ಯಮಹಾದಿಂದಲೂ ಭವಿಷ್ಯದ ಕಾರು ತಯಾರಿ

Written By:

ಇದುವರೆಗೆ ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡಿದ್ದ ಜಪಾನ್ ಮೂಲದ ಯಮಹಾ ಸಂಸ್ಥೆಯು ಇನ್ನು ಮುಂದಕ್ಕೆ ಕಾರು ಲೋಕಕ್ಕೂ ಪ್ರವೇಶ ಪಡೆಯಲಿದೆ. ಹೌದು, ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ಭವಿಷ್ಯದ ಕಾರು ತಯಾರಿಸುವುದರತ್ತ ಕಾರ್ಯ ಮಗ್ನವಾಗಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಯಮಹಾದ ಈ ಪ್ರಯತ್ನಕ್ಕೆ ಐಕಾನಿಕ್ ವಿನ್ಯಾಸಗಾರ ಗೋರ್ಡನ್ ಮುರ್ರೆ ಸಾಥ್ ನೀಡಲಿದ್ದಾರೆ. ಮೆಕ್‌ಲ್ಯಾರೆನ್ ಎಫ್1 ವಿನ್ಯಾಸ ರಚಿಸಿರುವ ಖ್ಯಾತಿಗೆ ಪಾತ್ರವಾಗಿರುವ ಮುರ್ರೆ ಹಲವಾರು ಎಫ್1 ರೇಸ್ ಕಾರಿನ ಯಶಸ್ಸಿನಲ್ಲಿ ಭಾಗಿಯಾಗಿದ್ದರು.

MOTIV.e City Car

ಪರಿಸರ ಸ್ನೇಹಿ, ಕಾಂಪಾಕ್ಟ್ ಹಾಗೂ ಸುಲಭ ನಗರ ಕಾರುಗಳನ್ನು ರಚಿಸುವುದು ಅವರ ಪ್ರಮುಖ ಉದ್ದೇಶವಾಗಿದೆ. ಅಷ್ಟೇ ಯಾಕೆ ಇತ್ತೀಚೆಗಷ್ಟೇ ಅಂತ್ಯಗೊಂಡಿದ್ದ ಟೊಕಿಯೊ ಮೋಟಾರ್ ಶೋದಲ್ಲಿ ತಮ್ಮ ಈ ನೂತನ ಮೋಟಿವ್.ಇ ಸಿಟಿ ಕಾರನ್ನು (MOTIV.e) ಜಗತ್ತಿಗೆ ಪರಿಚಯಿಸಿದ್ದಾರೆ.

MOTIV.e City Car

ಮುರ್ರೆ ಅವರೇ ವಿನ್ಯಾಸಗೊಳಿಸಿರುವ ಟಿ.27 ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರಿನ ಮುಂದುವರಿದ ಸ್ವರೂಪವಾಗಿದೆ ಮೋಟಿವ್.ಇ ಸಿಟಿ ಕಾರು. ಪ್ರಸ್ತುತ ಕಾರು ಉತ್ಪಾದನಾ ವರ್ಷನ್ ಪಡೆದುಕೊಳ್ಳಲಿರುವುದು ಬಹುತೇಕ ಖಚಿತವಾಗಿದೆ.

MOTIV.e City Car

ಸಣ್ಣ ಕಾರು ಆಗಿರುವ ಹೊರತಾಗಿಯೂ ಮೋಟಿವ್ ಹೆಚ್ಚಿನ ಶಕ್ತಿ ಉತ್ಪಾದಿಸಲಿದೆ. ಎಲೆಕ್ಟ್ರಿಕ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುವ ಇದರ 8.8 ಕೆಡಬ್ಲ್ಯುಎಚ್ (kWh) ಬ್ಯಾಟರಿ 25 ಕೆಡಬ್ಲ್ಯು ಪೀಕ್ ಪವರ್ (896 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

MOTIV.e City Car

ಅದೇ ಹೊತ್ತಿಗೆ ಸಿಂಗಲ್ ಸ್ಪೀಡ್ ಟ್ರಾನ್ಸ್‌ಮಿಷನ್ ಆಳವಡಿಸಿರುವುದು ಇದರ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಹಾಗೆಯೇ 15 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

MOTIV.e City Car

ಇನ್ನು ಮೂರು ತಾಸುಗಳಷ್ಟು ಹೊತ್ತು ಸಂಪೂರ್ಣ ಚಾರ್ಜ್ ಮಾಡಿಸಿದ್ದಲ್ಲಿ 160 ಕೀ.ಮೀ. ದೂರದ ವರೆಗೆ ಸಂಚರಿಸಬಹುದಾಗಿದೆ. ತಾಜಾ ಮಾಹಿತಿಗಾಳಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ

English summary
Gordon Murray, the man who designed the legendary McLaren F1 and even Formula 1 race cars is now on a mission to develop eco friendly, compact, easy and inexpensive to manufacture city cars and helping him realise his dreams is none other than Yamaha.
Story first published: Tuesday, November 26, 2013, 16:33 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more