ಮೂರು ಪ್ರೀಮಿಯರ್ ಕಾರುಗಳು, ಪದ್ಮನಿ ಮಿಸ್ಸಿಂಗ್

ದೆಹಲಿ ವಾಹನ ಪ್ರದರ್ಶನಕ್ಕೆ ತೆರೆಬಿದ್ದಿದೆ. ಆದರೆ ಮಳೆನಿಂತರೂ ನಿಲ್ಲದ ಚಿಟಪಟ ಹನಿಗಳ ಸದ್ದಿನಂತೆ ಹೊಸ ವಾಹನಗಳ ಸುದ್ದಿ ಮುಗಿದಿಲ್ಲ. ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಕಾರುನ್ನು ಪರಿಚಯಿಸಿದ ಪ್ರೀಮಿಯರ್ ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ರಿಯೊ ಕಾರಿನ ಮೂರು ಆವೃತ್ತಿಗಳನ್ನು ಪ್ರದರ್ಶಿಸಿದೆ.

Premier Displays New Look Rio At Auto Expo

ದೇಶದ ಮೊದಲ ಕಾಂಪ್ಯಾಕ್ಟ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ರಿಯೊ ಕಾರಿನ ಮೂರು ಹೊಸ ಆವೃತ್ತಿಗಳನ್ನು ಪ್ರೀಮಿಯರ್ ಕಂಪನಿಯು ಪರಿಚಯಿಸಿದೆ. ಈ ರಿಯೊ ಆವೃತ್ತಿಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತಿವೆ. ರಿಯೊ ಕಾರುಗಳ ಕಾರ್ಯಕ್ಷಮತೆ ಸೆಡಾನ್ ಕಾರುಗಳಂತೆ ಇದ್ದರೆ, ಸ್ಥಳಾವಕಾಶ ಮತ್ತು ನೋಡಲು ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ತರಹ ಇದೆ.

ರಿಯೊ ಕಾರುಗಳ ಎಂಜಿನ್
* 1173ಸಿಸಿ(1.2 ಲೀಟರ್) ಪೆಟ್ರೋಲ್ ಎಂಜಿನ್, ಇದು ಎವಿಎಲ್ ತಂತ್ರಜ್ಞಾನ ಹೊಂದಿದ್ದು, 77 ಹಾರ್ಸ್ ಪವರ್ ನೀಡುತ್ತದೆ. ಈ ಎಂಜಿನ್ ಅಳವಡಿಸಿರುವ ರಿಯೊ ಮೈಲೇಲ್ ಪ್ರತಿಲೀಟರಿಗೆ 15 ಕಿ.ಮೀ.

* ಪ್ಯೂಜೊ ತಂತ್ರಜ್ಞಾನದ(ಟಿಯುಡಿ5) 1489 ಸಿಸಿಯ ಟರ್ಬೊ ಡೀಸೆಲ್ ಎಂಜಿನ್ 65 ಅಶ್ವಶಕ್ತಿ ನೀಡುತ್ತದೆ. ಈ ಕಾರಿನ ಮೈಲೇಜ್ ಪ್ರತಿಲೀಟರ್ ಡೀಸೆಲಿಗೆ 16 ಕಿ.ಮೀ.

* 1.3 ಲೀಟರಿನ ಸಿಆರ್ ಡಿಐ ಮಲ್ಟಿಜೆಟ್ ಡೀಸೆಲ್ ಎಂಜಿನ್(ಈ ಎಂಜಿನ್ ಆಯ್ಕೆಯ ಕಾರು ಇನ್ನೂ ರಸ್ತೆಗಿಳಿದಿಲ್ಲ. ಕಂಪನಿಯು ಈ ಎಂಜಿನ್ ಕಾರನ್ನು ಈಗ ಟೆಸ್ಟ್ ಮಾಡುತ್ತಿದ್ದು, ಶೀಘ್ರದಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದೆ)

ನೂತನ ಫೇಸ್ ಲಿಫ್ಟೆಡ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನಗಳಲ್ಲಿ ಈಗ ದೊರಕುತ್ತಿವೆ. ಏಪ್ರಿಲ್ 2012ಕ್ಕೆ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಅಳವಡಿಸಿರುವ ರಿಯೊ ಕಾರು ರಸ್ತೆಗಿಳಿಯುವ ನಿರೀಕ್ಷೆಯಿದೆ.

ರಿಯೊ ಕಾರು ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತಿವೆ. ಈ ಕಾರಿನಲ್ಲಿ ಐದು ಜನರು ಕುಳಿತುಕೊಳ್ಳಬಹುದು. ರಿಯೊ ಬೇಸ್ ಆವೃತ್ತಿ ದರ 4.7 ಲಕ್ಷ ರು. ಇದ್ದರೆ, ಟಾಪ್ ಎಂಡ್ ಆವೃತ್ತಿ ದರ 6.35 ಲಕ್ಷ ರು. ಇದೆ. ಇದು ಪುಣೆ ಎಕ್ಸ್ ಶೋರೂಂ ದರ. ಸದ್ಯ ರಸ್ತೆಯಲ್ಲಿರುವ ಇತರ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಗಳಿಗಿಂತ ಇದರ ದರ ಸುಮಾರು ಒಂದುವರೆ ಲಕ್ಷ ರು. ಕಡಿಮೆಯಿದೆ.

ರಿಯೊ ಕಾರನ್ನು ನಾಲ್ಕು ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ಕೆಂಪು, ಬಿಳಿ, ಸಿಲ್ವರ್ ಮತ್ತು ಕಪ್ಪು ಬಣ್ಣಗಳಲ್ಲಿ ರಿಯೊ ಕಾರು ದೊರಕುತ್ತಿದೆ. ಎಲ್ಲಾ ಮಾಡೆಲುಗಳು ಪವರ್ ಸ್ಟಿಯರಿಂಗ್, ಮುಂಭಾಗದ ಪವರ್ ವಿಂಡೋಸ್, ಎಲೆಕ್ಟ್ರಿಕ್ ಡೋರ್ ಮಿರರ್, ಸೆಂಟ್ರಲ್ ಲಾಕಿಂಗ್ ಮತ್ತು ಸಿಡಿ/ಎಂಪಿ3 ಪ್ಲೇಯರ್ ಮುಂತಾದ ಫೀಚರುಗಳನ್ನು ಹೊಂದಿವೆ.

ಟಾಪ್ ಎಂಡ್ ರಿಯೋ ಕಾರುಗಳಲ್ಲಿ ಇನ್ನಷ್ಟು ಫೀಚರುಗಳಿವೆ. ಅಂದರೆ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್(ಎಬಿಎಸ್), ಕಿಲೆಸ್ ಎಂಟ್ರಿ ಮತ್ತು ಅಲಾಯ್ ವೀಲುಗಳು ಟಾಪ್ ಎಂಡ್ ಆವೃತ್ತಿಗಳಲ್ಲಿವೆ.

Most Read Articles

Kannada
English summary
Premier, the manufacturer of India's first compact SUV Rio showcased three new variants at the Delhi Auto Expo. The Rio is now available with both petrol and diesel engines and it offers the performance of a efficient sedan but with the space and road presence of an SUV.
Story first published: Friday, January 13, 2012, 10:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X