ಸೆಮಾ ಶೋ ನೋಡಲು ಮಿಸ್ ಮಾಡದಿರಿ

Posted By:

ಸಾಮಾನ್ಯವಾಗಿ ಆಟೋ ಶೋಗಳೆಂದರೆ ಅಭಿಮಾನಿಗಳಿಗೊಂದು ರಸದೌತಣ ನೀಡಿದ ಅನುಭವವಾಗಿರುತ್ತದೆ. ಎಲ್ಲ ಅರ್ಥದಲ್ಲೂ ಆಟೋ ಶೋ ಕಲರ್‌ಫುಲ್ ಎನಿಸಿಕೊಂಡಿರುತ್ತದೆ.

ಅಂದ ಹಾಗೆ ಈ ಬಾರಿಯ ಅಂದರೆ 2013ನೇ ಸಾಲಿನ ಸೆಮಾ ಶೋ ಲಾಸ್ ವೇಗಾಸ್ ಕನ್ವೆಷನಲ್ ಸೆಂಟರ್‌ನಲ್ಲಿ ನೆವೆಂಬರ್ 5ರಿಂದ 8ರ ವರೆಗೆ ಸಾಗಿತ್ತು. ಈ ಸಂದರ್ಭದಲ್ಲಿ ಅನೇಕ ಕಾರು ಕಂಪನಿಗಳಿಂದ ಹಲವಾರು ನೂತನ ಕಾನ್ಸೆಪ್ಟ್‌ಗಳು ಪ್ರದರ್ಶನಗೊಂಡಿದ್ದವು.

2013 sema show

ಜಗತ್ತಿನ ಪ್ರೀಮಿಯಂ ಆಟೋ ಶೋಗಳಲ್ಲಿ ಸ್ಥಾನ ಪಡೆದುಕೊಂಡಿರುವ ಸೆಮೊ ಶೋ ಕೇವಲ ಪ್ರದರ್ಶನ ಮೇಳಕ್ಕಷ್ಟೇ ಸೀಮಿತಗೊಂಡಿಲ್ಲ. ಇಲ್ಲಿ ವಿದ್ಯಾರ್ಥಿಗಳಿಗಾಗಿ ವಿಚಾರಗೋಷ್ಠಿ, ವಿಶೇಷ ಕಾರ್ಯಕ್ರಮ ಮುಂತಾದ ಈವೆಂಟ್‌ಗಳು ನಡೆಯುತ್ತಿರುತ್ತದೆ.

2013 sema show

ಅಷ್ಟಕ್ಕೂ ಸೆಮಾ ಎಂದರೇನು? ಸ್ಪೆಷಾಲಿಟಿ ಎಕ್ಯೂಪ್‌ಮೆಂಟ್ ಮಾರ್ಕೆಟಿಂಗ್ ಅಸೋಸಿಯೇಷನ್ ಸಣ್ಣ ರೂಪದಲ್ಲಿ ಸೆಮಾ ಎಂದು ಕರೆಯಲಾಗುತ್ತದೆ.

2013 sema show

ಇದು ಜಗತ್ತಿನ ಮಾರುಕಟ್ಟೇತರದಲ್ಲಿ ನಡೆಯುವ ಅತಿ ದೊಡ್ಡ ಆಟೋ ಈವೆಂಟ್ ಆಗಿದೆ.

2013 sema show

ಇತರೆಲ್ಲ ಆಟೋ ಶೋಗಳಂತೆ ಸೆಮಾ ಶೋದಲ್ಲೂ ಕಾರು ಗರ್ಲ್ಸ್‌ಗೆ ಹೆಚ್ಚಿನ ಮಹತ್ವವಿದೆ. ಇವರೆಲ್ಲರೂ ನಿರ್ದಿಷ್ಟ ಕಾರಿಗೆ ಗರಿಷ್ಠ ಪ್ರಚಾರ ನೀಡಲು ನೆರವಾಗುತ್ತಾರೆ.

