ನ್ಯಾನೊ ಸಿಎನ್ಜಿ: ಪುಟ್ಟ ಕಾರು ಸ್ವಾಗತಕ್ಕೆ ತಳಿರುತೋರಣ

ಟಾಟಾ ಮೋಟರ್ಸ್ ಕಂಪನಿಯು ಈ ವರ್ಷ ನ್ಯಾನೊ ಕಾರಿನ ಸಂಕುಚಿತ ನೈಸರ್ಗಿಕ ಅನಿಲ(ಸಿಎನ್ಜಿ) ಚಾಲಿತ ಆವೃತ್ತಿಯನ್ನು ದೇಶದ ರಸ್ತೆಗೆ ಪರಿಚಯಿಸಲು ನಿರ್ಧರಿಸಿದೆ.

Tata Motors to launch Nano CNG this year

ಪ್ರಸಕ್ತ ವರ್ಷ ನ್ಯಾನೊ ಸಿಎನ್ ಜಿ ಕಾರನ್ನು ಪರಿಚಯಿಸಲು ಟಾಟಾ ಮೋಟರ್ಸ್ ಯೋಜಿಸಿದೆ. ಈ ಕಾರಿನ ಕಾನ್ಸೆಪ್ಟ್ ಆವೃತ್ತಿಯನ್ನು ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿದೆ. ಜೊತೆಗೆ ಕಂಪನಿಯು ಥೈಲಾಂಡ್, ಇಂಡೋನೇಷ್ಯಾ ಮತ್ತು ಬಾಂಗ್ಲಾ ದೇಶದ ಮಾರುಕಟ್ಟೆಗೆ ನ್ಯಾನೊ ಕಾರಿನೊಂದಿಗೆ ಪ್ರಯಾಣ ಬೆಳೆಸಲು ಯೋಜಿಸಿದೆ.

ಮುಂದಿನ ಆರ್ಥಿಕ ವರ್ಷದ ಉತ್ಪನ್ನ ಅಭಿವೃದ್ಧಿ ಮತ್ತು ಉತ್ಪಾದನಾ ಸಾಮರ್ಥ್ಯ ವಿಸ್ತರಣೆ ಯೋಜನೆಗಾಗಿ ಕಂಪನಿಯು ಸುಮಾರು 3 ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡಲು ಯೋಜಿಸಿದೆ.

"ನ್ಯಾನೊ ಕಾರಿನ ಸಿಎನ್ಜಿ ಆವೃತ್ತಿಯನ್ನು ಶೀಘ್ರದಲ್ಲಿ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜಿಸಿದ್ದೇವೆ. ಈ ಪುಟ್ಟ ಅನಿಲ ಚಾಲಿತ ಕಾರು ಈ ವರ್ಷವೇ ರಸ್ತೆಗಿಳಿಯುವ ನಿರೀಕ್ಷೆಯಿದೆ" ಎಂದು ಟಾಟಾ ಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕ ಪಿಎಂ ತೆಲಾಂಗ್ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಗೆ ನ್ಯಾನೊ ಕಾರಿನ ವಿವಿಧ ಆವೃತ್ತಿಗಳನ್ನು ಪರಿಚಯಿಸುವ ಕುರಿತು ಕೆಲಸ ಮಾಡುತ್ತಿರುವುದಾಗಿ ಕಂ-ಪನಿ ತಿಳಿಸಿದೆ. ಈಗಾಗಲೇ ಶ್ರೀಲಂಕಾ ಮತ್ತು ನೇಪಾಳ ದೇಶಗಳಿಗೆ ಪುಟ್ಟ ನ್ಯಾನೊ ಪ್ರಯಾಣಿಸಿಯಾಗಿದೆ. ಇನ್ನು ಮುಂದೆ ಥೈಲಾಂಡ್, ಇಂಡೋನೇಷ್ಯಾ ದೇಶಗಳಿಗೆ ನ್ಯಾನೊ ಪರಿಚಯಿಸುವ ಯೋಜನೆಯನ್ನು ಕಂಪನಿ ಹೊಂದಿದೆ

More from DriveSpark

Article Published On: Monday, January 9, 2012, 12:43 [IST]
English summary
Tata Motors to launch Nano CNG this year. Tata Motors also plans to invest Rs 3,000 crore on capacity expansion and product development programs in next fiscal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+