊತೆಗೆ ಹೊಸ ಮಾದರಿಗಳೊಂದಿಗೆ ಮುಂದೆ ಬಂದಿವೆ.
ಇಂದಿನ ಈ ಲೇಖನದಲ್ಲಿ ಜಿನೆವಾದಲ್ಲಿ ಪ್ರದರ್ಶನ ಕಂಡಿರುವ ಕೆಲವು ಐಷಾರಾಮಿ ವಾಹನಗಳ ಬಗ್ಗೆ ಮಾಹಿತಿಗಳನ್ನು ಕೊಡಲಿದ್ದೇವೆ. ನೀವು ಕೂಡಾ ವಾಹನ ಪ್ರೇಮಿಯಾಗಿದ್ದಲ್ಲಿ ನಿಮಗೆ ಖಂಡಿತ ಈ ಲೇಖನ ಇಷ್ಟವಾಗಲಿದೆ ಎಂಬ ನಂಬಿಕೆ ನಮ್ಮದ್ದು. ಹಾಗಾದರೆ ಇನ್ಯಾಕೆ ತಡ ಜಿನೆವಾಗೆ ಹಾಗೆ ಒಂದು ರೌಂಡ್ ಹಾಕ್ಕೊಂಡು ಬನ್ನಿ...

2015 ಜಿನೆವಾ ಮೋಟಾರು ಶೋದ ಹಾಟ್ ಕಾರುಗಳಿಗಾಗಿ ಮುಂದುವರಿಯಿರಿ...

ಆಡಿ ಆರ್8 ವಿ10 ಪ್ಲಸ್
2015 ಜಿನೆವಾ ಮೋಟಾರು ಶೋದಲ್ಲಿ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ, ತನ್ನ ಅತ್ಯಂತ ಬೆಲೆ ಬಾಳುವ ಆರ್8 ಮಾದರಿಯು ಹೊಸತಾದ ಆರ್8 ವಿ10 ಪ್ಲಸ್ ಮಾದರಿಯನ್ನು ಪ್ರದರ್ಶಿಸಿದೆ.

ಆಡಿ ಆರ್8 ವಿ10 ಪ್ಲಸ್
10 ಸಿಲಿಂಡರ್ ಹೊಂದಿರುವ ಈ ಕಾರು ಬರೋಬ್ಬರಿ 610 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಕೇವಲ 3.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಜಿನೆವಾ ಹಾಟ್ ಕಾರುಗಳಿಗಾಗಿ ಹಾಗೆಯೇ ಮುಂದುವರಿಯಿರಿ...

ಫೆರಾರಿ 488 ಜಿಟಿಬಿ
ವೇಗ ಪ್ರಿಯರಿಗೆ ಮಗದೊಂದು ಖುಷಿ ಸುದ್ದಿ ಇಲ್ಲಿದೆ ನೋಡಿ. ಜಗತ್ತಿನ ಅತ್ಯಂತ ಪ್ರತಿಷ್ಠಿತ ಸೂಪರ್ ಕಾರು ಸಂಸ್ಥೆಗಳಲ್ಲಿ ಅಗ್ರಗಣ್ಯವಾಗಿರುವ ಫೆರಾರಿ ನೂತನ 488 ಜಿಟಿಬಿ ಪ್ರದರ್ಶಿಸಿದೆ.

ಫೆರಾರಿ 488 ಜಿಟಿಬಿ
ಫೆರಾರಿ 488 ಜಿಟಿಬಿ ಕಾರು ಟರ್ಬೊ ಚಾರ್ಜ್ಡ್ ಎಂಟು ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸ್ಪಟ್ಟಿದೆ.

ಜಿನೆವಾ ಹಾಟ್ ಕಾರುಗಳಿಗಾಗಿ ಹಾಗೆಯೇ ಮುಂದುವರಿಯಿರಿ...

