ನ್ಯೂಯಾರ್ಕ್ ರಂಜಿಸಿದ 2015 ಟೊಯೊಟಾ ಕ್ಯಾಮ್ರಿ

Written By:

ಪ್ರತಿಷ್ಠಿತ 2014 ನ್ಯೂಯಾರ್ಕ್ ಆಟೋ ಶೋದಲ್ಲಿ ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾ ನೂತನ 2015 ಕ್ಯಾಮ್ರಿ ಆವೃತ್ತಿಯನ್ನು ಪರಿಚಯಿಸಿದೆ.

ಅಮೆರಿಕದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಟೊಯೊಟಾದ ಕರೊಲ್ಲಾ ಗುರುತಿಸಿಕೊಂಡಿದೆ. ಇದೀಗ ಹೊಸ ಕ್ಯಾಮ್ರಿ ಎಂಟ್ರಿಯೊಂದಿಗೆ ಅಮೆರಿಕ ವಾಹನ ಪ್ರಿಯರಲ್ಲಿ ಇನ್ನಷ್ಟು ಸಂತಸ ಮೂಡಿಸಿದೆ.

ನ್ಯೂಯಾರ್ಕ್ ರಂಜಿಸಿದ 2015 ಟೊಯೊಟಾ ಕ್ಯಾಮ್ರಿ

ಎಲ್ಲ ಹೊಸತನದಿಂದ ಕೂಡಿದ ಕ್ಯಾಮ್ರಿ, ಆಕ್ರಮಣಕಾರಿ ಕ್ರೀಡಾತ್ಮಕ ವಿನ್ಯಾಸ ಪಡೆದಕೊಂಡಿದೆ. ಇದು ಯುವ ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸುವ ನಿರೀಕ್ಷೆ ಹೊಂದಿದೆ.

ನ್ಯೂಯಾರ್ಕ್ ರಂಜಿಸಿದ 2015 ಟೊಯೊಟಾ ಕ್ಯಾಮ್ರಿ

ಈಗಿರುವ ವೆರಿಯಂಟ್‌ಗಳೊಂದಿಗೆ ಹೊಸತಾಗಿ ಎರಡು ವೆರಿಯಂಟ್‌ಗಳನ್ನು 2015 ಟೊಯೊಟಾ ಕ್ಯಾಮ್ರಿ ಸಾಲಿಗೆ ಸೇರ್ಪಡೆಗೊಳಿಸಲಾಗಿದೆ. ಅವುಗಳೆಂದರೆ ಸ್ಪೋರ್ಟ್ ಎಕ್ಸ್‌ಎಸ್‌ಇ ಹಾಗೂ ಹೈಬ್ರಿಡ್ ಎಸ್‌ಇ.

ನ್ಯೂಯಾರ್ಕ್ ರಂಜಿಸಿದ 2015 ಟೊಯೊಟಾ ಕ್ಯಾಮ್ರಿ

ಈ ಪೈಕಿ ಎಕ್ಸ್‌ಎಸ್‌ಇ ವೆರಿಯಂಟ್ ವಿಷಮ ಸಮಾನಾಂತರ ಚತುರ್ಭುಜಾಕಾರದ (trapezoidal grille) ಗ್ರಿಲ್ ಪಡೆದುಕೊಂಡಿದ್ದು, 18 ಇಂಚು ಅಲಾಯ್ ವೀಲ್‌ಗಳೊಂದಿಗೆ ವಿಶಿಷ್ಟವೆನಿಸಿದೆ.

ನ್ಯೂಯಾರ್ಕ್ ರಂಜಿಸಿದ 2015 ಟೊಯೊಟಾ ಕ್ಯಾಮ್ರಿ

ಇನ್ನಿತರ ವೆರಿಯಂಟ್‌ಗಳು ಸಹ ಟ್ರೇಪ್‌ಜೋಡೈಲ್ ಗ್ರಿಲ್ ಜತೆ ಅಡ್ಡ ಸಾಲುಗಳನ್ನು ಪಡೆದಿದೆ. ಇದರಲ್ಲಿ ಐಚ್ಛಿಕ ಹೆಡ್ ಲ್ಯಾಂಪ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಇಂಟೇಗ್ರೇಟಡ್ ಟರ್ನ್ ಸಿಗ್ನಲ್‌ಗಳು ಇರಲಿದೆ.

