ಪ್ಯೂಜೊ 508 ಡಿ ಸೆಡಾನ್ ಕಾರ್ ಅನಾವರಣ
ದೆಹಲಿ ವಾಹನ ಪ್ರದರ್ಶನದಲ್ಲಿ ಸಾಕಷ್ಟು ಬ್ಯೂಟಿಗಳು ವೀಕ್ಷಕರ ಕಣ್ಣು ತಂಪಾಗಿಸಿವೆ. ಅದರಲ್ಲಿ ಫ್ರಾನ್ಸಿನ ಪ್ಯೂಜೊ ಹೊರತಂದ ಸೆಡಾನ್ ಕಾರೊಂದು ಹೆಚ್ಚಿನ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರ ಹೆಸರು ಪ್ಯೂಜೊ 508 ಡಿ.
ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನದಲ್ಲಿ ಪ್ಯೂಜೊ ಪರಿಚಯಿಸಿದ Peugeot 508 D ಸೆಡಾನ್ ಆಕರ್ಷಕ ಕಾರು. ಕಂಪನಿಯ ನೂತನ ಸೆಡಾನ್ ಕಾರಿನ ದರದ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಈ ಕಾರು ಪ್ಯೂಜೊ ಪೆವಿಲಿಯನ್ ಕಾರಿನಂತೆ ಇದೆ.
ಪ್ಯೂಜೊ 508 ಡಿ ಮಾತ್ರವಲ್ಲದೇ ಕಂಪನಿಯು RCZ sports coupe ಆವೃತ್ತಿಯನ್ನು ಕೂಡ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿದೆ. "ಕಂಪನಿಯು ದೇಶದಲ್ಲಿ ಸಿಬಿಯು ಘಟಕದ ಮೂಲಕ ದೇಶದ ರಸ್ತೆಗೆ ಪ್ಯೂಜೊ 508 ಡಿ ಕಾರನ್ನು ಪರಿಚಯಿಸಲಿದೆ" ಎಂದು ಪಿಸಿಎ ಮೋಟರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಫ್ರೇಡ್ರಿಕ್ ಫೆಬ್ರಿ ಹೇಳಿದ್ದಾರೆ.


Click it and Unblock the Notifications