ಮೆಕ್‌ಲ್ಯಾರೆನ್ ಪಿ1 ಜಿಟಿಆರ್ ಟ್ರ್ಯಾಕ್ ಕಾರು
ಮೆಕ್‌ಲ್ಯಾರೆನ್‌ನಿಂದ ನಿರ್ಮಾಣವಾಗಲಿರುವ ಕೊನೆಯ ಪಿ1 ಜಿಟಿಆರ್ ಕಾರು ಸಹ ಜಿನೆವಾದಲ್ಲಿ ಪ್ರದರ್ಶನ ಕಂಡಿದೆ. ಈ ಟ್ರ್ಯಾಕ್ ಕಾರಲ್ಲಿ ಏರೋಡೈನಾಮಿಕ್ ವಿನ್ಯಾಸಕ್ಕೆ ಒತ್ತು ಕೊಡಲಾಗಿದೆ.

ಮೆಕ್ ಲ್ಯಾರೆನ್ ಪಿ1 ಜಿಟಿಆರ್ ಟ್ರ್ಯಾಕ್ ಕಾರು 3.8 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 789 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ ಗರಿಷ್ಠ ನಿರ್ವಹಣೆಗಾಗಿ ಕಾರಿನ ಭಾರವನ್ನು ಗಣನೀಯವಾಗಿ ಕಠಿತಗೊಳಿಸಲಾಗಿದೆ.

ಜಿನೆವಾ ಹಾಟ್ ಕಾರುಗಳಿಗಾಗಿ ಹಾಗೆಯೇ ಮುಂದುವರಿಯಿರಿ...

ಮರ್ಸಿಡಿಸ್ ಬೆಂಝ್ ಮೆಬ್ಯಾಕ್ ಎಸ್600 ಪುಲ್ ಮ್ಯಾನ್
ಜಿನೆವಾ ಮೋಟಾರು ಶೋದಲ್ಲಿ 6.5 ಮೀಟರ್ ಉದ್ದದ ಬೆಂಝ್ ಮೇ ಬ್ಯಾಕ್ ಎಸ್600 ಫುಲ್ ಮ್ಯಾನ್ ಅಲ್ಟ್ರಾ ಲಗ್ಷುರಿ ಕಾರು ಅನಾವರಣಗೊಂಡಿದೆ. ಇದು 2016ರಲ್ಲಿ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆಯಿದೆ.

ಬೆಂಝ್ ಎಸ್ 600 ಪುಲ್ ಮ್ಯಾನ್ ಆರ್ಮರ್ ಪ್ಲೇಟಡ್ ವರ್ಷನ್ ಕೂಡಾ ತಯಾರಿಯಲ್ಲಿದೆ. ಇದರಲ್ಲಿ ಗರಿಷ್ಠ ಗುಣಮಟ್ಟದ ಪರಿಕರಗಳನ್ನು ಬಳಕೆ ಮಾಡಲಾಗಿದೆ.

ಜಿನೆವಾ ಹಾಟ್ ಕಾರುಗಳಿಗಾಗಿ ಹಾಗೆಯೇ ಮುಂದುವರಿಯಿರಿ...

ಲಂಬೋರ್ಗಿನಿ ಅವೆಂಟಡೊರ್ ಎಲ್‌ಪಿ 750-4 ಸೂಪರ್ ವೆಲೊಸ್
ಲಂಬೋರ್ಗಿನಿ ಅವೆಂಟಡೊರ್ ಎಲ್‌ಪಿ 750-4 ಸೂಪರ್ ವೆಲೊಸ್ ಅತ್ಯಂತ ಹಗುರ ಕಾರುಗಳಲ್ಲಿ ಒಂದಾಗಿದೆ. ಇದು ರಾಕೆಟ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಅವೆಂಟಡೊರ್ ಕ್ರೀಡಾ ಕಾರು ವರ್ಷನ್ ಆಗಿರುವ ಎಲ್‌ಪಿ 750-4 ಸೂಪರ್ ವೆಲೊಸ್ ಗಂಟೆಗೆ 350 ಕೀ.ಮೀ. ವೇಗದಲ್ಲಿ ಚಲಿಸಲಿದೆ.

