ಭಾರತಕ್ಕೆ ಹೊರಟ ರೆನೊ ಕೊಲಿಯೊಸ್ ಭರ್ಜರಿ ಅನಾವರಣ
ಭಾರತಕ್ಕೆ ಹೊರಟು ನಿಂತಿರುವ ರೆನೊ ಕೊಲಿಯೊಸ್, ಬಹು ನಿರೀಕ್ಷಿತ 2016 ಪ್ಯಾರಿಸ್ ಮೋಟಾರು ಶೋದಲ್ಲಿ ಭರ್ಜರಿ ಪ್ರದರ್ಶ ಕಂಡಿದೆ. ನಿಕಟ ಭವಿಷ್ಯದಲ್ಲಿ ನೂತನ ಕ್ರೀಡಾ ಬಳಕೆಯ ವಾಹನ ಭಾರತ ಪ್ರವೇಶವನ್ನು ಮಾಡಲಿದೆ ಎಂಬುದು ಶುಭದಾಯಕ ಸುದ್ದಿಯಾಗಿದೆ.
ಈ ಡಿ ಸೆಗ್ಮೆಂಟ್ ಎಸ್ ಯುವಿ ಸಿಎಂಎಫ್-ಸಿಡಿ ತಳಹದಿಯಲ್ಲಿ ರೆನೊ ಹಾಗೂ ನಿಸ್ಸಾನ್ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇದು ನಿಸ್ಸಾನ್ ಎಕ್ಸ್ ಟ್ರೈಲ್, ರೆನೊ ಟ್ಯಾಲಿಸ್ ಮ್ಯಾನ್ ಮತ್ತು ರೆನೊ ಎಸ್ಕೇಪ್ ನಿಂದ ಗಮನಾರ್ಹ ವೈಶಿಷ್ಟ್ಯಗಳನ್ನು ಪಡೆದಿದೆ.

ರೆನೊ ಹೇಳುವ ಪ್ರಕಾರ ನೂತನ ಕೊಲಿಯೊಸ್ ಪರಿಪೂರ್ಣ ಎಸ್ ಯುವಿ ಹಾಗೂ ಪ್ರೀಮಿಯಂ ಸೆಡಾನ್ ಕಾರುಗಳ ಮಿಶ್ರಣವನ್ನು ಪಡೆದುಕೊಂಡಿದೆ.

ರೆನೊ ಹೈಎಂಡ್ ಮಾದರಿಗಳಲ್ಲಿರುವ ಆರ್-ಲಿಂಕ್ 2 ಮಲ್ಟಿಮೀಡಿಯಾ ಟ್ಯಾಬ್ಲೆಟ್ ಪ್ರಮುಖ ತಾಂತ್ರಿಕ ವೈಶಿಷ್ಟ್ಯವಾಗಿರಲಿದೆ.

ನೂತನ ಕೊಲಿಯೊಸ್ ಫೋರ್ ವೀಲ್ ಚಾಲನಾ ವ್ಯವಸ್ಥೆಯನ್ನು ಪಡೆಯಲಿದ್ದು, 213 ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಂಡಿದೆ.

ಆಫ್ ರೋಡ್ ಚಾಲನಾ ಸಾಮರ್ಥ್ಯವನ್ನು ರೆನೊ ಕೊಲಿಯೊಸ್ ಪಡೆದಿದ್ದು, ಗ್ರಾಹಕರಿಗೆ ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಆಯ್ಕೆ ಮಾಡುವ ಅವಕಾಶವಿರುತ್ತದೆ.

ರೆನೊ ಕೊಲಿಯೊಸ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳು 130ರಿಂದ 175ರ ತನಕ ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಅಥವಾ ಎಕ್ಸ್ ಟ್ರಾನಿಕ್ ಗೇರ್ ಬಾಕ್ಸ್ ಪಡೆಯಲಿದೆ.

2017ನೇ ಸಾಲಿನಲ್ಲಿ ಭಾರತಕ್ಕೆ ಪ್ರವೇಶಿಸುವ ನಿರೀಕ್ಷೆ ಹೊಂದಿರುವ ರೆನೊ ಕೊಲಿಯೊಸ್ ಪ್ರಮುಖವಾಗಿಯೂ ಟೊಯೊಟಾ ಫಾರ್ಚ್ಯುನರ್, ಫೋರ್ಡ್ ಎಂಡೀವರ್ ಮತ್ತು ಹ್ಯುಂಡೈ ಸಾಂಟಾ ಫೆ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








