ಹೈಬ್ರಿಡ್ ಎಂಜಿನ್‌ನೊಂದಿಗೆ ಹ್ಯುಂಡೈ ಕ್ರೆಟಾವನ್ನು ಸೆಡ್ಡು ಹೊಡೆಯಲಿದೆಯಾ ಟೊಯೊಟಾ ಹೈರೈಡರ್!

ಹುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಪ್ರಸ್ತುತ, ಕ್ರೆಟಾದ ಎರಡನೇ ತಲೆಮಾರಿನ ಮಾದರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹ್ಯುಂಡೈ ಕ್ರೆಟಾಗೆ ಹಲವು ಸ್ಪರ್ಧಿಗಳಿದ್ದರೂ ಕ್ರೆಟಾ ಮಾತ್ರ ತನ್ನ ಅಗ್ರ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ.

ಹೈಬ್ರಿಡ್ ಎಂಜಿನ್‌ ಹೊಂದಿದ್ದರೂ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಕ್ರೆಟಾಗಿಂತ ಹಿಂದುಳಿದ ಟೊಯೊಟಾ ಹೈರೈಡರ್

ಇದೀಗ ಈ ಪ್ರಬಲ ಕ್ರೆಟಾ ಮಾದರಿಯನ್ನು ಸೆಡ್ಡು ಹೊಡಿಯಲು ಜಪಾನಿನ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ಹೊಸ ಎಸ್‌ಯುವಿ ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ಪರಿಚಯಿಸಿದ್ದು, ಇದು ಹೈಬ್ರಿಡ್ ಎಂಜಿನ್‌ನೊಂದಿಗೆ ಬರುತ್ತದೆ. ಈಗಾಗಲೇ ಸಾಕಷ್ಟು ನಿರೀಕ್ಷೆಗಳ್ನು ಹುಟ್ಟುಹಾಕಿರುವ ಹೈರೈಡರ್, ಹ್ಯುಂಡೈ ಕ್ರೆಟಾಗಿಂತ ಉತ್ತಮ ಎಂಜಿನ್ ಪಡೆದುಕೊಂಡಿದೆ.

ಹೈಬ್ರಿಡ್ ಎಂಜಿನ್‌ ಹೊಂದಿದ್ದರೂ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಕ್ರೆಟಾಗಿಂತ ಹಿಂದುಳಿದ ಟೊಯೊಟಾ ಹೈರೈಡರ್

ಆದರೆ ಎಂಜಿನ್‌ನ ವಿಷಯದಲ್ಲಿ ಕ್ರೆಟಾಕ್ಕಿಂತ ಉತ್ತಮವಾಗಿದ್ದರೂ, ಟೊಯೊಟಾ ಹೈರೈಡರ್ ಕೆಲವು ವೈಶಿಷ್ಟ್ಯಗಳ ವಿಷಯದಲ್ಲಿ ಕ್ರೆಟಾಕ್ಕಿಂತ ಹಿಂದುಳಿದಿದೆ. ಹ್ಯುಂಡೈ ಕ್ರೆಟಾದಲ್ಲಿ ನೀಡಲಾಗುತ್ತಿರುವ ವೈಶಿಷ್ಟ್ಯಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ. ಇಲ್ಲಿ ತಿಳಿಸಲಾಗಿರುವ ಹ್ಯುಂಡೈ ವೈಶಿಷ್ಟ್ಯಗಳು ಟೊಯೊಟಾ ಹೈರೈಡರ್‌ನಲ್ಲಿ ಲಭ್ಯವಿಲ್ಲ.

ಹೈಬ್ರಿಡ್ ಎಂಜಿನ್‌ ಹೊಂದಿದ್ದರೂ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಕ್ರೆಟಾಗಿಂತ ಹಿಂದುಳಿದ ಟೊಯೊಟಾ ಹೈರೈಡರ್

ಎಂಜಿನ್

ನ್ಯಾಚುರಲಿ ಆ್ಯಸ್ಪಿರೇಟೆಡ್ ಎಂಜಿನ್ ಹೊರತುಪಡಿಸಿ, ಹ್ಯುಂಡೈ ಕ್ರೆಟಾವನ್ನು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುತ್ತಿದೆ. ಈ ಎರಡೂ ಎಂಜಿನ್ ಆಯ್ಕೆಗಳು ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ನಲ್ಲಿ ಲಭ್ಯವಿಲ್ಲ.

ಹೈಬ್ರಿಡ್ ಎಂಜಿನ್‌ ಹೊಂದಿದ್ದರೂ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಕ್ರೆಟಾಗಿಂತ ಹಿಂದುಳಿದ ಟೊಯೊಟಾ ಹೈರೈಡರ್

ಇದು ಟೊಯೋಟಾದ ಪ್ರಮುಖ ನ್ಯೂನತೆಯಾಗಿದೆ. ಡೀಸೆಲ್ ಎಂಜಿನ್‌ಗಳನ್ನು ಸರ್ಕಾರವು ಹಂತಹಂತವಾಗಿ ತೆಗೆದುಹಾಕುವವರೆಗೆ, ಡೀಸೆಲ್ ಎಂಜಿನ್‌ಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಏಕೆಂದರೆ ಅವು ಹೆಚ್ಚು ಟಾರ್ಕ್ ಮತ್ತು ಉತ್ತಮ ಮೈಲೇಜ್ ನೀಡುತ್ತವೆ.