ಜಿನೆವಾ ಹಾಟ್ ಕಾರುಗಳಿಗಾಗಿ ಹಾಗೆಯೇ ಮುಂದುವರಿಯಿರಿ...

ಫೋಕ್ಸ್ ವ್ಯಾಗನ್ ಸ್ಪೋರ್ಟ್ ಕೂಪೆ ಜಿಟಿಇ ಕಾನ್ಸೆಪ್ಟ್
ಫೋಕ್ಸ್ ವ್ಯಾಗನ್ ಭವಿಷ್ಯದ ಕಾರು ಎಂದೇ ಸ್ಪೋರ್ಟ್ ಕೂಪೆ ಜಿಟಿಎ ಕಾನ್ಸೆಪ್ಟ್ ಕಾರನ್ನು ಬಿಂಬಿಸಲಾಗುತ್ತಿದೆ. ವಿಶೇಷವೆಂದರೆ ಇದು ಪ್ಲನ್ ಇನ್ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದುಕೊಂಡಿದೆ.

ಫೋಕ್ಸ್ ವ್ಯಾಗನ್ ಸ್ಪೋರ್ಟ್ ಕೂಪೆ ಜಿಟಿಇ ಕಾನ್ಸೆಪ್ಟ್
ಇದರಲ್ಲಿ 3.0 ಲೀಟರ್ ವಿ6 ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಕಾಣಿಸಿಕೊಳ್ಳಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 241 ಕೀ.ಮೀ. ವೇಗವನ್ನು ಪಡೆಯಲಿದೆ.

ಜಿನೆವಾ ಹಾಟ್ ಕಾರುಗಳಿಗಾಗಿ ಹಾಗೆಯೇ ಮುಂದುವರಿಯಿರಿ...

ಆಸ್ಟನ್ ಮಾರ್ಟಿನ್ ವೋಲ್ಕನ್
ಟ್ರ್ಯಾಕ್ ಸ್ಪೆಷಲ್ ಕಾರು ಆಸ್ಟನ್ ಮಾರ್ಟಿನ್ ವೋಲ್ಕನ್ ಕಾರಿನ ಬೃಹತ್ತಾದ 7.0 ಲೀಟರ್ ವಿ12 ಎಂಜಿನ್ ಆಳವಡಿಸಲಾಗಿದೆ.

ಆಸ್ಟನ್ ಮಾರ್ಟಿನ್ ವೋಲ್ಕನ್
ಅಂದ ಹಾಗೆ ಆಸ್ಟನ್ ಮಾರ್ಟಿನ್ ವೋಲ್ಕನ್ ಸೂಪರ್ ಕಾರು 2016ರಲ್ಲಿ ಟ್ರ್ಯಾಕ್‌ಗೆ ಅಪ್ಪಳಿಸಲಿದೆ.

ಜಿನೆವಾ ಹಾಟ್ ಕಾರುಗಳಿಗಾಗಿ ಹಾಗೆಯೇ ಮುಂದುವರಿಯಿರಿ...

ಆಸ್ಟನ್ ಮಾರ್ಟಿನ್ ವ್ಯಾಂಟೇಜ್ ಜಿಟಿ3 ವಿಶೇಷ ಆವೃತ್ತಿ ಸ್ಪೋರ್ಟ್ಸ್ ಕಾರು
ಭವಿಷ್ಯದತ್ತ ಕಾರುಗಳತ್ತ ಗಮನ ಹರಿಸಿರುವ ಆಸ್ಟನ್ ಮಾರ್ಟಿನ್ ವ್ಯಾಂಟೇಜ್ ಜಿಟಿ3 ವಿಶೇಷ ಆವೃತ್ತಿಯ ಸ್ಪೋರ್ಟ್ಸ್ ಕಾರನ್ನು ಪ್ರದರ್ಶಿಸಿದೆ. ಇದರಲ್ಲಿ 6.0 ಲೀಟರ್ ವಿ12 ಎಂಜಿನ್ ಆಳವಡಿಸಲಾಗಿದೆ.

