2013 ಟೊಕಿಯೊ ಶೋದಲ್ಲಿ ಯಮಹಾ ಅಬ್ಬರ ಗ್ಯಾರಂಟಿ
ಈ ಬಾರಿಯ ಟೊಕಿಯೊ ಮೋಟಾರ್ ಶೋ ಈಗಾಗಲೇ ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಯಾಕೆಂದರೆ ಈ ಪ್ರಖ್ಯಾತ ಮೋಟಾರ್ ಶೋದಲ್ಲಿ ಯಮಹಾದಿಂದ ನಾಲ್ಕು ನೂತನ ಕಾನಪ್ಟ್‌ಗಳು ಅನಾವರಣಗೊಳ್ಳಲಿದೆ.
ಇದರಂತೆ ಎಲ್ಲ ವಾಹನ ಪ್ರಿಯರ ಗಮನ ನವೆಂಬರ್ 22ರಿಂದ ಆರಂಭವಾಗಲಿರುವ ಟೊಕಿಯೊ ಮೋಟಾರ್ ಶೋ ಮೇಲೆ ಹರಿದಿದೆ.
ಇಷ್ಟೊಂದು ಪ್ರಚಾರ ಏಕೆ? ಅನಾವರಣಗೊಳ್ಳಲಿರುವ ಕಾನ್ಸೆಪ್ಟ್‌ಗಳು:
- ಬೋಲ್ಟ್ ತಲಹದಿಯ ರೆಟ್ರೊ ಕೆಫೆ ರೇಸರ್,
- 220 ಎಲ್‌ಬಿಎಸ್ ಎಲೆಕ್ಟ್ರಿಕ್ ಸ್ಪೋರ್ಟ್ ಬೈಕ್,
- 190 ಎಲ್‌ಬಿಎಸ್ ಎಲೆಕ್ಟ್ರಿಕ್ ಡರ್ಟ್ ಬೈಕ್,
- ಎಲೆಕ್ಟ್ರಿಕ್ ವೈನೊ ಸ್ಕೂಟರ್

ಬೋಲ್ಟ್ ಕೆಫೆ
ಬೋಲ್ಟ್ ಕೆಫೆ ರೇಸರ್ ಬೈಕ್ ಉತ್ಪಾದನಾ ವರ್ಷನ್ ಪಡೆದುಕೊಳ್ಳುತ್ತಿರುವುದು ಬಹುತೇಕ ಖಚಿತವಾಗಿದೆ. ಪ್ರಸ್ತುತ ಪ್ರೊಟೊಟೈಪ್ ಮಾದರಿಯಲ್ಲಿರುವ ಬೋಲ್ಟ್ ಬೈಕ್ ಭವಿಷ್ಯದ ಕೆಫೆ ರೇಸರ್ ಎನಿಸಿಕೊಂಡರೂ ಅಚ್ಚರಿ ಪಡಬೇಕಾಗಿಲ್ಲ.

ಪಿಇಎಸ್1
ಪ್ಯಾಶನ್ ಎಲೆಕ್ಟ್ರಿಕ್ ಸ್ಟ್ರೀಟ್ ಸ್ಪೋರ್ಟ್ ಬೈಕನ್ನು ಚುಟುಕಾಗಿ ಪಿಇಎಸ್1 ಎಂದು ಹೆಸರಿಸುತ್ತಾರೆ. ಪ್ರಸ್ತುತ ಯಮಹಾದಲ್ಲಿ ದೊರಕುವ ಚಾಲನಾ ಅನುಭವವನ್ನು ಮುಂದುವರಿಸಿಕೊಂಡುವುದು ಯಮಹಾ ಗುರಿಯಾಗಿದೆ.

ಪಿಇಡಿ1
ನಾವು ಈಗಾಗಲೇ ಪಿಇಎಸ್1 ಬೈಕ್‌ಗೆ ಸಾಮತ್ಯ ಹೊಂದಿರುವ ಕಾನ್ಸೆಪ್ಟನ್ನು ಪಡೆದುಕೊಂಡಿದ್ದೇವೆ. ಪ್ರಮುಖವಾಗಿಯ ಡರ್ಟ್ ಬೈಕ್‌ಗೆ ಇಲ್ಲಿ ಮಹತ್ವ ಕೊಡಲಾಗಿದ್ದು, ಇದಕ್ಕಾಗಿ ಹೆಸರಲ್ಲೇ ಡಿ ಅಕ್ಷರ ಸೂಚಿಸಲಾಗಿದೆ. ಪಿಇಎಸ್1ರಂತೆ ಇದು ಕೂಡಾ ಎಲೆಕ್ಟ್ರಿಕ್ ವಾಹನವಾಗಿರುತ್ತದೆ.

ಯಮಹಾ ಎಲೆಕ್ಟ್ರಿಕ್ ವಿನೊ
ಯಮಹಾ ಎಲೆಕ್ಟ್ರಿಕ್ ವಿನೊ ಸ್ಕೂಟರ್ ಭವಿಷ್ಯದಲ್ಲಿ ಪ್ರಯೋಗಿಕವಾಗಿಯೂ ಹೆಚ್ಚು ಉತ್ತಮ ರೈಡಿಂಗ್ ಅನುಭವ ನೀಡುವ ಭರವೆಸನಯನ್ನು ಕಂಪನಿ ಹೊಂದಿದೆ. ಇದು ಲಿಥಯಂ-ಇಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಟ್ಟಿದೆ.


Click it and Unblock the Notifications








