ಮೊದಲ ದೇಶಿ ಸೂಪರ್ ಕಾರ್ ಅನಾವರಣ ಮಾಡಿದ ಅಮಿತಾಬ್
ಪುಣೆ ಮೂಲದ ಡಿಸಿ ಡಿಸೈನ್ ವಿನ್ಯಾಸ ಮಾಡಿದ ಪ್ರಪ್ರಥಮ ದೇಶಿ ಸೂಪರ್ ಕಾರನ್ನು ದೆಹಲಿಯ ಪ್ರಗತಿ ಮೈದಾನದಲ್ಲಿ ಅನಾವರಣ ಮಾಡಲಾಗಿದೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಈ ಕಾರಿನ ಮೇಲೆ ಹಾಕಿದ್ದ ಹೊದಿಕೆ ಸರಿಸಿ ಈ ಕಾರನ್ನು ಅನಾವರಣ ಮಾಡಿದ್ದಾರೆ.

ಈ ಸೂಪರ್ ಕಾರಿನ ಹೆಸರು ಡಿಸಿ ಅವಂತಿ(DC Avanti). ಜನಪ್ರಿಯ ವಿನ್ಯಾಸಗಾರ ದಿಲೀಪ್ ಚೌಬ್ರಿಯಾ ಈ ಕಾರಿನ ವಿನ್ಯಾಸಗಾರ. ದೇಶದ ಲೆಜೆಂಡರಿ ಸಿನಿಮಾ ನಟ ಅಮಿತಾಬ್ ಬಚ್ಚನ್ ಈ ಕಾರನ್ನು ಅನಾವರಣ ಮಾಡಿದ್ದಾರೆ. ಡಿಸಿ ಅವಂತಿ ಸೂಪರ್ ಕಾರು 240 ಹಾರ್ಸ್ ಪವರಿನ ಎಂಜಿನ್ ಹೊಂದಿದ್ದು, 366 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
"ನಾನು ವಿನ್ಯಾಸ ಮಾಡಿರುವ ಸೂಪರ್ ಕಾರಿನ ಲುಕ್, ವಿಶಾಲತೆ, ಗಾತ್ರ ಹೆಚ್ಚು ಜನರ ಮೆಚ್ಚುಗೆ ಪಡೆದಿದೆ. ಈ ಕಾರಿನ ವಿನ್ಯಾಸ ಲಂಬೊರ್ಗಿನಿ ಮತ್ತು ಫೆರಾರಿ ಕಾರುಗಳಂತೆ ಇದೆ. ಹಾರ್ಸ್ ಪವರ್ ಮಾತ್ರ ಈ ಕಾರುಗಳಿಗಿಂತ ಕಡಿಮೆಯಿದೆ" ಎಂದು ದಿಲೀಪ್ ಚೌಬ್ರಿಯಾ ಹೇಳಿದ್ದಾರೆ.
ಈ ಸೂಪರ್ ಕಾರು ಖರೀದಿಗೆ ಕೋಟಿ ರುಪಾಯಿ ಬೇಕಿಲ್ಲ. ಲಕ್ಷ ಲೆಕ್ಕದಲ್ಲಿ ನೀಡಿದರೆ ಸಾಕು. ಇದು ದೇಶಿ ಕಾರಾಗಿರುವುದರಿಂದ ಆಮದು ಸುಂಕದ ಹೊರೆಯಿಲ್ಲ. ಈ ಕಾರಿನ ಹೆಚ್ಚಿನ ಮಾಹಿತಿಗೆ ಮುಂದಿನ ಪುಟಕ್ಕೆ ಪ್ರಯಾಣಿಸಿರಿ.


Click it and Unblock the Notifications








