ಬ್ರೆಜಿಲ್‌ಗೆ ರೆನೊ ಕ್ವಿಡ್ ಭಾರತದಿಂದ ರಫ್ತು ಆಗಲ್ಲ
2016 ಪ್ಯಾರಿಸ್ ಮೋಟಾರು ಶೋದಲ್ಲಿ ಕಂಡುಬಂದಿರುವ ಬೆಳವಣಿಗೆಯೊಂದರಲ್ಲಿ ಭಾರತದಲ್ಲಿ ನಿರ್ಮಿತ ರೆನೊ ಕ್ವಿಡ್ ಕಾರು ಬ್ರೆಜಿಲ್ ಗೆ ರಫ್ತು ಆಗುವುದಿಲ್ಲ ಎಂಬ ಬಗೆಗಿನ ಮಾಹಿತಿ ಹೊರ ಬಂದಿದೆ. ಬದಲಾಗಿ ಹೊಸ ರೆನೊ ಕ್ವಿಡ್ ಬ್ರೆಜಿಲ್ ಗಾಗಿ ಬ್ರೆಜಿಲ್ ನಲ್ಲೇ ಸ್ಥಳೀವಾಗಿ ನಿರ್ಮಿಸಲಾಗುವುದು.
ಇದನ್ನು ರೆನೊದ ಆಫ್ರಿಕಾ, ಮಧ್ಯ ಪೂರ್ವ ಮತ್ತು ಭಾರತದ ಮುಖ್ಯಸ್ಥರಾಗಿರುವ ಬೆರ್ನಾಡ್ ಕ್ಯಾಂಬಿಯರ್ ಘೋಷಿಸಿದ್ದಾರೆ. 2016 ಪ್ಯಾರಿಸ್ ಮೋಟಾರು ಶೋದಲ್ಲಿ ಈ ಮಹತ್ತರ ಪ್ರಕಟಣೆಯನ್ನು ಮಾಡಲಾಗಿದೆ.

ದಕ್ಷಿಣ ಅಮೆರಿಕ ಮಾರುಕಟ್ಟೆಗಾಗಿ ಬ್ರೆಜಿಲ್ ನಿಂದಲೇ ಕ್ವಿಡ್ ತಯಾರಿಸಲಾಗುವುದು. ಡಸ್ಟರ್ ನಲ್ಲಿ ಮಾಡಿದ ಅದೇ ತಪ್ಪನ್ನು ಪುನಾರವರ್ತನೆ ಮಾಡಲಾಗುವುದಿಲ್ಲ ಎಂದವರು ತಿಳಿಸಿದ್ದಾರೆ.
ಹಾಗಿದ್ದರೂ ಬ್ರೆಜಿಲ್ ನಲ್ಲಿ ನಿರ್ಮಾಣವಾಗಲಿರುವ ಕ್ವಿಡ್ ಭಾರತೀಯ ಮಾದರಿಗೆ ಸಾಮತ್ಯೆಯನ್ನು ಪಡೆಯಲಿದೆ. ಆದರೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ.
ದಕ್ಷಿಣ ಅಮೆರಿಕ ಮಾರುಕಟ್ಟೆಯಲ್ಲಿ ಕ್ವಿಡ್ 800 ಹಾಗೂ 1.0 ಲೀಟರ್ ಎಂಜಿನ್ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಇವೆರಡು ಅನುಕ್ರಮವಾಗಿ 53 (72 ಎನ್ ಎಂ ತಿರುಗುಬಲ) ಹಾಗೂ 67 ಅಶ್ವಶಕ್ತಿಯನ್ನು (91 ಎನ್ ಎಂ ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.
ಭಾರತದಲ್ಲಿ ಮಾರಾಟವಾಗುತ್ತಿರುವ ಕ್ವಿಡ್ ಆವೃತ್ತಿಯು ಸಂಪೂರ್ಣ ಡಿಜಿಟಲ್ ಮೀಟರ್ ಕನ್ಸಾಲ್, ಪವರ್ ವಿಂಡೋ, 2 ಡಿನ್ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ, ಬ್ಲೂಟೂತ್, ನೇವಿಗೇಷನ್ ಸಿಸ್ಟಂ, 13 ಇಂಚುಗಳ ಚಕ್ರಗಳು, 300 ಲೀಟರ್ ಢಿಕ್ಕಿ ಜಾಗ ಹಾಗೂ 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ಪಡೆದುಕೊಂಡಿದೆ.
ಸುರಕ್ಷತೆಯ ವಿಚಾರಕ್ಕೆ ಬಂದಾಗ ರೆನೊ ಕ್ವಿಡ್ ಐಚ್ಛಿಕ ಏರ್ ಬ್ಯಾಗ್ ಪಡೆದುಕೊಂಡಿದೆ. ಇನ್ನೊಂದೆಡೆ ಬ್ರೆಜಿಲ್ ಮಾದರಿಯು ಸ್ಟ್ಯಾಡಂರ್ಡ್ ಏರ್ ಬ್ಯಾಗ್, ಎಬಿಎಸ್ ಹಾಗೂ ಇಬಿಡಿ ತಂತ್ರಗಾರಿಕೆಗಳನ್ನು ಪಡೆಯುವ ಸಾಧ್ಯತೆಯಿದೆ.


Click it and Unblock the Notifications


















