ವಿಶ್ವದ ಮೊದಲ ಜಲಜನಕ ಚಾಲಿತ ಹೈಆಲ್ಫಾ ರಿಕ್ಷಾಕ್ಕೆ ಜೈಹೋ
ನವದೆಹಲಿ, ಜ 10: ಜಗತ್ತಿನ ಪ್ರಪ್ರಥಮ ಹೈಡ್ರೋಜನ್ ಚಾಲಿತ ಮೂರು ಚಕ್ರದ ವಾಹನ "ಹೈಆಲ್ಫಾ"ವನ್ನು ದೇಶದ ಮಾರುಕಟ್ಟೆಗೆ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಪರಿಚಯಿಸಿದೆ. ಜಲಜನಕ ಚಾಲಿತ ರಿಕ್ಷಾಕ್ಕೆ ಜೈಹೋ ಎನ್ನುವ ಮೊದಲು ಹೆಚ್ಚಿನ ಮಾಹಿತಿ ಓದಿ.

"ಕಾರ್ಯತಂತ್ರ ಮತ್ತು ಅನ್ವೆಷಣೆಯ ಭಾಗವಾಗಿ ಕಂಪನಿಯು ಪರ್ಯಾಯ ಇಂಧನ ಪರಿಹಾರವೊಂದನ್ನು ನೀಡಿದೆ ಮತ್ತು ಹೈಆಲ್ಫಾ ತ್ರಿಚಕ್ರ ವಾಹನ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ" ಎಂದು ಕಂಪನಿಯ ಅಧ್ಯಕ್ಷರಾದ ಪವನ್ ಗೋಯೆಂಕಾ ಹೇಳಿದ್ದಾರೆ.
ಈ ವಾಹನ ದರ ಮತ್ತು ಟೆಕ್ ಮಾಹಿತಿಯನ್ನು ಅವರು ನೀಡಿಲ್ಲ. ಅಂದಹಾಗೆ ಈ ತ್ರಿಚಕ್ರವಾಹನವನ್ನು ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿದೆ. ಹೈಡ್ರೋಜನ್ ಇಂಧನದ ವಾಹನಕ್ಕೆ ಸೂಕ್ತ ಎಂಜಿನ್, ಸಂಗ್ರಹ ವ್ಯವಸ್ಥೆ, ಇಂಧನ ವ್ಯವಸ್ಥೆ ಮತ್ತು ಸುರಕ್ಷತೆಯ ಫೀಚರುಗಳನ್ನು ಅಳವಡಿಸಿದ್ದೇವೆ ಎಂದು ಗೋಯೆಂಕಾ ಹೇಳಿದ್ದಾರೆ.
ಈಗಾಗಲೇ ಕಂಪನಿಯು ಇಂತಹ ಹದಿನೈದು ತ್ರಿಚಕ್ರ ವಾಹನಗಳನ್ನು ಉತ್ಪಾದಿಸಿದೆ. ಈ ವಾಹನಕ್ಕೆ ಅಮೆರಿಕದ ಏರ್ ಪ್ರೊಡಕ್ಟ್ ಕಂಪನಿಯೊಂದು ಪ್ರಗತಿ ಮೈದಾನದಲ್ಲಿ ಹೈಡ್ರೋಜನ್ ಇಂಧನ ತುಂಬಿಸುತ್ತಿತ್ತು.
ಈ ಹೈಡ್ರೋಜನ್ ರಿಕ್ಷಾ ಅಭಿವೃದ್ಧಿಪಡಿಸಲು ಕಂಪನಿಗೆ ಸುಮಾರು 10 ಲಕ್ಷ ಡಾಲರ್ ವೆಚ್ಚವಾಗಿದೆ. ಕಂಪನಿಯು ಇದಕ್ಕಾಗಿ ಮೂರು ವರ್ಷ ವ್ಯಯಿಸಿದೆ. ಈ ವೆಚ್ಚವನ್ನು ಯುನಿಡೊ ಮತ್ತು ಹೈಡ್ರೋಜನ್ ಎನರ್ಜಿ ಟೆಕ್ನಾಲಜಿಸ್ ಹಣಕಾಸು ನೆರವು ನೀಡಿವೆ. ಈ ಸಂಸ್ಥೆಗಳು ಟರ್ಕಿಯ ಇಸ್ತಾನ್ ಬುಲ್ ನಲ್ಲಿ ಕಾರ್ಯನಿರ್ವಹಿಸುತ್ತಿವೆ.


Click it and Unblock the Notifications








