ವೆಸ್ಪಾದಿಂದ ಇನ್ನೊಂದು ಪ್ರೀಮಿಯಂ ಸ್ಕೂಟರ್ ಸದ್ಯದಲ್ಲೇ ಲಾಂಚ್

By Nagaraja

ಕಳೆದ ಒಂದು ವರ್ಷದ ವರೆಗೂ 'ವೆಸ್ಪಾ' ಬ್ರಾಂಡ್ ಬಗ್ಗೆ ಭಾರತೀಯರು ಅಪರಿಚಿತರಾಗಿದ್ದರು. ಆದರೆ 2012ರಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟಿದ್ದ ವೆಸ್ಪಾ ನೋಡುತ್ತಿರುವಷ್ಟರಲ್ಲಿ ಭಾರಿ ಯಶಸ್ಸನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ವೆಸ್ಪಾ ಪ್ರೀಮಿಯಂ ಸ್ಕೂಟರುಗಳನ್ನು ಸ್ತ್ರೀ, ಪುರುಷ ಭೇದಭಾವವಿಲ್ಲದೆ ಎರಡು ಕೈಗಳಿಂದ ಸ್ವೀಕರಿಸಲಾಗಿತ್ತು. ಇದು ಮುಂದಿನ ದಿನಗಳಲ್ಲಿ ವೆಸ್ಪಾ ಬಗೆಗಿನ ನಿರೀಕ್ಷೆ ಇಮ್ಮಡಿಗೊಳಿಸುವಲ್ಲಿ ನೆರವಾಗಿತ್ತು.

ಸದ್ಯ ಯಶಸ್ಸಿನ ತುತ್ತ ತುದಿಗೇರಿರುವ ಇಟಲಿ ಮೂಲದ ಈ ಐಕಾನಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಪಿಯಾಜಿಯೊದ ಅತ್ಯಂತ ಜನಪ್ರಿಯ ವೆಸ್ಪಾ ಬ್ರಾಂಡ್, ನೂತನ ರೂಪ ಪಡೆದುಕೊಳ್ಳುತ್ತಿದೆ.

ಹೌದು, 2013 ಮಿಲಾನ್ ಮೋಟಾರ್ ಶೋದಲ್ಲಿ ವೆಸ್ಪಾ ಪ್ರೈಮಾವೆರಾ ಭರ್ಜರಿ ಪ್ರದರ್ಶನ ಕಂಡಿದೆ. ಇದು ವೆಸ್ಪಾ ಎಲ್‌ಎಕ್ಸ್ ಮಾದರಿಗಳಿಗೆ ಬದಲಿ ವ್ಯವಸ್ಥೆಯಾಗಿರಲಿದೆ. ಅಂದರೆ ಭಾರತದಲ್ಲಿ ಎಲ್‌ಎಕ್ಸ್ ಅಥವಾ ವಿಎಕ್ಸ್ ಆವೃತ್ತಿಗಳನ್ನು ಬದಲಾಯಿಸಲಿದೆ. ಈ ಎಲ್ಲ ಬೆಳವಣಿಗೆಗಳನ್ನು ದೇಶದ ವಾಹನ ಮಾರುಕಟ್ಟೆ ಕುತೂಹಲದಿಂದ ಎದುರು ನೋಡುತ್ತಿದೆ.

2014 ವೆಸ್ಪಾ ಪ್ರೈಮಾವೆರಾ

ಪ್ರೈಮಾವೆರಾ ಎಂಬುದು ಇಟಲಿಯ 'ಸ್ಪ್ರಿಂಗ್' ಪದವಾಗಿದೆ. ಈ ಪದವನ್ನು 1968ರ ಮಾದರಿಗೆ ಮೊದಲು ಆಳವಡಿಸಲಾಗಿತ್ತು. ಪ್ರಸ್ತುತ ಹೆಸರನ್ನೇ 2014 ಮಾದರಿಗೂ ಇಡಲಾಗುತ್ತಿದೆ.

2014 ವೆಸ್ಪಾ ಪ್ರೈಮಾವೆರಾ

ಒಟ್ಟು ಮೂರು ಎಂಜಿನ್ ವೆರಿಯಂಟ್‌ಗಳಲ್ಲಿ ಪ್ರೈಮಾವೆರಾ ಲಾಂಚ್ ಮಾಡಲಾಗಿತ್ತು. ಅವುಗಳೆಂದರೆ 50, 125 ಹಾಗೂ 150 ಸಿಸಿಗಳು.

2014 ವೆಸ್ಪಾ ಪ್ರೈಮಾವೆರಾ

ವೆಸ್ಪಾ ಪ್ರಕಾರ ಪ್ರೈಮಾವೆರಾ ಸ್ಕೂಟರುಗಳು ಪ್ರತಿ ಲೀಟರ್‌ಗೆ 64 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

2014 ವೆಸ್ಪಾ ಪ್ರೈಮಾವೆರಾ

ಹಾಗಿದ್ದರೂ ಎಲ್‌ಎಕ್ಸ್ ಮಾದರಿಯ ಕೆಲವೊಂದು ವಿನ್ಯಾಸಗಳನ್ನು 2014 ಪ್ರೈಮಾವೆರಾ ಆವೃತ್ತಿಯಲ್ಲೂ ಆಳವಡಿಸುವ ಪ್ರಯತ್ನ ಮಾಡಲಾಗಿದೆ. ಈ ಪೈಕಿ ಎಲ್‌ಎಕ್ಸ್ ಮಾದರಿಯ ಮುಖ ಆವರಣ ಪ್ರಮುಖವಾಗಿದೆ.

2014 ವೆಸ್ಪಾ ಪ್ರೈಮಾವೆರಾ

ಪರಿಷ್ಕೃತ ಸೀಟು, ಎಕ್ಸಾಸ್ಟ್ ಮಫ್ಲರ್, ಫೈ ಸ್ಪೋಕ್ ವೀಲ್ಸ್ ಹಾಗೂ ಹೆಚ್ಚು ಸ್ಥಳಾವಕಾಶವನ್ನು ಹೊಂದಿರುವ ಅಂಡರ್ ಸೀಟು ಪ್ರಮುಖ ಆಕರ್ಷಣೆಯಾಗಿದೆ.

2014 ವೆಸ್ಪಾ ಪ್ರೈಮಾವೆರಾ

ಸ್ಕೂಟರ್ ಮುಂಭಾಗದಲ್ಲಿ 200ಎಂಎಂ ಡಿಸ್ಕ್ ಬ್ರೇಕ್ ಕೊಡಲಾಗಿದೆ. ಹಾಗೆಯೇ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸೌಲಭ್ಯವಿದೆ. ಇನ್ನು ಇನ್ಸ್ರುಮೆಂಟ್ ಕ್ಲಸ್ಟರ್‌ನಲ್ಲಿ ಅನಾಲಾಗ್ ಹಾಗೂ ಎಲ್‌ಸಿಡಿ ಸೇರಿರಲಿದೆ.

2014 ವೆಸ್ಪಾ ಪ್ರೈಮಾವೆರಾ

ಅಂದ ಹಾಗೆ ವೆಸ್ಪಾ ಪ್ರೈಮಾವೆರಾ ಭಾರತ ಮಾರುಕಟ್ಟೆಯನ್ನು 2014ರಲ್ಲಿ ಪ್ರವೇಶಿಸಲಿದೆ. ಇದಕ್ಕೂ ಮೊದಲು 2014 ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿದೆ.

2014 ವೆಸ್ಪಾ ಪ್ರೈಮಾವೆರಾ

ಅಂತೆಯೇ ದರದ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರಬಂದಿಲ್ಲ. ಈ ಬಗ್ಗೆ ಬಿಡುಗಡೆ ವೇಳೆ ಸ್ಪಷ್ಟ ಚಿತ್ರಣ ಲಭಿಸುವ ನಿರೀಕ್ಷೆಯಿದೆ.

Article Published On: Monday, November 11, 2013, 16:15 [IST]
English summary
2014 Vespa Primavera unveiled at the 2013 EICMA show in Milan, Italy will make its way around the globe where it will replace the Vespa LX models. In India, Vespa could either replace the LX/VX or introduce the Primavera as a brand new model. We'll have to wait and see.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+