2013 sema show

ಇನ್ನು ಚರಿತ್ರೆಯತ್ತ ಕಣ್ಣಾಯಿಸಿದಾಗ 1963ನೇ ಇಸವಿಯಲ್ಲಿ ಸೆಮಾವನ್ನು ರಾಯ್ ರಿಚ್ಟರ್, ಇದ್ ಇಸ್ಕೆಂಡಿರಿಯನ್, ವಿಲ್ಲೆ ಗಾರ್ನರ್, ಬಾಬ್ ಹೆಡ್ಮನ್, ರಾಬರ್ಟ್ ಇ ವೈಮ್ಯಾನ್, ಜಾನ್ ಬಾರ್ಟ್ಲೆಟ್, ಫಿಲ್ ವೈಯಾಂಡ್, ಜೂನಿಯರ್ ಅಲ್ ಸೆಗರ್, ಡೀನ್ ಮೂನ್, ವಿಕ್ ಎಡೆಲ್‌ಬ್ರೂಕ್ ಎಂಬವರು ಸೇರಿ ಸ್ಥಾಪಿಸಿದ್ದರು.

2013 sema show

ಪ್ರಸ್ತುತ ಸೆಮಾ ಸಂಸ್ಥೆಯು ವಿಶ್ವದ್ಯಾಂತ 6383 ಕಂಪನಿಗಳ ಅಂಗತ್ವವನ್ನು ಹೊಂದಿದೆ.

2013 sema show

ಈ ಎಲ್ಲದರ ಮೂಲಕ ಕಾರು ತಯಾರಕರು, ಮಾಧ್ಯಮ, ವಿತರಕರು, ಆಕ್ಸೆಸರಿ ತಯಾರಕ ಸೇರಿದಂತೆ ಆಟೋ ಜಗತ್ತಿಗೆ ಸೇರಿದ ಎಲ್ಲರನ್ನು ಒಂದೆಡೆ ಒಟ್ಟುಸೇರಿಸುವಲ್ಲಿ ಸೆಮಾ ಯಶಸ್ಸನ್ನು ಕಂಡಿದೆ.

2013 sema show

ಇಲ್ಲಿ ಮಸಲ್, ಕ್ಲಾಸಿಕ್, ಐಷಾರಾಮಿ, ಸ್ಪೋರ್ಟ್, ಸ್ಟ್ರೀಟ್ ರಾಡ್ ಸೇರಿದಂತೆ ಎಲ್ಲ ಹೊಸತಾದ ಕಾನ್ಸೆಪ್ಟ್ ವಾಹನಗಳೂ ಪ್ರದರ್ಶನ ಕಾಣುತ್ತವೆ.

2013 sema show

ಇದು ತನ್ನ ಜತೆ ಅಂಗತ್ವ ಪಡೆದ ಸಂಸ್ಥೆಗಳಿಗೆ ತನ್ನ ವ್ಯಾಪಾರ ಕುದುರಿಸಿಕೊಳ್ಳಲು ಅತ್ಯುತ್ತಮ ವೇದಿಕೆವೊದಗಿಸಿಕೊಡುತ್ತದೆ.

2013 sema show

ಸೆಮಾ ಶೋದಲ್ಲಿ ಪ್ರದರ್ಶನ ಕಂಡ ಸೂಪರ್ ಕಾರುಗಳು

2013 sema show

ಎಚ್‌ಆರ್ ವೀಲ್ಸ್ ಫೆರಾರಿ ಎಫ್12,

2013 sema show

ರಾಲ್ಸ್ ರಾಯ್ಸ್ ಘೋಸ್ಟ್

2013 sema show

ನಿಟ್ಟೊ ಟೈರ್ ಲಿಬರ್ಟಿ ವಾಕ್ ಫೆರಾರಿ 458 ಇಟಲಿಯಾ

2013 sema show

ಸೈಬನ್ ಲಂಬೊರ್ಗಿನಿ ಅವೆಂಟಡೊರ್

2013 sema show

ಗೊಪ್ರೊ ಪಗನಿ ಹೌರಾ

2013 sema show

ಹಾಂಕೂಕ್ ಟೈರ್ಸ್ ಕೆಟಿಎಂ ಎಕ್ಸ್- ಬೊ ಆರ್

English summary
Specialty Equipment Market Association (SEMA) of the automobile aftermarket was formed in 1963.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark