2015 ಬಿಎಂಡಬ್ಲ್ಯು ಎಕ್ಸ್4 ನ್ಯೂಯಾರ್ಕ್ ಪ್ರವೇಶ

By Nagaraja

ನ್ಯೂಯಾರ್ಕ್ ಆಟೋ ಶೋದಲ್ಲಿ ಮಗದೊಂದು ಆಕರ್ಷಕ ಕಾರು ಪಾದಾರ್ಪಣೆ ಮಾಡಿಕೊಂಡಿದೆ. ಅದುವೇ 2015 ಬಿಎಂಡಬ್ಲ್ಯು ಎಕ್ಸ್4. ಇದು ಜರ್ಮನಿಯ ಈ ವಾಹನ ತಯಾರಕ ಸಂಸ್ಥೆಯಿಂದ ಎಕ್ಸ್ ರೇಂಜ್‌ನಲ್ಲಿ ಗುರುತಿಸಿಕೊಳ್ಳಲಿರುವ ಮಗದೊಂದು ಐಷಾರಾಮಿ ಕಾರಾಗಿರಲಿದೆ.

ಸಹಜವಾಗಿಯೇ ನೂತನ ಬಿಎಂಡಬ್ಲ್ಯು ಎಕ್ಸ್4, ಎಕ್ಸ್3 ಹಾಗೂ ಎಕ್ಸ್5 ನಡುವೆ ಗುರುತಿಸಿಕೊಳ್ಳಲಿದೆ. ಇದು ಬಿಎಂಡಬ್ಲ್ಯು ಎಕ್ಸ್6 ಸಮಾನವಾದ ವಿನ್ಯಾಸವನ್ನು ಪಡೆದುಕೊಂಡಿದೆ. ತನ್ನ ನೂತನ ಮಾದರಿಯನ್ನು 'ಸ್ಪೋರ್ಟ್ಸ್ ಆಕ್ಟಿವಿಟಿ ಕೂಪೆ' ಎಂದು ಬಿಂಬಿಸಿರುವ ಸಂಸ್ಥೆಯು, ನ್ಯೂಯಾರ್ಕ್ ಆಟೋ ಶೋದಲ್ಲಿ ಭರ್ಜರಿ ಅನಾವರಣಗೊಳಿಸಿದೆ.

BMW X4

ಅಂದ ಹಾಗೆ ನೂತನ ಬಿಎಂಡಬ್ಲ್ಯು ಎಕ್ಸ್4. 2.0 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಪಡೆದುಕೊಳ್ಳಲಿದ್ದು, 240 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಅತ್ಯಂತ ಶಕ್ತಿಶಾಲಿ 300 ಅಶ್ವಶಕ್ತಿ ಉತ್ಪಾದಿಸಬಲ್ಲ 3.0 ಲೀಟರ್, ಸಿಕ್ಸ್ ಸಿಲಿಂಡರ್ ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಯಲ್ಲೂ ಲಭ್ಯವಿರುತ್ತದೆ. ಇದು ಆಲ್ ವೀಲ್ ಡ್ರೈವ್ ಸಿಸ್ಟಂ ಸಹ ಹೊಂದಿರುತ್ತದೆ.

ನೂತನ ಎಕ್ಸ್4 ಆವೃತ್ತಿಯಲ್ಲಿ ನಾಲ್ಕು ಮಂದಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ. ಇದು ಪ್ರೀಮಿಯಂ ಮಿಡ್ ಸೈಜ್ ಸೆಡಾನ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ.

Most Read Articles

Kannada
English summary
BMW has revealed a new product in their X-range of cars, the X4. The new product will be slotted between the X3 and x5. However, we find it aesthetically similar to BMW X6.
Story first published: Saturday, April 19, 2014, 14:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X