ಹೈಬ್ರಿಡ್ ಎಂಜಿನ್‌ ಹೊಂದಿದ್ದರೂ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಕ್ರೆಟಾಗಿಂತ ಹಿಂದುಳಿದ ಟೊಯೊಟಾ ಹೈರೈಡರ್

ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಬಯಸುವ ಗ್ರಾಹಕರಿಗೆ ಹ್ಯುಂಡೈ ಹೆಚ್ಚು ಶಕ್ತಿಶಾಲಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ನೀಡುತ್ತದೆ. ದುರದೃಷ್ಟವಶಾತ್, ಕಂಪನಿಯು ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ನಲ್ಲಿ ಅಂತಹ ಯಾವುದೇ ಆಯ್ಕೆಯನ್ನು ಒದಗಿಸುತ್ತಿಲ್ಲ.

ಹೈಬ್ರಿಡ್ ಎಂಜಿನ್‌ ಹೊಂದಿದ್ದರೂ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಕ್ರೆಟಾಗಿಂತ ಹಿಂದುಳಿದ ಟೊಯೊಟಾ ಹೈರೈಡರ್

ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್

ಹ್ಯುಂಡೈ ಕ್ರೆಟಾ 8-ವೇ ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಅನ್ನು ಪಡೆಯುತ್ತದೆ. ಇದು ಹೆಚ್ಚು ಪ್ರೀಮಿಯಂ ಭಾವನೆಯನ್ನು ನೀಡುವುದಲ್ಲದೆ ಉತ್ತಮ ಚಾಲನಾ ಪರಿಸ್ಥಿತಿಗಳನ್ನು ಒದಗಿಸಲು ಹೆಚ್ಚಿನ ಹೊಂದಾಣಿಕೆಗಳನ್ನು ಸಹ ನೀಡುತ್ತದೆ.

ಹೈಬ್ರಿಡ್ ಎಂಜಿನ್‌ ಹೊಂದಿದ್ದರೂ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಕ್ರೆಟಾಗಿಂತ ಹಿಂದುಳಿದ ಟೊಯೊಟಾ ಹೈರೈಡರ್

ಮತ್ತೊಂದೆಡೆ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಈ ವೈಶಿಷ್ಟ್ಯವನ್ನು ಹೊಂದಿಲ್ಲ. ಟೊಯೋಟಾ ಇಲ್ಲಿ ಸರಿಯಾದ ನಿರ್ಧಾರವನ್ನು ಮಾಡಿದೆ ಎಂದು ನಮಗೆ ಖಚಿತವಿಲ್ಲ. ವೆಚ್ಚವನ್ನು ಕಡಿತಗೊಳಿಸಲು ಟೊಯೋಟಾ ಈ ವೈಶಿಷ್ಟ್ಯವನ್ನು ತಳ್ಳಿಹಾಕಿದೆ ಎಂದು ಭಾವಿಸಬಹುದು.

ಹೈಬ್ರಿಡ್ ಎಂಜಿನ್‌ ಹೊಂದಿದ್ದರೂ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಕ್ರೆಟಾಗಿಂತ ಹಿಂದುಳಿದ ಟೊಯೊಟಾ ಹೈರೈಡರ್

ನವೀಕರಿಸಿದ ಮತ್ತು ಹೊಸ ಹೈಬ್ರಿಡ್ ಕಾರಿನಲ್ಲಿ ಈ ವೈಶಿಷ್ಟ್ಯದ ಅನುಪಸ್ಥಿತಿಯು ಒಂದು ಪ್ರಮುಖ ನ್ಯೂನತೆಯಾಗಿದೆ. ಟೊಯೋಟಾ ಕಾಂಪ್ಯಾಕ್ಟ್ SUV ಮಾರುಕಟ್ಟೆಗೆ ಹೊಸದು ಆದರೆ ಸುಮಾರು ಒಂದು ದಶಕದಿಂದ ಭಾರತದಲ್ಲಿ ಈ ವಿಭಾಗವು ಹೆಚ್ಚು ಸ್ಪರ್ಧಾತ್ಮಕವಾಗಿದೆ. ಸಣ್ಣ ವೈಶಿಷ್ಟ್ಯಗಳು ಸಹ ಈ ವಿಭಾಗದಲ್ಲಿ ಒಪ್ಪಂದವನ್ನು ಹಾಳುಮಾಡಬಹುದು.