ನ್ಯೂಯಾರ್ಕ್ ರಂಜಿಸಿದ 2015 ಟೊಯೊಟಾ ಕ್ಯಾಮ್ರಿ

ಇನ್ನು ಹಿಂದುಗಡೆ ಟೈಲ್ ಲೈಟ್‌ನ್ಲಲಿ ಕ್ರೋಮ್ ಪಟ್ಟಿ ಹಾದು ಹೋಗುತ್ತಿದೆ. ಇದು ಹೆಚ್ಚು ಕ್ರೀಡಾತ್ಮಕ ವಿನ್ಯಾಸ ಪ್ರದಾನ ಮಾಡುತ್ತಿದೆ. ಹಾಗೆಯೇ ಬೂಟ್ ಲಿಪ್ ಸ್ಪಾಯ್ಲರ್ ಹಾಗೂ ಟ್ವಿನ್ ಎಕ್ಸಾಸ್ಟ್ ಪೈಪ್ ಕೂಡಾ ಇದರಲ್ಲಿದೆ.

ನ್ಯೂಯಾರ್ಕ್ ರಂಜಿಸಿದ 2015 ಟೊಯೊಟಾ ಕ್ಯಾಮ್ರಿ

ಕಾರಿನೊಳಗೆ ಪ್ರೀಮಿಯಂ ಸ್ಪರ್ಶ ಕಲ್ಪಿಸಿಕೊಡಲಾಗಿದ್ದು, ಉನ್ನತ ಗುಣಮಟ್ಟದ ಪರಿಕರಗಳನ್ನು ಬಳಕೆ ಮಾಡಲಾಗಿದೆ.

ನ್ಯೂಯಾರ್ಕ್ ರಂಜಿಸಿದ 2015 ಟೊಯೊಟಾ ಕ್ಯಾಮ್ರಿ

ಇದರಲ್ಲಿ 4.3 ಇಂಚಿನ ಟಿಎಫ್‌ಟಿ ಕಲರ್ ಡಿಸ್‌ಪ್ಲೇ ಇರಲಿದೆ. ಹಾಗೆಯೇ 12 ವೋಲ್ಟ್ ಯುಎಸ್‌ಬಿ ಚಾರ್ಜಿಂಗ್ ಔಟ್‌ಲೆಟ್ ಜತೆಗೆ ಸ್ಮಾರ್ಟ್‌ಪೋನ್ ಸಂಪರ್ಕಿತ ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಯು ಇದೆ.

ನ್ಯೂಯಾರ್ಕ್ ರಂಜಿಸಿದ 2015 ಟೊಯೊಟಾ ಕ್ಯಾಮ್ರಿ

ಸೆಂಟ್ರಲ್ ಕನ್ಸೋಲ್ ಮೇಲೊಂದು ನಿಕಟ ನೋಟ. ಇಲ್ಲಿ ಹೊಸ ಕಲರ್ ಡಿಸ್‌ಪ್ಲೇ ನೋಡಬಹುದಾಗಿದೆ.

ನ್ಯೂಯಾರ್ಕ್ ರಂಜಿಸಿದ 2015 ಟೊಯೊಟಾ ಕ್ಯಾಮ್ರಿ

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದು 2.5 ಲೀಟರ್ ಫೋರ್ ಸಿಲಿಂಡರ್, 3.5 ಲೀಟರ್ ವಿ6 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ಪವರ್ ವಿತರಣೆಯಾಗಲಿದೆ. ಹಾಗೆಯೇ 2.5 ಲೀಟರ್ ಆಟ್ಕಿಸನ್ ಸೈಕಲ್ ಎಂಜಿನ್ ಜತೆ ಹೈಬ್ರಿಡ್ ಸೈನರ್ಜಿ ಡ್ರೈವ್, ಇ-ಸಿವಿಟಿ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ನ್ಯೂಯಾರ್ಕ್ ರಂಜಿಸಿದ 2015 ಟೊಯೊಟಾ ಕ್ಯಾಮ್ರಿ

ಅಂದ ಹಾಗೆ 2015 ಟೊಯೊಟಾ ಕ್ಯಾಮ್ರಿ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕ ಮಾರುಕಟ್ಟೆ ಪ್ರವೇಶಿಸಲಿದೆ. ಸದ್ಯಕ್ಕಂತೂ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

English summary
The all new Camry, showcased at the New York Auto Show 2014, is aggressive and sporty, while still managing to be elegant.
Story first published: Friday, April 18, 2014, 12:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark