ಟಾಟಾ ಇಂಡಿಗೊ ಮಾಂಝಾ: ಡೀಸೆಲ್-ಎಲೆಕ್ಟ್ರಿಕ್ ಹೈಬ್ರಿಡ್

Posted By:

ಟಾಟಾ ಮೋಟರ್ಸ್ ಕಂಪನಿಯು ಟಾಟಾ ಇಂಡಿಗೊ ಮಾಂಝಾ ಎಂಬ ಡೀಸೆಲ್ ಎಲೆಕ್ಟ್ರಿಕ್ ಹೈಬ್ರಿಡ್ ಕಾನ್ಸೆಪ್ಟ್ ಕಾರನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಪರಿಚಯಿಸಿತ್ತು. ಈ ಕಾರಿನ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Tata Indigo Manza Hybrid Concept

ಟಾಟಾ ಇಂಡಿಗೊ ಮಾಂಝಾ ಹೈಬ್ರಿಡ್ ಕಾನ್ಸೆಪ್ಟ್ ಕಾರು ತಂತ್ರಜ್ಞಾನ ಆವಿಷ್ಯಾರ ಮತ್ತು ಐಷಾರಾಮಿ ಫೀಚರುಗಳ ಯುಗಳಗೀತೆಯಾಗಿದೆ. ಇದು ಹೈಬ್ರಿಡ್ 1.05 ಲೀಟರ್ ಡಿಕೊರ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟರ್ಸ್ ಹೊಂದಿದೆ.

ಇದು ಅತ್ಯಧಿಕ ಕಾರ್ಯಕ್ಷಮತೆಯ ಕಾರು. ಇದರಲ್ಲಿ ಸ್ಪೀಡ್ ನಿಯಂತ್ರಣ, ಸುಲಭವಾಗಿ ನಿರ್ವಹಿಸಬಹುದಾದ ಬ್ರೇಕ್, ಆಟೋ ಸ್ಟಾರ್ಟ್/ಸ್ಟಾಫ್, ಸೀರಿಸ್ ಹೈಬ್ರಿಡ್ ಮೂಡ್, ಕಡಿಮೆ ದೂರಕ್ಕೆ ಎಲೆಕ್ಟ್ರಿಕ್ ಪವರ್ ಮೂಲಕ ಪ್ರಯಾಣ ಅವಕಾಶ ಇತ್ಯಾದಿ ಫೀಚರುಗಳಿವೆ.

ಇಂಡಿಗೊ ಮಾಂಝಾ ಹೈಬ್ರಿಡ್ ಕಾನ್ಸೆಪ್ಟ್ ಕಾರು ಅತ್ಯಧಿಕ ಸಾಮರ್ಥ್ಯದ ಲೀಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇದರೊಂದಿಗೆ ಸೌರಶಕ್ತಿ ಪ್ಯಾನೆಲ್ ಕೂಡ ಕಾರಿನಲ್ಲಿದೆ. ಈ ಕಾರಿನಲ್ಲಿ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಏರ್ ಬ್ಯಾಗ್ ಮುಂತಾದ ಸ್ಟಾಂಡರ್ಡ್ ಸುರಕ್ಷತೆಯ ಫೀಚರುಗಳಿವೆ.

ಒಟ್ಟಾರೆಯಾಗಿ ಮಾಂಝಾ ಹೈಬ್ರಿಡ್ ಕಾನ್ಸೆಪ್ಟ್ ಕಾರು ಹತ್ತು ಹಲವು ಆಕರ್ಷಕ ಫೀಚರುಗಳನ್ನು ಹೊಂದಿವೆ. ಪೆಟ್ರೋಲ್, ಡೀಸೆಲ್ ಮುಂತಾದ ಇಂಧನ ದರಗಳು ದುಬಾರಿಯಾಗಿರುವ ಸಂದರ್ಭದಲ್ಲಿ ಈ ಕಾರು ಹೊಸ ಆಶಾಕಿರಣದಂತೆ ಭಾಸವಾಗುತ್ತದೆ. ಕಾನ್ಸೆಪ್ಟ್ ಹಂತದಿಂದ ಈ ಕಾರು ಶೀಘ್ರದಲ್ಲಿ ಉತ್ಪಾದನೆ ಹಂತಕ್ಕೆ ಬರುವ ಕುರಿತು ಕಂಪನಿ ಕಡೆಯಿಂದ ಸ್ಪಷ್ಟ ಉತ್ತರ ದೊರಕಿಲ್ಲ.

English summary
The Tata Indigo Manza Hybrid Concept is a fusion of technology and luxury whilst having an extremely small carbon footprint thanks to its efficient hybrid architecture. Powered by a Hybrid 1.05Litre DiCOR engine and potent electric motors.
Story first published: Wednesday, January 11, 2012, 12:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark