ಅಮೆರಿಕದಲ್ಲಿ ಸೊಂಟ ಬಳುಕಿಸಿದ ಇಕೊಸ್ಪೋರ್ಟ್; ಮುಂದಿನ ಹೆಜ್ಜೆ ಭಾರತ!

ಫೋರ್ಡ್ ಇಕೊಸ್ಪೋರ್ಟ್ ದೇಶದ ಜನಪ್ರಿಯ ಕ್ರೀಡಾ ಬಳಕೆಯ ವಾಹನಗಳಲ್ಲಿ ಒಂದಾಗಿದ್ದು, ಇದೀಗ ಹೊಸ ಸ್ವರೂಪದೊಂದಿಗೆ ಆಗಮನವಾಗಲಿದೆ.

By Nagaraja

ಬಹುನಿರೀಕ್ಷಿತ 2017 ಫೋರ್ಡ್ ಇಕೊಸ್ಪೋರ್ಟ್ ಅಮೆರಿಕ ಲಾಸ್ ಏಂಜಲೀಸ್ ನಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನ ಮೇಳದಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ. ನವೀಕೃತ ಫೋರ್ಡ್ ಇಕೊಸ್ಪೋರ್ಟ್ ಕಾರು ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂಬುದಿಲ್ಲಿ ಅತ್ಯಂತ ಗಮನಾರ್ಹವೆನಿಸುತ್ತದೆ.

ಅಮೆರಿಕದಲ್ಲಿ ಸೊಂಟ ಬಳುಕಿಸಿದ ಇಕೊಸ್ಪೋರ್ಟ್; ಮುಂದಿನ ಹೆಜ್ಜೆ ಭಾರತ!

ನೂತನ ಫೋರ್ಡ್ ಇಕೊಸ್ಪೋರ್ಟ್ ಶೈಲಿಯಿಂದ ಹಿಡಿದು, ವೈಶಿಷ್ಟ್ಯ, ತಂತ್ರಜ್ಞಾನ ಹಾಗೂ ನಿರ್ವಹಣೆಗಳಲ್ಲಿ ಸಮಗ್ರ ಬದಲಾವಣೆಗಳನ್ನು ಪಡೆಯಲಿದೆ.

ಅಮೆರಿಕದಲ್ಲಿ ಸೊಂಟ ಬಳುಕಿಸಿದ ಇಕೊಸ್ಪೋರ್ಟ್; ಮುಂದಿನ ಹೆಜ್ಜೆ ಭಾರತ!

ಮುಂಭಾಗದಲ್ಲಿ ಪರಿಷ್ಕೃತ ಶೈಲಿ, ಸಬ್ ಕಾಂಪಾಕ್ಟ್ ಗೆ ತಕ್ಕಂತೆ ದೊಡ್ಡದಾದ ಗ್ರಿಲ್ ಹಾಗೂ ಕ್ರೋಮ್ ಬಾರ್ ಗಳನ್ನು ಬಳಕೆ ಮಾಡಲಾಗಿದೆ.

ಅಮೆರಿಕದಲ್ಲಿ ಸೊಂಟ ಬಳುಕಿಸಿದ ಇಕೊಸ್ಪೋರ್ಟ್; ಮುಂದಿನ ಹೆಜ್ಜೆ ಭಾರತ!

ಪರಿಷ್ಕೃತ ಬೊನೆಟ್, ಕ್ರೀಡಾತ್ಮಕ ಬಂಪರ್, ಸ್ಕಿಡ್ ಪ್ಲೇಟ್ ಮತ್ತು ದೊಡ್ಡದಾದ ಫಾಗ್ ಲ್ಯಾಂಪ್ ಗಳು ಸಹ ಪ್ರಮುಖ ಆಕರ್ಷಣೆಯಾಗಲಿದೆ.

ಅಮೆರಿಕದಲ್ಲಿ ಸೊಂಟ ಬಳುಕಿಸಿದ ಇಕೊಸ್ಪೋರ್ಟ್; ಮುಂದಿನ ಹೆಜ್ಜೆ ಭಾರತ!

ಬದಿಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಅಲಾಯ್ ಚಕ್ರಗಳು ಜೋಡಿಸಲಾಗಿದ್ದು, ಹಿಂದುಗಡೆಯೂ ಬಂಪರ್ ನವೀಕರಿಸಲಾಗಿದೆ.

ಅಮೆರಿಕದಲ್ಲಿ ಸೊಂಟ ಬಳುಕಿಸಿದ ಇಕೊಸ್ಪೋರ್ಟ್; ಮುಂದಿನ ಹೆಜ್ಜೆ ಭಾರತ!

ಹಿಂಭಾಗದಲ್ಲಿ ಪ್ರಮುಖವಾಗಿಯೂ ಹೆಚ್ಚುವರಿ ಚಕ್ರಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಇನ್ನು ಏರೋಡೈನಾಮಿಕ್ ಶೈಲಿಗೆ ತಕ್ಕುದಾಗಿ ರಿಯರ್ ಆ್ಯಂಟಿನಾ ಸಹ ಕಂಡುಬರಲಿದೆ.

