ಬಿಎಂಡಬ್ಲ್ಯು ವಿದ್ಯುತ್ ಚಾಲಿತ ಸ್ಕೂಟರ್ ನೋಡೋಣ ಬನ್ನಿ
ಕೆಲವು ತಿಂಗಳುಗಳ ಹಿಂದೆಯಷ್ಟೇ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಐ3 ವಿದ್ಯುತ್ ಚಾಲಿತ ಕಾರೊಂದನ್ನು ಬಿಡುಗಡೆಗೊಳಿಸಿತ್ತು. ಇದರ ಬೆನ್ನಲ್ಲೇ ಐ8 ಎಲೆಕ್ಟ್ರಿಕ್ ಸೂಪರ್ ಕಾರು ಸಹ ಅನಾವರಣಗೊಂಡಿತ್ತು.
ಇಲ್ಲಿಗೆ ಬಿಎಂಡಬ್ಲ್ಯು ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಕೊನೆಗೊಳ್ಳುವುದಿಲ್ಲ; ಬದಲಾಗಿ ಇದು ಕೇವಲ ಆರಂಭವಷ್ಟೇ. ಹೌದು, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳತ್ತವೂ ಕಾಲಿಟ್ಟಿರುವ ಬಿಎಂಡಬ್ಲ್ಯು ಅಂಗಸಂಸ್ಥೆಯಾಗಿರುವ ಬಿಎಂಡಬ್ಲ್ಯು ಮೊಟೊರಾಡ್ ಪ್ರಸಕ್ತ ಸಾಗುತ್ತಿರುವ 65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ 'ಸಿ ಇವೊಲ್ಯೂಷನ್' ಎಲೆಕ್ಟ್ರಿಕ್ ಸ್ಕೂಟರೊಂದನ್ನು ಪರಿಚಯಿಸುತ್ತಿದೆ.
ನಿರ್ಮಾಣ ಸಿದ್ಧ ಸಿ ಇವೊಲ್ಯೂಷನ್ ಆವೃತ್ತಿಯನ್ನು ಅನಾವರಣಗೊಳಿಸಿರುವ ಬಿಎಂಡಬ್ಲ್ಯು, ಸದ್ಯ ದರ ಇತ್ಯಾದಿ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಹೊರಗೆಡವಲಿದೆ.

ಬಿಎಂಡಬ್ಲ್ಯು ಮೊಟೊರಾಡ್ ಸಿ ಇವೊಲ್ಯೂಷನ್ ಎಲೆಕ್ಟ್ರಿಕ್ ಸ್ಕೂಟರ್ ಉನ್ನತ ಮಟ್ಟದ ಚಾಲನಾ ಗುಣಮಟ್ಟವನ್ನು ಹೊಂದಿರಲಿದೆ.

ಪ್ರಸ್ತುತ ಸ್ಕೂಟರ್ 8 kWh ಸಾಮರ್ಥ್ಯದ ಲಿಥಿಯಂ ಇಯಾನ್ ಬ್ಯಾಟರಿನಿಂದ ನಿಯಂತ್ರಿಸಲ್ಪಡುತ್ತಿದ್ದು, 100 ಕೀ.ಮೀ. ರೇಂಜ್ ವರೆಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ.

ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಸಿ ಇವೊಲ್ಯೂಷನ್ ಸ್ಕೂಟರ್ ಕಡಿಮೆ ಭಾರವನ್ನು ಹೊಂದಿಲ್ಲ. ಇದರ ಭಾರ 265 ಕೆ.ಜಿ. ಆಗಿದೆ.

ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು ನಾಲ್ಕು ತಾಸುಗಳಷ್ಟು ಸಮಯ ಬೇಕಾಗಿದೆ.

ಅಷ್ಟಕ್ಕೂ ಕಡಿಮೆ ಸ್ಟೋರೆಜ್ ಜಾಗ ಹೊಂದಿರುವುದು ಇದರ ಪ್ರಮುಖ ಹಿನ್ನಡೆಯಾಗಿ ಪರಿಗಣಿಸಲಾಗುತ್ತಿದೆ.

ಇನ್ನು ಸಿ ಇವೊಲ್ಯೂಷನ್ ಸ್ಕೂಟರ್ ಪ್ರತಿ ಗಂಟೆಗೆ 120 ಕೀ.ಮೀ. ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದು 6.2 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಬಿಎಂಡಬ್ಲ್ಯು ಸಿ ಇವೊಲ್ಯೂಷನ್ ಎಲೆಕ್ಟ್ರಿಕ್ ಸ್ಕೂಟರ್ ಪುನರುತ್ಪಾದಿಸುವ ಬ್ರೇಕಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಇದರಲ್ಲಿ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಅಸಿಸ್ಟ್ ಟೆಕ್ನಾಲಜಿ, ಡೇಟೈಮ್ ರನ್ನಿಂಗ್ ಹೆಡ್‌ಲೈಟ್ ಮತ್ತು ಟಿಎಫ್‌ಟಿ ಕಲರ್ ಡಿಸ್‌ಪ್ಲೇ ಲಗತ್ತಿಸಲಾಗಿದೆ.

ಒಟ್ಟು ನಾಲ್ಕು ಮೋಡ್‌ಗಳಲ್ಲಿ ಲಭ್ಯವಿರುತ್ತದೆ. ರೋಡ್, ಇಕೊ ಪ್ರೊ, ಸೈಲ್ ಮತ್ತು ಡೈನಾಮಿಕ್

ರೋಡ್: ಗರಿಷ್ಠ ವೇಗವರ್ಧನೆ, ಸಂಪೂರ್ಣ ಚೈತನ್ಯ ಪುನರುತ್ಪಾದನೆ

ಇಕೊ ಪ್ರೊ: ಗರಿಷ್ಠ ಪ್ರಮಾಣದ ಚೈತನ್ಯ ಪುನರುತ್ಪಾದನೆ.

ಇದರಲ್ಲಿ ಸೈಲ್ ಮೋಡ್ ಎನರ್ಜಿ ಸೇವ್ ಮಾಡಲು ನೆರವಾಗುವುದಷ್ಟೇ ಅಲ್ಲದೆ ಸ್ಕೂಟರ್ ಸರಾಗವಾಗಿ ಚಲಿಸಲು ನೆರವಾಗಲಿದೆ.

ಇದರ ಡೈನಾನಿಕ್ ಮೋಡ್ ಹೆಚ್ಚಿನ ಪ್ರಮಾಣದ ವೇಗವರ್ಧನೆ ಸಂದರ್ಭದಲ್ಲೂ ಚೈತನ್ಯ ಪುನರುತ್ಪಾದನೆ ಮಾಡಲು ಸಹಕಾರಿಯಾಗಲಿದೆ.


Click it and Unblock the Notifications








