ಟೊಯೊಟಾ 'ನಾನು ನಮಗೆ' ಎಂಪಿವಿ ಕಾನ್ಸೆಪ್ಟ್
ಫ್ಯಾಶನ್ ವಿನ್ಯಾಸಗಾರರ ಡಿಸೈನ್‌ಗಳ ಪಟ್ಟಿಗೆ ನೂತನ ಕಾನ್ಸೆಪ್ಟ್ ಒಂದು ಸೇರ್ಪಡೆಯಾಗಿದೆ. ಫ್ರಾನ್ಸ್‌ನ ವಿನ್ಯಾಸಗಾರ ಜೀನ್-ಮ್ಯಾರಿ ಮಸೌದ್ ನೂತನ ಟೊಯೊಟಾ 'ನಾನು ನಮಗೆ' (Me.We) ಕಾನ್ಸೆಪ್ಟ್ ತಯಾರಿಸಿದ್ದಾರೆ.
ಮಾಲಿಕನ ವೈಯಕ್ತಿಕ ಬಯಕೆಗಳನ್ನು ಪೂರೈಸಲು ಕಾರು ನೆರವಾಗುತ್ತದೆ. ಅದೇ ರೀತಿ ಇತರರ ಬೇಡಿಕೆಗಳನ್ನು ನೆರವೇರಿಸಲು ಸಹಾಯಕರವಾಗಿದೆ. ಇದೇ ಕಾರಣಕ್ಕಾಗಿ ಟೊಯೊಟಾ ನೂತನ ಎಂಪಿಸಿ ಕಾನ್ಸೆಪ್ಟ್ ಕಾರಿಗೆ 'ನಾನು ನಮಗೆ' ಹೆಸರಿಸಲಾಗಿದೆ.
ಪ್ರಸ್ತುತ ಕಾರು ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿರಲು ಯಶಸ್ವಿಯಾಗಿರುವುದು ಹೆಚ್ಚು ಜನರ ಗಮನ ಸೆಳೆಯಲು ಕಾರಣವಾಗಿದೆ. ಹಾಗಿದ್ದಾರೆ ಬನ್ನಿ ಟೊಯೊಟಾ 'ಮಿ ವಿ' ಕಾನ್ಸೆಪ್ಟ್ ಕಾರಿನ ಬಗ್ಗೆ ತಿಳಿದುಕೊಳ್ಳೋಣ...

ಟೊಯೊಟಾ ನಾನು ನಮಗೆ ಕಾನ್ಸೆಪ್ಟ್‌ನಲ್ಲಿ ಬಿದಿರುಗಳನ್ನು ಸಹ ಬಳಕೆ ಮಾಡಲಾಗಿದೆ. ಇದು ಕಾರಿಗೆ ಸಾಂಪ್ರದಾಯಕ ವಿನ್ಯಾಸ ಪ್ರಧಾನ ಮಾಡುತ್ತದೆ.

ಕಾರಿನ ಒಟ್ಟು ಭಾರ 750 ಕೆ.ಜಿ. ಮೊದಲ ನೋಟಕ್ಕೆ ಇದು ಯಾವುದೋ ಮ್ಯೂಸಿಯಂನಲ್ಲಿ ಪತ್ತೆಯಾದ ವಿಂಟೇಜ್ ಕಾರಿನಂತಿದೆ.

ಪ್ರಸ್ತುತ ಮಿ ವಿ ಕಾನ್ಸೆಪ್ಟ್ ಕಾರು ವಿದ್ಯುತ್ ಚಾಲಿತ ಕಾರಾಗಿದೆ. ಅಂದರೆ ಪರಿಸರ ಸ್ನೇಹಿ ಕೂಡಾ ಹೌದು.

ಇನ್ನು ಎಸ್‌ಯುವಿ ವಾಹನದಂತೆ ಟು ವೀಲ್ ಹಾಗೂ ಫೋರ್ ವೀಲ್ ಡ್ರೈವ್ ಆಯ್ಕೆಯಿದೆ.







Click it and Unblock the Notifications








