ನ್ಯೂಯಾರ್ಕ್‌ನಲ್ಲಿ 2015 ಹೋಂಡಾ ಎಚ್‌ಆರ್-ವಿ ಅನಾವರಣ
ಪ್ರತಿಷ್ಠಿತ 2014 ನ್ಯೂಯಾರ್ಕ್ ಆಟೋ ಶೋದಲ್ಲಿ ನೂತನ 2015 ಹೋಂಡಾ ಎಚ್‌ಆರ್‌ವಿ ಭರ್ಜರಿ ಅನಾವರಣಗೊಂಡಿದೆ. ಇದು ಹೋಂಡಾ ಫಿಟ್ ತಲಹದಿಯಲ್ಲಿ ರೂಪುಗೊಂಡಿದೆ.
ಹಲವು ಬಾರಿ ಟೀಸರ್ ಚಿತ್ರ ಈ ಬಹುನಿರೀಕ್ಷಿತ ಕ್ರಾಸೋವರ್ ಕಾರು ಕೊನೆಗೂ ನ್ಯೂಯಾರ್ಕ್‌ಗೆ ತಲುಪಿದೆ. ಇದೀಗ ಲಭಿಸಿರುವ ಮಾಹಿತಿಯಂತೆ ಹೋಂಡಾ ಎಚ್‌ಆರ್-ವಿ ಪ್ರಸಕ್ತ ಸಾಲಿನಲ್ಲೇ ಮಾರಾಟಕ್ಕೆ ಲಭ್ಯವಾಗಲಿದೆ. ಹಾಗಿದ್ದರೂ ಬಿಡುಗಡೆ ದಿನಾಂಕ ಬಗ್ಗೆ ಸ್ಪಷ್ಟ ಮಾಹಿತಿ ಬಂದಿಲ್ಲ.

ಈ ಹಿಂದೆ ಡೆಟ್ರಾಯ್ಟ್ ಮೋಟಾರು ಶೋದಲ್ಲಿ ಅರ್ಬನ್ ಎಸ್‌ಯುವಿ ಕಾನ್ಸೆಪ್ಟನ್ನು ಹೋಂಡಾ ಪರಿಚಯಿಸಿತ್ತು. ಇದೀಗ ಬಿಡುಗಡೆಯಾಗಿರುವ ಎಚ್‌ಆರ್-ವಿ ಇದಕ್ಕೆ ಸಮಾನವಾದ ಕಾನ್ಸೆಪ್ಟ್ ಆಗಿದೆ.

ಡೈಮಾಂಡ್ ರೂಪದ ಹೆಡ್‌ಲೈಟ್ ಇದರ ಪ್ರಮುಖ ಆಕರ್ಷಣೆಯಾಗಿದೆ. ಹಾಗೆಯೇ ಸೆಂಟ್ರಲ್ ಬಾರ್ ಎರಡು ಭಾಗಗಳಾಗಿ ವಿಂಗಡಿಸುತ್ತಿದೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಹಿಂದಿನ ಡೋರ್ ಹ್ಯಾಂಡಲ್ ಹಿಂಭಾಗದ ಪಿಲ್ಲರ್‌ಗೆ ಹೊಂದಿಕೊಂಡಿದೆ.

ಅಂದ ಹಾಗೆ ಹೋಂಡಾ ಎಚ್‌ಆರ್-ವಿಯಲ್ಲಿ 1.5 ಲೀಟರ್ ಪೋರ್ ಸಿಲಿಂಡ್ ಡೈರಕ್ಟ್ ಇಂಜೆಕ್ಟಡ್ ಎಂಜಿನ್ ಆಳವಡಿಸುವ ಯೋಜನೆಯನ್ನು ಈ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯು ಹೊಂದಿದೆ. ಹಾಗೆಯೇ ಸಿವಿಟಿ ಜತೆ ಟರ್ಬೊಚಾಜ್ಡ್ ವರ್ಷನ್ ಐಚ್ಛಿಕವಾಗಿರಲಿದೆ.

ಹೋಂಡಾದ ಜನಪ್ರಿಯ ಸಿಆರ್‌ವಿ ಹೋಲಿಸಿದಾದ ಎಚ್‌ಆರ್-ವಿ ಗಾತ್ರದಲ್ಲಿ ಸಣ್ಣದಾಗಿರಲಿದೆ. ಅಂತೆಯೇ ದರ, ತಂತ್ರಾಂಶ ಮುಂತಾದ ಅಗತ್ಯ ಮಾಹಿತಿಗಳನ್ನು ಬಿಡುಗಡೆ ವೇಳೆಯಷ್ಟೇ ಬಹಿರಂಗಪಡಿಸಲಿದೆ.


Click it and Unblock the Notifications