ಹೈಬ್ರಿಡ್ ಎಂಜಿನ್‌ ಹೊಂದಿದ್ದರೂ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಕ್ರೆಟಾಗಿಂತ ಹಿಂದುಳಿದ ಟೊಯೊಟಾ ಹೈರೈಡರ್

ಬಾಸ್ ಸೌಂಡ್ ಸಿಸ್ಟಮ್

ಸ್ಪೀಕರ್‌ಗಳ ವಿಷಯಕ್ಕೆ ಬಂದಾಗ ಬಾಸ್‌ ಸೌಂಡ್ ಸಿಸ್ಟಮ್‌ಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಹ್ಯುಂಡೈ ಕ್ರೆಟಾ ಬಾಸ್‌ನ ಪ್ರೀಮಿಯಂ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಇತರ ಸಂಗೀತ ವ್ಯವಸ್ಥೆಗಳಿಗೆ ಹೋಲಿಸಿದರೆ ಇದು ಸಾಟಿಯಿಲ್ಲದ ಸಂಗೀತ ಅನುಭವವನ್ನು ನೀಡುತ್ತದೆ. ಯಾವುದೇ ಆಧುನಿಕ ಕಾರಿನಲ್ಲಿ ಸೌಂಡ್ ಸಿಸ್ಟಮ್ ಬಹಳ ಮುಖ್ಯವಾದ ಭಾಗವಾಗಿದೆ. ಆದರೆ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಾಸ್‌ನ ಪ್ರೀಮಿಯಂ ಸೌಂಡ್ ಸಿಸ್ಟಮ್ ಅನ್ನು ಹೊಂದಿಲ್ಲ.

ಹೈಬ್ರಿಡ್ ಎಂಜಿನ್‌ ಹೊಂದಿದ್ದರೂ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಕ್ರೆಟಾಗಿಂತ ಹಿಂದುಳಿದ ಟೊಯೊಟಾ ಹೈರೈಡರ್

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

ಎರಡೂ ಕಾರುಗಳು ಸ್ಮಾರ್ಟ್‌ಫೋನ್ ಸಂಪರ್ಕವನ್ನು ನೀಡುತ್ತವೆ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುತ್ತವೆ, ಆದರೆ ಹ್ಯುಂಡೈ ಕ್ರೆಟಾ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದ ವೈರ್‌ಲೆಸ್ ಸಂಪರ್ಕವನ್ನು ನೀಡುತ್ತದೆ. ಆದರೆ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ನಲ್ಲಿ ಈ ವೈಶಿಷ್ಟ್ಯವು ಲಭ್ಯವಿಲ್ಲ.

ಹೈಬ್ರಿಡ್ ಎಂಜಿನ್‌ ಹೊಂದಿದ್ದರೂ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಕ್ರೆಟಾಗಿಂತ ಹಿಂದುಳಿದ ಟೊಯೊಟಾ ಹೈರೈಡರ್

ವೈರ್‌ಲೆಸ್ ಸಂಪರ್ಕದ ಕೊರತೆಯು ಹೆಚ್ಚಿನ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲವಾದರೂ, ಯುವ ಗ್ರಾಹಕರು ಇತ್ತೀಚಿನ ದಿನಗಳಲ್ಲಿ ಕಾರುಗಳಲ್ಲಿ ಅಂತಹ ವೈಶಿಷ್ಟ್ಯಗಳನ್ನು ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದು ಕೂಡ ಕಾರ್ ವೈಶಿಷ್ಟ್ಯದಲ್ಲಿ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ತುಸು ಹಿಂದಕ್ಕೆ ತಳ್ಳಿದೆ ಎಂದು ಹೇಳಬಹುದು.

ಹೈಬ್ರಿಡ್ ಎಂಜಿನ್‌ ಹೊಂದಿದ್ದರೂ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಕ್ರೆಟಾಗಿಂತ ಹಿಂದುಳಿದ ಟೊಯೊಟಾ ಹೈರೈಡರ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮುಂಬರು ದಿನಗಳಲ್ಲಿ ಡೀಸೆಲ್ ಎಂಜಿನ್‌ಗಳನ್ನು ಸರ್ಕಾರವು ಹಂತಹಂತವಾಗಿ ತೆಗೆದುಹಾಕುವವರೆಗೆ, ಡೀಸೆಲ್ ಎಂಜಿನ್‌ಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಸದ್ಯ ಹ್ಯುಂಡೈ ಕ್ರೆಟಾ ಕೂಡ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪ್ರಬಲವಾಗಿ ನಿಂತಿದೆ. ಇದೀಗ ಕ್ರೆಟಾವನ್ನು ಹಿಂದಿಕ್ಕಲು ಟೊಯೊಟಾ ಹೈರೈರ್ ಯಾವ ಮಟ್ಟಿಗೆ ಪೈಪೋಟಿ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

Most Read Articles

Kannada
English summary
Despite having a hybrid engine the toyota hyryder lags behind the hyundai creta in terms of features
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X