ಅಮೆರಿಕದಲ್ಲಿ ಸೊಂಟ ಬಳುಕಿಸಿದ ಇಕೊಸ್ಪೋರ್ಟ್; ಮುಂದಿನ ಹೆಜ್ಜೆ ಭಾರತ!

ಕಾರಿನೊಳಗೆ ಡ್ಯಾಶ್ ಬೋರ್ಡ್ ನವೀಕರಿಸಲಾಗಿದೆ. ಇದರಲ್ಲಿ ಎಂಟು ಇಂಚುಗಳ ಸ್ಕ್ರೀನ್ ಲಗತ್ತಿಸಲಾಗಿದ್ದು, ಫೋರ್ಡ್ ಸಿಂಗ್ 3 ಮನರಂಜನಾ ವ್ಯವಸ್ಥೆಯು ಇರಲಿದೆ.

ಅಮೆರಿಕದಲ್ಲಿ ಸೊಂಟ ಬಳುಕಿಸಿದ ಇಕೊಸ್ಪೋರ್ಟ್; ಮುಂದಿನ ಹೆಜ್ಜೆ ಭಾರತ!

ಫೋರ್ಡ್ ಪಾಸ್ ಆಪ್ ಸೇವೆಯು ಇದರಲ್ಲಿದ್ದು, ಬ್ಲೂಟೂತ್ ಸೇವೆಯನ್ನು ಬಳಸಿಕೊಂಡು ಕಾರನ್ನು ಸ್ಟ್ಟಾರ್ಟ್ ಮತ್ತು ಲಾಕ್-ಅನ್ ಲಾಕ್ ಮಾಡಲು ಸಾಧ್ಯವಾಗಲಿದೆ.

ಅಮೆರಿಕದಲ್ಲಿ ಸೊಂಟ ಬಳುಕಿಸಿದ ಇಕೊಸ್ಪೋರ್ಟ್; ಮುಂದಿನ ಹೆಜ್ಜೆ ಭಾರತ!

10 ಸ್ಪೀಕರುಗಳ ಜೊತೆಗಿನ ಬ್ಯಾಂಗ್ ಮತ್ತು ಓಲುಫ್ಸೆನ್ ಸೌಂಡ್ ಸಿಸ್ಟಂ (675 ವ್ಯಾಟ್) ಸಹ ಜೋಡಿಸಲಾಗಿದೆ. ಅಲ್ಲದೆ ಕ್ಯಾಬಿನ್ ನಲ್ಲಿ 30ರಷ್ಟು ಸ್ಟೋರೆಜ್ ಜಾಗವನ್ನು ಕೊಡಲಾಗಿದೆ.

ಅಮೆರಿಕದಲ್ಲಿ ಸೊಂಟ ಬಳುಕಿಸಿದ ಇಕೊಸ್ಪೋರ್ಟ್; ಮುಂದಿನ ಹೆಜ್ಜೆ ಭಾರತ!

ಫೋರ್ಡ್ ಇಕೊಸ್ಪೋರ್ಟ್ ಅಮೆರಿಕ ಮಾದರಿಯು ಫ್ರಂಟ್ ವೀಲ್ ಮತ್ತು ಫೋರ್ ವೀಲ್ ಚಾಲನಾ ವ್ಯವಸ್ಥೆಗಳನ್ನು ಪಡೆಯಲಿದೆ. ಇದು 1.0 ಲೀಟರ್ ತ್ರಿ ಸಿಲಿಂಡರ್ ಟರ್ಬೊಚಾರ್ಜ್ಡ್ ಇಕೊಬೂಸ್ಟ್ ಅಥವಾ 2.0 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದೆ. ಇವೆರಡು ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಅಮೆರಿಕದಲ್ಲಿ ಸೊಂಟ ಬಳುಕಿಸಿದ ಇಕೊಸ್ಪೋರ್ಟ್; ಮುಂದಿನ ಹೆಜ್ಜೆ ಭಾರತ!

ಆದರೆ ಭಾರತದಲ್ಲಿ ಈಗಿರುವ 1.0 ಲೀಟರ್ ಇಕೊಬೂಸ್ಟ್, 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಗಳು ಮುಂದುವರಿಯುವ ಸಾಧ್ಯತೆಯಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಅಮೆರಿಕದಲ್ಲಿ ಸೊಂಟ ಬಳುಕಿಸಿದ ಇಕೊಸ್ಪೋರ್ಟ್; ಮುಂದಿನ ಹೆಜ್ಜೆ ಭಾರತ!

2017 ದ್ವಿತಿಯಾರ್ಧದಲ್ಲಿ ನೂತನ ಫೋರ್ಡ್ ಇಕೊಸ್ಪೋರ್ಟ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಈಗಿರುವ ಇಕೊಸ್ಪೋರ್ಟ್ ಗಿಂತಲೂ ಕೊಂಚ ದುಬಾರಿಯೆನಿಸಲಿದೆ.

Most Read Articles

Kannada
English summary
LA Auto Show: 2017 Ford Ecosport Unveiled, India Launch In 2017
Story first published: Thursday, November 17, 2016, 13:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X