ಅತಿಭಯಂಕರ ಮೈಲೇಜಿನ ಗುಬ್ಬಚ್ಚಿ ಗೂಡು ಕಾರು

ಇತ್ತೀಚೆಗೆ ದೆಹಲಿ ವಾಹನ ಪ್ರದರ್ಶನದಲ್ಲಿ ಫೋಕ್ಸ್ ವ್ಯಾಗನ್ ಕಂಪನಿಯು ಎಕ್ಸ್ಎಲ್1 ಎಂಬ ಅತ್ಯಧಿಕ ಕಾರ್ಯಕ್ಷಮತೆಯ ಕಾನ್ಸೆಪ್ಟ್ ಕಾರನ್ನು ಅನಾವರಣ ಮಾಡಿದೆ. ಈ ಕಾರು ಪ್ರತಿಲೀಟರ್ ಡೀಸೆಲಿಗೆ ನೂರು ಕಿ.ಮೀ. ಮೈಲೇಜ್ ನೀಡುತ್ತದೆ.

Volkswagen XL1 Most Economical Car

ಫೋಕ್ಸ್ ವ್ಯಾಗನ್ ನೂತನ ಎಕ್ಸ್ಎಲ್1 ಕಾರು 800ಸಿಸಿಯ ಟಿಡಿಐ, ಎರಡು ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್ ಹೊಂದಿದೆ. ಈ ಡೀಸೆಲ್ ಎಂಜಿನ್ 48 ಪಿಎಸ್ ಪವರ್ ನೀಡುತ್ತದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟರ್ 27 ಪಿಎಸ್ ಪವರ್ ನೀಡುತ್ತದೆ. ಒಟ್ಟಾರೆಯಾಗಿ ಈ ಕಾರು ಒಟ್ಟು 75 ಪಿಎಸ್ ಪವರ್ ನೀಡುತ್ತದೆ.

ಟಿಡಿಐ ಎಂಜಿನ್ ನೇರವಾಗಿ ಎಲೆಕ್ಟ್ರಿಕ್ ಮೋಟರ್ ಗೆ ಲಿಂಕ್ ಹೊಂದಿದೆ. ಇದರಲ್ಲಿ 7 ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಕ್ಲಚ್ ಹೊಂದಿದೆ. ಇದರ ಹಿಂಭಾಗದ ಸೀಟಿಗೂ ಮುಂಭಾಗದ ಡೋರಿನ ಮೂಲಕವೇ ಪ್ರವೇಶಿಸುವಂತಹ ವಿನ್ಯಾಸ ಹೊಂದಿದೆ. ಇದರ ಡೋರುಗಳು ಹಕ್ಕಿಯ ರೆಕ್ಕೆಯಂತೆ ಮೇಲ್ಮುಖವಾಗಿ ಓರೆಯಾಗಿ ತೆರೆದುಕೊಳ್ಳುತ್ತದೆ.

ಈ ಕಾರಿನ ವಿನ್ಯಾಸವೇ ಸೂಪರ್. ಇದು ಸದ್ಯ ಕಾನ್ಸೆಪ್ಟ್ ಕಾರು. ಇದು ಉತ್ಪಾದನಾ ಹಂತದವರೆಗೆ ಸಾಗುವುದೋ ಗೊತ್ತಿಲ್ಲ. ಈ ಕಾರು ರಸ್ತೆಗಿಳಿದರೆ ಅತ್ಯಧಿಕ ಇಂಧನ ದಕ್ಷತೆಯ ಕಾರೆಂಬ ಖ್ಯಾತಿಗೆ ಪಾತ್ರವಾಗುವುದರಲ್ಲಿ ಸಂಶಯವಿಲ್ಲ.

ಕನ್ನಡ ಡ್ರೈವ್ ಸ್ಪಾರ್ಕ್

More from DriveSpark

Article Published On: Wednesday, January 11, 2012, 14:01 [IST]
English summary
Volkswagen has unveiled the world's most economical car XL1 at Delhi Auto Expo. XL1 that it says can travel 313 miles on a gallon of diesel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+