ಮಾರುತಿ ಸುಜುಕಿ ಎರ್ಟಿಗಾ: ಹಾಯ್ ಹೇಳೋಣ ಬಾ
ಮಾರುತಿ ಸುಜುಕಿ ಬ್ರಾಂಡಿನ ಕಾರು ಪ್ರೇಮಿಗಳಿಗಿದು ಸವಿ ಸುದ್ದಿ. ಕಂಪನಿಯು "ಎರ್ಟಿಗಾ" ಹೆಸರಿನ ಕಾಂಪ್ಯಾಕ್ಟ್ ಮಲ್ಟಿ ಪರ್ಪೊಸ್ ವಾಹನವನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಪರಿಚಯಿಸಿದೆ. ಇದರ ದರ ಸುಮಾರು 6 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ನೂತನ ಆಕರ್ಷಕ ಎಂಪಿವಿ ಎರ್ಟಿಗಾವನ್ನು ಸುಜುಕಿ ಮೋಟರ್ ಕಾರ್ಪೊರೇಷನ್ ಜಾಗತಿಕ ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಕೆನಿಶಿ ಅಯುಕವಾ ಅನಾವರಣ ಮಾಡಿದ್ದಾರೆ. ನೂತನ ಎರ್ಟಿಗಾ ಎಂಪಿವಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ರಸ್ತೆಗಿಳಿಯಲಿದೆ.
"ದೆಹಲಿ ವಾಹನ ಪ್ರದರ್ಶನದಲ್ಲಿ ಕಂಪನಿಯ ವಿವಿಧ ಮಾಡೆಲ್ ಕಾರುಗಳನ್ನು ಪ್ರದರ್ಶಿಸುವುದರ ಜೊತೆಗೆ ಕಾಂಪ್ಯಾಕ್ಟ್ ಕಾರು ಉತ್ಪಾದನೆಯಲ್ಲೂ ನಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ದೊರಕಿದೆ" ಎಂದು ಕೆನಿಶಿ ಅಯುಕವಾ ಹೇಳಿದ್ದಾರೆ.
ಇದು ಏಳು ಸೀಟಿನ ಎಂಪಿವಿ ಆಗಿದ್ದು, ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಲ್ಲಿ ಅನಾವರಣಗೊಳ್ಳಲಿದೆ. ಈ ಕಾರಿನ ದರ ಸುಮಾರು 6 ಲಕ್ಷ ರುಪಾಯಿ ಆಸುಪಾಸಿನಲ್ಲಿರುವುದಾಗಿ ಮೂಲಗಳು ತಿಳಿಸಿವೆ.
ನೂತನ ಎರ್ಟಿಗಾ ಆಲ್ ನ್ಯೂ 1.4 ಲೀಟರ್ ಕೆ14 ವಿವಿಟಿ ಪೆಟ್ರೋಲ್ ಮತ್ತು 1.3 ಲೀಟರ್ ಡಿಡಿಐಎಸ್ ಸೂಪರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿರಲಿದೆ. ನೂತನ ಎರ್ಟಿಗಾ ಪೆಟ್ರೋಲ್ ಆವೃತ್ತಿ ಮೈಲೇಜ್ ಸುಮಾರು 16.02 ಕಿ.ಮೀ. ಮತ್ತು ಡೀಸೆಲ್ ಆವೃತ್ತಿ ಸುಮಾರು 20.77 ಕಿ.ಮೀ. ಮೈಲೇಜ್ ನೀಡುವುದಾಗಿ ಮೂಲಗಳು ತಿಳಿಸಿವೆ.


Click it and Unblock the Notifications