ಇದು ಕಡಿಮೆ ಭಾರ, ಹೆಚ್ಚು ಶಕ್ತಿಶಾಲಿ ಮಾದರಿಯಾಗಲಿದೆ. ರೇಸಿಂಗ್‌ನಿಂದ ಸ್ಪೂರ್ತಿ ಪಡೆದು ಇದನ್ನು ರಚಿಸಲಾಗಿದ್ದು, ಕೇವಲ ಸೀಮಿತ 100 ಆವೃತ್ತಿಗಳಷ್ಟೇ ನಿರ್ಮಾಣವಾಗಲಿದೆ.

ಜಿನೆವಾ ಹಾಟ್ ಕಾರುಗಳಿಗಾಗಿ ಹಾಗೆಯೇ ಮುಂದುವರಿಯಿರಿ...

ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ ಕಾನ್ಸೆಪ್ಟ್ ಕಾರು
ಮುಂದಿನ ಜೇಮ್ಸ್ ಬಾಂಡ್ ಕಾರು ಹೇಗಿರಬಹುದು? ಇದಕ್ಕೆ ಉತ್ತರವಾಗಿ ಡಿಬಿಎಕ್ಸ್ ಕಾನ್ಸೆಪ್ಟ್ ಕಾರನ್ನು ಆಸ್ಟನ್ ಮಾರ್ಟಿನ್ ಪರಿಚಯಿಸಿದೆ.

ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ ಕಾನ್ಸೆಪ್ಟ್ ಕಾರು
ಎಲೆಕ್ಟ್ರಿಕ್ ಚಾಲನಾ ವಿಧವನ್ನು ಇದರಲ್ಲಿ ಆಳವಡಿಸಲಾಗಿದೆ. ಹಾಗೊಂದು ವೇಳೆ ಜೇಮ್ಸ್ ಬಾಂಡ್ ಚಿತ್ರದಲ್ಲಿ ವಿದ್ಯುತ್ ಚಾಲಿತ ಕಾರು ಬಳಕೆಯಾದ್ದಲ್ಲಿ ಇದಕ್ಕೆ ಸಂಭವನೀಯ ಉತ್ತರ ಡಿಬಿಎಕ್ಸ್ ಎಲೆಕ್ಟ್ರಿಕ್ ಕಾರಾಗಿರಲಿದೆ.

ಜಿನೆವಾ ಹಾಟ್ ಕಾರುಗಳಿಗಾಗಿ ಹಾಗೆಯೇ ಮುಂದುವರಿಯಿರಿ...

ಬುಗಾಟಿ ವೆರೋನ್ ಗ್ರ್ಯಾಂಡ್ ಸ್ಪೋರ್ಟ್ ವಿಟೆಸ್ಸೆ ಲಾ ಫಿನಾಲ್
ಬುಗಾಟಿ ಸೂಪರ್ ಕಾರು ಸವಾಲಿಗೆ ಕೊನೆಗೂ ಗ್ರ್ಯಾಂಡ್ ಸ್ಪೋರ್ಟ್ಸ್ ವಿಟೆಸ್ಸೆ ಲಾ ಫಿನಾಲ್ ಮುಖಾಂತರ ಉತ್ತರ ದೊರಕಿದೆ.

ಬುಗಾಟಿ ವೆರೋನ್ ಗ್ರ್ಯಾಂಡ್ ಸ್ಪೋರ್ಟ್ ವಿಟೆಸ್ಸೆ ಲಾ ಫಿನಾಲ್ ಸೀಮಿತ 450 ಯುನಿಟ್‌ಗಳಷ್ಟೇ ನಿರ್ಮಾಣವಾಗಲಿದೆ.

ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...


Click it and Unblock the Notifications








