ಕವಾಸಕಿಯಿಂದಲೂ ಬರುತ್ತಂತೆ 3 ಚಕ್ರಗಳ ಎಲೆಕ್ಟ್ರಿಕ್ ಬೈಕ್
'ಬದಲಾವಣೆ ಜಗತ್ತಿನ ನಿಯಮ' ಎಂಬಂತೆ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ಭವಿಷ್ಯದ ಸಂಚಾರ ವಾಹಕ ತಯಾರಿಸುವುದರಲ್ಲಿ ಕಾರ್ಯಮಗ್ನವಾಗಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಇದರಿಂದ ಜಪಾನ್ ಮೂಲದವರೇ ಆಗಿರುವ ಕವಾಸಕಿ ಹೊರತಾಗಿಲ್ಲ. ಅಂದ ಹಾಗೆ ತವರೂರಿನಲ್ಲಿ ಸಾಗುತ್ತಿರುವ ಟೊಕಿಯೊ ಮೋಟಾರ್ ಶೋದಲ್ಲಿ ಕವಾಸಕಿ ವಿಶೇಷವಾದ ವಿದ್ಯುತ್ ಚಾಲಿತ ವಾಹನವೊಂದರ ಕಾನ್ಸೆಪ್ಟ್ ಪ್ರದರ್ಶಿಸಿದೆ.
ಇದು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಯಾವಾಗ ಉತ್ಪಾದನಾ ವರ್ಷನ್ ಪಡೆಯಲಿದೆಯೇ ಎಂಬುದು ಇನ್ನು ಸ್ಪಷ್ಟಪಗೊಂಡಿಲ್ಲ. 0ಇಷ್ಟಕ್ಕೂ ಕವಾಸಕಿ ಭಾವನೆಗೆ ಹೊಂದಿಕೊಂಡಿರುವ ಹೊಸ ಪರಿಕಲ್ಪನೆ ಬೈಕ್ ಯಾವುದು ಇತ್ಯಾದಿ ಮಾಹಿತಿಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...
ಆಟೋ ಶೋಗಳ ರೋಚಕ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದುವೇ 2013 ಟೊಕಿಯೊ ಮೋಟಾರ್ ಶೋದಲ್ಲಿ ಕವಾಸಕಿಯಿಂದ ಅನಾವರಣಗೊಂಡಿರುವ ಕಾನ್ಸೆಪ್ಟ್ ಜೆ ಎಲೆಕ್ಟ್ರಿಕ್ ವೆಹಿಕಲ್.

ಕವಾಸಕಿ ಜೆ ಕಾನ್ಸೆಪ್ಟ್ ಎಲೆಕ್ಟ್ರಿಕ್ ವೆಹಿಕಲ್ ಮೂರು ಚಕ್ರದ ವಾಹನವಾಗಿದೆ. ಹಾಗಿದ್ದರೂ ಇದು ಬೈಕ್ ತರಹನೇ ಕಾರ್ಯನಿರ್ವಹಿಸಲಿದೆ.

ಚಾಲಕರಿಗೆ ಹೊಂದಿಕೆಯಾಗುವ ರೀತಿಯಲ್ಲಿ ಮುಂದುಗಡೆ ಎರಡು ಹಾಗೂ ಹಿಂದುಗಡೆ ಒಂದು ಚಕ್ರ ಲಗತ್ತಿಸಲಾಗಿದೆ.

ಇನ್ನು ಇದರಲ್ಲಿ ಸ್ಪೋರ್ಟ್ ಮೋಡ್ ಇರಲಿದ್ದು, ಗರಿಷ್ಠ ವೇಗತೆಗೆ ಸಹಕಾರಿಯಾಗಲಿದೆ. ಇದೇ ಕಾರಣಕ್ಕಾಗಿ ಏರೋಡೈನಾಮಿಕ್ ವಿನ್ಯಾಸ ಕೂಡಾ ಕಲ್ಪಿಸಲಾಗಿದೆ.

ಇನ್ನು ಮುಂಭಾಗಕ್ಕೆ ಹೋಲಿಸಿದರೆ ಹಿಂದುಗಡೆಯ ಚಕ್ರ ಹೆಚ್ಚು ದಪ್ಪವಾಗಿರಲಿದೆ. ಇದು ರೈಡಿಂಗ್ ವೇಳೆ ಸಮತೋಲನ ಕಾಪಾಡಿಕೊಳ್ಳಲು ನೆರವಾಗಲಿದೆ.

ಇನ್ನು ತಾಂತ್ರಿಕತೆ ಬಗ್ಗೆ ಮಾತನಾಡುವುದಾದ್ದಲ್ಲಿ ಕವಾಸಕಿ ಜೆ ಕಾನ್ಸೆಪ್ಟ್ ಸಾಮಾನ್ಯವಾದ ಲಿಥಿಯಂ ಇಯಾನ್ ಬ್ಯಾಟರಿಯ ಬದಲು ವಿಶೇಷವಾದ ಬಿಸ್ಪೋಕ್ 'ಗಿಗಾಸೆಲ್' ನಿಕೆಲ್ ಮೆಟಲ್ ಹೈಡ್ರೈಡ್ (NiMH) ಬ್ಯಾಟರಿಯಿಂದ ನಿಯಂತ್ರಿಸಲ್ಪಡಲಿದೆ.


Click it and Unblock the Notifications








